Home Karnataka State Politics Updates K.S.Eshwarappa: ಬಿಜೆಪಿಯಿಂದ 6 ವರ್ಷ ಉಚ್ಛಾಟನೆ; ಇದಕ್ಕೆ ಹೆದರುವುದಿಲ್ಲ-ಗುಡುಗಿದ ಈಶ್ವರಪ್ಪ

K.S.Eshwarappa: ಬಿಜೆಪಿಯಿಂದ 6 ವರ್ಷ ಉಚ್ಛಾಟನೆ; ಇದಕ್ಕೆ ಹೆದರುವುದಿಲ್ಲ-ಗುಡುಗಿದ ಈಶ್ವರಪ್ಪ

K S Eshwarappa

Hindu neighbor gifts plot of land

Hindu neighbour gifts land to Muslim journalist

K.S.Eshwarappa: ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿರುವ ಕೆ.ಎಸ್‌.ಈಶ್ವರಪ್ಪ ಅವರನ್ನು ನಿನ್ನೆಯಷ್ಟೇ ಬಿಜೆಪಿ ಪಕ್ಷ 6 ವರ್ಷ ಉಚ್ಛಾಟನೆ ಮಾಡಿದೆ. ಈ ಕುರಿತು ಇದೀಗ ಈಶ್ವರಪ್ಪ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ:  Health Tips: ಈರುಳ್ಳಿ ತಿಂದಾಗ ಬಾಯಿ ವಾಸನೆಯನ್ನು ಹೀಗೆ ನಿವಾರಣೆ ಮಾಡಿ !!

“ಬಿಜೆಪಿಯಿಂದ ಉಚ್ಛಾಟನೆ ಮಾಡಿರುವುದಕ್ಕೆ ಹೆದರುವುದಿಲ್ಲ. ಉಚ್ಛಾಟನೆ ಮಾಡಿರುವ ಆದೇಶ ನನಗೆ ಸಿಕ್ಕಿಲ್ಲ. ಮಾಧ್ಯಮಗಳಿಂದ ಇದು ಗೊತ್ತಾಗಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ:  Death News: ಕೆರೆ ಸ್ವಚ್ಚಗೊಳಿಸುವಾಗ ನೀರಲ್ಲಿ ಮುಳುಗಿ ವ್ಯಕ್ತಿ ಸಾವು

ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಲು ಕೈ ಎತ್ತುವೆ, ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದು ನಿಶ್ಚಿತ. ನಾಮಪತ್ರ ವಾಪಸ್‌ ಪಡೆಯದೇ ಕಣದಲ್ಲಿ ಉಳಿದಿದ್ದೇನೆ. ನಾಳೆಯಿಂದ ಪ್ರಚಾರ ಕಾರ್ಯವನ್ನು ಮತ್ತಷ್ಟು ಬಿರುಸಾಗಿ ಕೈಗೊಳ್ಳುವೆ ಎಂದು ಅವರು ಹೇಳಿದರು.

ಯಡಿಯೂರಪ್ಪ ಮತ್ತು ಮಕ್ಕಳ ಕೈಯಲ್ಲಿರುವ ಪಕ್ಷವನ್ನು ಮುಕ್ತ ಮಾಡಲು ನಾನು ಚುನಾವಣೆಗೆ ಸ್ಪರ್ಧಿಸಿದ್ದೇನೆ ಎಂದು ಹೇಳಿದ್ದಾರೆ.