Arecanut Price: ಅಡಿಕೆ ಬೆಲೆಯಲ್ಲಿ ಬಂಪರ್ ಏರಿಕೆ !!
Arecanut Price: ಕಳೆದ ಕೆಲವು ದಿನಗಳಿಂದ ಸ್ಥಿರತೆ ಕಾಯ್ದುಕೊಂಡಿದ್ದ ಅಡಿಕೆ ಬೆಲೆ(Arecanut Price:)ಯಲ್ಲಿ ಇದೀಗ ಮತ್ತೆ ಬಂಪರ್ ಏರಿಕೆ ಕಂಡಿದ್ದು ಸಾಕಷ್ಟು ಏರಿಳಿತ ನಡುವೆ ಮತ್ತೆ 50 ಸಾವಿರ ಗಡಿ ತಲುಪಿದೆ.
ಇದನ್ನೂ ಓದಿ: Lifestyle: ಲೈಂಗಿಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಈ ಆಹಾರಗಳು ಅದ್ಭುತವಾಗಿ ಕೆಲಸ ಮಾಡುತ್ತವೆ : ಅವು ಯಾವುವು ಗೊತ್ತಾ ?
ಹೌದು, ರಾಜ್ಯದ ಪ್ರಮುಖ ಅಡಿಕೆ ಮಾರುಕಟ್ಟೆಯಾದ ದಾವಣಗೆರೆ(Davanagere) ಯಲ್ಲೆ ನಿನ್ನೆ (ಏ.12) ಅಡಿಕೆ ಬೆಲೆಯು 300 ರೂ. ಗಳಷ್ಟು ಏರಿಕೆ ಕಂಡಿದೆ. ರಾಶಿ ಅಡಿಕೆ ಗರಿಷ್ಠ ಬೆಲೆ ಕ್ವಿಂಟಲ್ ಗೆ 49,915 ರೂ.ಗಳಿದ್ದು, ಕನಿಷ್ಠ ಬೆಲೆ 48,899 ರೂ.ಗಳಾಗಿದೆ.
ಇದನ್ನೂ ಓದಿ: Iran-Israel: ಮಧ್ಯಪ್ರಾಚ್ಯ ಉದ್ವಿಗ್ನ : ಇರಾನ್, ಇಸ್ರೇಲ್‌ಗೆ ಪ್ರಯಾಣಿಸದಂತೆ ಭಾರತೀಯರಿಗೆ ವಿದೇಶಾಂಗ ಇಲಾಖೆಯಿಂದ ಸೂಚನೆ
ಹಿಂದಿನ ದಿನ ಮಾರುಕಟ್ಟೆಯಲ್ಲಿ ಗರಿಷ್ಠ 49,699 ರೂಪಾಯಿ ಇತ್ತು. ಏಪ್ರಿಲ್ ತಿಂಗಳ ಆರಂಭದಿಂದಲೂ ದರ ಸತತ ಏರಿಕೆ ಕಾಣುತ್ತಿದೆ. ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾದ ಚನ್ನಗಿರಿ ವಹಿವಾಟಿನಲ್ಲಿ ಏಪ್ರಿಲ್ 12ರಂದು ಪ್ರತಿ ಕ್ವಿಂಟಲ್ ಉತ್ತಮ ರಾಶಿ ಅಡಿಕೆ ಕನಿಷ್ಠ ಬೆಲೆ 48,900 ರೂ, ಗರಿಷ್ಠ ಬೆಲೆ 49,915 ಹಾಗೂ ಸರಾಸರಿ ಬೆಲೆ 49,627ರೂ.ಗೆ ಮಾರಾಟವಾಗಿದೆ. ಕಳೆದ ವರ್ಷ (2023) ಜುಲೈ ತಿಂಗಳಲ್ಲಿ ಗರಿಷ್ಠ 57 ಸಾವಿರ ತಲುಪಿತ್ತು. ಹೀಗಾಗಿ ಸ್ವಲ್ಪ ದಿನ ಇಟ್ಟು ಮಾರಾಟ ಮಾಡುವವರಿಗೆ ಮುಂದೆ ಒಳ್ಳೆಯ ರೇಟ್ ಸಿಗುವ ಸಾಧ್ಯತೆ ಇದೆ.
ಆದರೀಗ ಈ ಬಿರು ಬೇಸಿಗೆಯಲ್ಲಿ ಅಂತರ್ಜಲ ಕುಸಿತ ರೈತರ ನಿದ್ದೆಗೆಡಿಸಿದೆ. ಎಲ್ಲೆಂದರಲ್ಲಿ ಬೋರ್ವೆಲ್ ಗಳ ನೀರು ನಿಲ್ಲುತ್ತಿದೆ. 1000 ಅಡಿ ಕೊರೆಸಿದರೂ ನೀರು ಬರುತ್ತಿಲ್ಲ. ಕೆರೆ, ಕಟ್ಟೆಗಳಲ್ಲೂ ನೀರು ಕಾಲಿ ಆಗಿದೆ. ಸದ್ಯಕ್ಕೆ ಒಳ್ಳೆಯ ಮಳೆ ಆಗುವ ಯಾವ ಲಕ್ಷಣ ಕೂಡ ಇಲ್ಲ. ಹೀಗೆ ಮುಂದುವರೆದರೆ ಒಂದುಕಡೆಯಿಂದ ಅಡಿಕೆ ನಾಶವಾಗಬಹುದು.