Free Food: ಮತದಾನದ ಗುರುತು ತೋರಿಸಿ, ಉಚಿತ ದೋಸೆ, ತುಪ್ಪದ ಲಾಡು ನಿಮ್ಮದಾಗಿಸಿ
Free Food: ಏಪ್ರಿಲ್ 26ರಂದು ಮತ ಚಲಾಯಿಸಿ ಬಂದವರು ಶಾಯಿಯ ಗುರುತು ತೋರಿಸಿದರೆ ಉಚಿತವಾಗಿ ತಿಂಡಿ, ಸಿಹಿ ತಿಂಡಿಗಳನ್ನು ನೀಡಲು ಕೆಲ ಹೋಟೆಲ್‌ಗಳು ತೀರ್ಮಾನಿಸಿವೆ.
ಇದನ್ನೂ ಓದಿ: Everest Masala: ಜನಪ್ರಿಯ ಮಸಾಲೆ ಪದಾರ್ಥಗಳ ನಿಷೇಧ: ವರದಿ ಕೇಳಿದ ಸರಕಾರ
ಮತದಾನ ಮಾಡುವುದನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಶಾಯಿ ಗುರುತು ತೋರಿಸುವ ಗ್ರಾಹಕರಿಗೆ ಕೆಲ ಹೋಟೆಲ್‌ಗಳಲ್ಲಿ ಉಚಿತ ತಿಂಡಿ, ಕಾಫಿ ಟೀ ನೀಡಲು ತೀರ್ಮಾನಿಸಲಾಗಿದೆ. ಅಲ್ಲದೇ ರಿಯಾಯಿತಿ ದರದಲ್ಲಿ ತಿಂಡಿ, ಸ್ವೀಟ್ಸ್, ಕೇಕ್ ಮುಂತಾದವುಗಳನ್ನು ನೀಡಲು ನಿರ್ಧರಿಸಲಾಗಿದೆ,” ಎಂದು ಬೃಹತ್ ಬೆಂಗಳೂರು
ಹೋಟೆಲ್‌ಗಳ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. “ಈ ಸಂಬಂಧ ಅನುಮತಿ ಕೋರಿ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದೆವು. ಆದರೆ ಸಮರ್ಪಕ ಒಪ್ಪಿಗೆ ನೀಡದ ಕಾರಣ ಹೈಕೋರ್ಟ್‌ಗೆ
ಅರ್ಜಿ ಸಲ್ಲಿಸಿದ್ದೆವು. ನ್ಯಾಯಾಲಯದಲ್ಲಿ ನಮ್ಮ ಕಾರ್ಯಕ್ಕೆ ಅನುಮತಿ ನೀಡಿದೆ. ಪ್ರತಿಯೊಬ್ಬರೂ ಮತದಾನ ಮಾಡುವ ಮೂಲಕ ಮತದಾನ ಪ್ರಮಾಣವನ್ನು ಹೆಚ್ಚಿಸಬೇಕಿದೆ,” ಎಂದು ಮನವಿ ಮಾಡಿದರು.
ನೃಪತುಂಗ ರಸ್ತೆಯಲ್ಲಿರುವ ನಿಸರ್ಗ ಗ್ರಾಂಡ್ ಹೋಟೆಲ್ ನಲ್ಲಿ ಏ.26ರಂದು ಮತದಾನ ಮಾಡಿ ಗುರುತು ತೋರಿಸಿದವರಿಗೆ ಬೆಣ್ಣೆ ಖಾಲಿ ದೋಸೆ, ತುಪ್ಪದ ಲಾಡು ಮತ್ತು ತಂಪು ಪಾನಕವನ್ನು ಉಚಿತವಾಗಿ ನೀಡಲಾಗುತ್ತದೆ. ಮತದಾನದ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶದಿಂದ ಉಚಿತವಾಗಿ ತಿಂಡಿ ನೀಡಲಾಗುತ್ತಿದೆ,” ಎಂದು ನಿಸರ್ಗ ಗ್ರ್ಯಾಂಡ್ ಹೋಟೆಲ್ ನ ಕೃಷ್ಣರಾಜ್ ಹೇಳಿದ್ದಾರೆ.