Parliament Election: ಪುಷ್ಪ-2 ನ ಪೋಸ್ಟರ್‌ ಗೆಟಪ್ಪಿನಲ್ಲಿ ಪ್ರಧಾನಿ ಮೋದಿ, ಮೋದಿಯ ಹೊಸ ಲುಕ್ ನೋಡಿ ಹುಚ್ಚೆದ್ದು ಹೋದ ಅಭಿಮಾನಿಗಳು, ಫೋಟೋ ವೈರಲ್‌ !

Share the Article

Parliament Election: ಲೋಕಸಭಾ ಚುನಾವಣೆಯ ಪ್ರಚಾರದ ಅಬ್ಬರ ಮಿತಿ ಮೀರಿದ್ದು, ಸೋಶಿಯಲ್ ಮೀಡಿಯಾ ಏಕಾಏಕಿ ಬಿಸಿಯಾಗಿದೆ. ಯುದ್ದದ ಅಖಾಡದಲ್ಲಿ ಬೃಹತ್ ಸಮಾವೇಶಗಳ ಜತೆಜತೆಗೆ ಸೋಷಿಯಲ್ ಮೀಡಿಯಾದಲ್ಲಿ ಆರೋಪ ಪ್ರತ್ಯಾರೋಪ, ಹೊಗಳಿಕೆ ತೆಗಳಿಕೆಗಳ ಮಹಾಪೂರ ಹರಿವು ಬರುತ್ತಿದೆ. ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಹವಾ ಹೇಗಿದೆ ಅಂದ್ರೆ ಮೋದಿ ಫೋಟೋಗೆ ಅವರ ಕಟ್ಟರ್ ಅಭಿಮಾನಿಗಳು ಪುಷ್ಪ ಚಿತ್ರದ ಕಲಾತ್ಮಕ ಟಚ್‌ ಕೊಟ್ಟಿದ್ದು, ಮೋದಿಯ ಈ ಹೊಸ ಲುಕ್ ಸಖತ್ ವೈರಲ್ ಆಗಿದೆ. ಪುಷ್ಪ 2 ಮೂಲಕ ಪುಷ್ಪ ಜತೆಗೆ ಮೋದಿ ಕೂಡಾ ರಿಟರ್ನ್ಸ್ ಎಂದು ಮೋದಿಯ ಅಭಿಮಾನಿಗಳು ಜಾಲತಾಣದಲ್ಲಿ ಹುಯಿಲೆಬ್ಬಿಸುತ್ತಿದ್ದಾರೆ.

ಇದನ್ನೂ ಓದಿ: Rolls Royce car: ಒಂದು ರೋಲ್ಸ್ ರಾಯ್ಸ್ ಕಾರು ತಯಾರಿಸಲು ಬೇಕು 8 ಗೂಳಿಗಳ ಚರ್ಮ – ಸೋ ಒಂದು ಕಾರಿಗೆ ಬೀಳುತ್ತೆ 8 ಗೂಳಿಗಳ ಬಲಿ !!

ತೆಲುಗಿನ ಸ್ಟಾರ್ ನಟ ಅಲ್ಲು ಅರ್ಜುನ್ ಅವರ ಸೂಪರ್ ಡೂಪರ್ ಚಿತ್ರ ಪುಷ್ಪದ ಎರಡನೆಯ ಅವತರಿಣಿಕೆ ಪುಷ್ಪ 2 ಚಿತ್ರದ ಹೊಸ ಪೋಸ್ಟರ್ ಇತ್ತೀಚೆಗೆ ರಿಲೀಸ್ ಆಗಿತ್ತು. ಅದೇ ಪೋಸ್ಟರ್‌ ನ್ನು ತಮಗೆ ಬೇಕಾದಂತೆ ಎಡಿಟ್ ಮಾಡಿರುವ ಅಭಿಮಾನಿಗಳು ಪ್ರಧಾನಿ ಮೋದಿಯವರಿಗೆ ಸೋಶಿಯಲ್ ಮೀಡಿಯಾದಲ್ಲಿ ಹೊಸ ಲುಕ್ಕನ್ನು ನೀಡಿದ್ದಾರೆ. ಆ ಹೊಸ ಲುಕ್ ನೋಡಿ ಮೋದಿ ಅಭಿಮಾನಿಗಳಂತೂ ಹುಚ್ಚೆದ್ದು ಹೋಗಿದ್ದಾರೆ.

ಪುಷ್ಪ 2 – ಮೋದಿಯನ್ನು ಅವರ ಫ್ಯಾನ್ಸ್ ಮೀಡಿಯಾದಲ್ಲಿ ವೈರಲ್ ಮಾಡುತ್ತಿದ್ದಾರೆ. ಪುಷ್ಪ 2 ನ ಅಲ್ಲು ಅರ್ಜುನ್ ಪೋಸ್ಟರ್‌ಗೆ ನರೇಂದ್ರ ಮೋದಿ ಅವರ ಮುಖ ಕೊಟ್ಟು ಬಣ್ಣ.ಬಳಿದು ಫೇಕ್ ಸೃಷ್ಟಿಸಲಾಗಿದೆ. “ಐಕಾನ್ ಸ್ಟಾರ್ ಆಗಿ ನರೇಂದ್ರ ದಾಮೋದರ್ ದಾಸ್ ಮೋದಿ” ಎಂದು ಪರಿಚಯ ಬೇರೆ ಹಾಕಲಾಗಿರುವ ಪೋಸ್ಟರ್ ವೈರಲ್ ಆಗಿದೆ. ಜತೆಗೆ, ಪುಷ್ಪ ಬದಲು ಭಾಜ್ಪ (BJP) ದಿ ರೂಲ್ ಅನ್ನೋ ಕ್ಯಾಪ್ಶನ್‌ ಬೇರೆ !!!

Leave A Reply