Manjummel Boys: ಮಲಯಾಳಂ ಹಿಟ್‌ ಸಿನಿಮಾ ʼಮಂಜುಮ್ಮೇಲ್‌ ಬಾಯ್ಸ್‌ʼ ಹಾಟ್‌ಸ್ಟಾರ್‌ನಲ್ಲಿ-ಅಧಿಕೃತ ಮಾಹಿತಿ ನೀಡಿದ ಒಟಿಟಿ ಸಂಸ್ಥೆ

Share the Article

Manjummel Boys: ಮಲಯಾಳಂ ಹಿಟ್‌ ಸಿನಿಮಾ, ನೈಜ ಘಟನೆಯಾಧಾರಿತ, 200 ಕೋಟಿ ರೂಪಾಯಿ ಗಳಿಕೆ ಮಾಡಿದ ಚಿತ್ರ ʼಮಂಜುಮ್ಮೇಲ್‌ ಬಾಯ್ಸ್‌ʼ(Manjummel Boys) ಸಿನಿಮಾ ಒಟಿಟಿಗೆ ಎಂಟ್ರಿ ನೀಡಲು ಅಧಿಕೃತವಾಗಿ ಸಜ್ಜಾಗಿದೆ. ಹೌದು, ಈ ಕುರಿತು ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಕಡೆಯಿಂದಲೇ ಅಧಿಕೃತ ಮಾಹಿತಿ ದೊರಕಿದೆ.

ಇದನ್ನೂ ಓದಿ:  Jai Sriram Slogan: ಜೈಶ್ರೀರಾಮ್‌ ಎಂದ ವ್ಯಕ್ತಿಯ ಮೇಲೆ ಮುಸ್ಲಿಂ ಯುವಕರಿಂದ ಹಲ್ಲೆ

ಥಿಯೇಟರ್‌ನಲ್ಲಿ ಸಿನಿಮಾ ಮಿಸ್‌ ಮಾಡಿದವರು ಒಟಿಟಿಯಲ್ಲಿ ವೀಕ್ಷಿಸಬಹುದು. ಸಿನಿಮಾ ಪ್ರಿಯರಂತೂ ಈ ಸುದ್ದಿ ಕೇಳಿ ಭಾರೀ ಥ್ರಿಲ್‌ ಆಗಿದ್ದಾರೆ.

ಇದನ್ನೂ ಓದಿ:  Karnataka Rain: ಬಿರು ಬೇಸಿಗೆಯ ನಡುವೆ ವರುಣನ ಕೃಪೆ; ಏಳು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ವರದಿಗಳ ಪ್ರಕಾರ ಮೇ.3 ರಂದು ಒಟಿಟಿಯಲ್ಲಿ ರಿಲೀಸ್‌ ಆಗಲಿದೆಯೆಂದು ಹೇಳಲಾಗಿದೆ. ಈ ಚಿತ್ರದಲ್ಲಿ ಸೌಬಿನ್‌ ಶಬೀರ್‌, ಶ್ರೀನಾಥ್‌ ಭಾಸಿ, ಬಾಲು ವರ್ಗೀಸ್‌, ಗಣಪತಿ ಪೊಡುವಲ್‌ ಮೊದಲಾದ ಘಟಾನುಘಟಿ ನಾಯಕರುಗಳು ನಟಿಸಿದ್ದಾರೆ. ಈ ಚಿತ್ರ ನಿರ್ಮಾಣ ಮಾಡಿದ್ದು ಸೌಬೀರ್‌ ಶಬೀರ್‌.

ಕೊಡೆಕೆನಲ್‌ನಲ್ಲಿರುವ ʼಗುಣಕೇವ್‌ʼ ಗೆ ಭೇಟಿ ನೀಡುವ ಮಂಜುಮ್ಮೆಲ್‌ ಊರಿನ ಫ್ರೆಂಡ್ಸ್ ಗುಂಪೊಂದು ಟ್ರಿಪ್‌ ತೆರಳಿದ್ದು, ಅಲ್ಲಿ ಓರ್ವ ಫ್ರೆಂಡ್‌ ತಪ್ಪಿ ಗುಹೆ ಒಳಗೆ ಬಿದ್ದು ಹೋಗುತ್ತಾನೆ. ಆತನನ್ನು ರಕ್ಷಿಸೋ ಕೆಲಸದಲ್ಲಿ ಉಳಿದ ಫ್ರೆಂಡ್ಸ್‌ ಪಾತ್ರವೇನು? ಇದು ಈ ಚಿತ್ರದ ಜೀವಾಳ.

 

Leave A Reply