Helicopters Collide in Malaysia: ಆಕಾಶದಲ್ಲೇ ಡಿಕ್ಕಿ ಹೊಡೆದ ಎರಡು ಹೆಲಿಕಾಪ್ಟರ್‌ಗಳು; 10 ಮಂದಿ ಸಾವು

Share the Article

Helicopters Collide in Malaysia: ಮಲೇಷ್ಯಾದಲ್ಲಿ ನೌಕಾಪಡೆಯ ಕಾರ್ಯಕ್ರಮದ ಅಭ್ಯಾಸದ ವೇಳೆ ಎರಡು ಹೆಲಿಕಾಪ್ಟರ್ ಗಳು ಗಾಳಿಯಲ್ಲಿ ಡಿಕ್ಕಿ ಹೊಡೆದು ಪತನಗೊಂಡಿವೆ. ಮಲೇಷಿಯಾದ ನೌಕಾಪಡೆಯ ಎರಡೂ ಹೆಲಿಕಾಪ್ಟರ್‌ಗಳು ರಾಯಲ್ ಮಲೇಷಿಯನ್ ನೇವಿ ಸೆಲೆಬ್ರೇಶನ್‌ಗಾಗಿ ಅಭ್ಯಾಸ ನಡೆಸುತ್ತಿದ್ದವು. ಎರಡೂ ಹೆಲಿಕಾಪ್ಟರ್‌ಗಳಲ್ಲಿ ಕನಿಷ್ಠ 10 ಸಿಬ್ಬಂದಿ ಇದ್ದರು ಎಂದು ಸ್ಥಳೀಯ ಮಾಧ್ಯಮಗಳ ವರದಿಗಳಲ್ಲಿ ಹೇಳಲಾಗುತ್ತಿದೆ. ಜನರೆಲ್ಲ ಸತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:  Money Rules Changing: ಮೇ 1 ರಿಂದ ಹಣಕ್ಕೆ ಸಂಬಂಧಿಸಿದ ಈ ನಿಯಮಗಳ ಬದಲಾವಣೆ; ಗ್ರಾಹಕರ ಜೇಬಿಗೆ ಬೀಳಲಿದೆ ಕತ್ತರಿ

ಅಪಘಾತದಲ್ಲಿ ಜೀವ ಮತ್ತು ಆಸ್ತಿಪಾಸ್ತಿ ನಷ್ಟವಾಗಿದೆ ಎಂದು ಸ್ಥಳೀಯ ಮಾಧ್ಯಮವನ್ನು ಉಲ್ಲೇಖಿಸಿ ಬಿಬಿಸಿ ವರದಿ ಮಾಡಿದೆ. ಸ್ಥಳೀಯ ಮಾಧ್ಯಮಗಳಲ್ಲಿ ಬಿಡುಗಡೆಯಾದ ದೃಶ್ಯಗಳ ಪ್ರಕಾರ, ಎರಡು ಹೆಲಿಕಾಪ್ಟರ್‌ಗಳು ಕ್ರೀಡಾಂಗಣಕ್ಕೆ ಅಪ್ಪಳಿಸುವ ಮೊದಲು ಡಿಕ್ಕಿ ಹೊಡೆದವು. ಈ ಅಪಘಾತದ ಬಗ್ಗೆ ಹೆಚ್ಚಿನ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ.

ಇದನ್ನೂ ಓದಿ:  Heat Wave: ಮಳೆ ಮಾಯ; ರಾಜ್ಯದಲ್ಲಿ ಮತ್ತೆ ಐದು ದಿನ ಉಷ್ಣಮಾರುತ ಹೆಚ್ಚಳ; ಬಿಸಿಗಾಳಿ ಎದುರಿಸಲು ಸಜ್ಜಾಗಿ

 

Leave A Reply