BJP: ಈಶ್ವರಪ್ಪಗೆ ಬಿಗ್ ಶಾಕ್ ಕೊಟ್ಟ ಬಿಜೆಪಿ !!
BJP: ಈಶ್ವರಪ್ಪ (K.S Eshwarappa) ಅವರ ಬಂಡಾಯ ಸ್ಪರ್ಧೆಯಿಂದ ಆಕ್ರೋಶಗೊಂಡಿರುವ ಬಿಜೆಪಿ ನಾಯಕರು ಇದೀಗ ಈಶ್ವರಪ್ಪನವರ ವಿರುದ್ಧ ಸಮರ ಸಾರಿದಂತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಬಿಜೆಪಿ (BJP) ರಾಜ್ಯ ಚುನಾವಣಾ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್ (Radha Mohan Das Agarwal) ಅವರು ‘ಈಶ್ವರಪ್ಪನವರು ಅಂದ್ರೆ ಯಾರು? ಅಂತಹ ಹೆಸರಿನ ಯಾವ ವ್ಯಕ್ತಿಯೂ ನನಗೆ ಗೊತ್ತಿಲ್ಲ ಎಂದು’ ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: Telecom: ಚುನಾವಣೆ ನಂತರ ಮೊಬೈಲ್ ಸೇವಾ ಶುಲ್ಕ ಏರಿಕೆ ಸಂಭವ
ಮಗನಿಗೆ ಲೋಕಸಭಾ ಚುನಾವಣೆ (Lok Sabha Election) ಸಿಗದ ಕಾರಣ ಬಿಜೆಪಿ ವಿರುದ್ಧ ಬಂಡಾಯ ಎದ್ದಿರುವ ಕೆಎಸ್ ಈಶ್ವರಪ್ಪ (KS Eshwarappa) ಶಿವಮೊಗ್ಗದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಬಿಜೆಪಿ ಹಿರಿಯ ನಾಯಕರ ಜೊತೆ ಮಾತುಕತೆ ನಂತರವೂ ಈಶ್ವರಪ್ಪ ತಮ್ಮ ನಿರ್ಧಾರದಿಂದ ಹಿಂದೆ ಸರಿಯುವ ಮಾತಿಲ್ಲ ಎಂದು ತಿಳಿಸಿದ್ದಾರೆ. ಅಲ್ಲದೆ ಯಡಿಯೂರಪ್ಪ ಹಾಗೂ ಕುಟುಂಬ ರಾಜಕಾರಣದ ವಿರುದ್ಧ ಕಿಡಿಕಾರುತ್ತಾ ಕೇಂದ್ರ ನಾಯಕರನ್ನೂ ಮಧ್ಯ ಎಳೆದು ತರುತ್ತಿದ್ದಾರೆ. ಈ ಮಧ್ಯೆ ರಾಜ್ಯ ಚುನಾವಣಾ ಉಸ್ತುವಾರಿ ವಹಿಸಿಕೊಂಡಿರುವ ರಾಧಾಮೋಹನ್ ದಾಸ್ ಅಗರ್ವಾಲ್ (Radhamohna Das Agarwall) ಕರ್ನಾಟಕ್ಕೆ ಬಂದಿದ್ದು, ಬೀದರ್ ನಲ್ಲಿ ಮಾತನಾಡುತ್ತಾ ಈಶ್ವರಪ್ಪ ಬಂಡಾಯದ ಬಗ್ಗೆ ಕೇಳಿದ್ದಕ್ಕೆ ಆ ವ್ಯಕ್ತಿ ಯಾರು, ನನಗೆ ಆ ಹೆಸರಿನ ಯಾರೊಬ್ಬರು ಗೊತ್ತಿಲ್ಲ ಎಂದು ಈಶ್ವರಪ್ಪ ಬಂಡಾಯಕ್ಕೆ ಸೆಡ್ಡು ಹೊಡೆದಿದ್ದಾರೆ. ಈ ಮೂಲಕ ಕೇಂದ್ರ ನಾಯಕರು ಈಶ್ವರಪ್ಪನವರನ್ನು ಸಂಪೂರ್ಣವಾಗಿ ಬದಿಗೆ ಸರಿಸಿದ್ದಾರೆ, ಇದ್ದ ಪ್ರಾಮುಖ್ಯತೆಯೂ ಮುಗಿದು ಹೋಗಿದೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಈಶ್ವರಪ್ಪನಿಗೆ ಬಿಜೆಪಿ ಬಿಗ್ ಶಾಕ್ ನೀಡಿದೆ.
ಇನ್ನು ಮೋದಿ ಫೋಟೋ ಬಳಸುತ್ತಿರುವ ವಿಚಾರಕ್ಕೆ, ಈ ಸೌಭಾಗ್ಯ ಎಲ್ಲಿ ಬರುತ್ತದೆ. ಕಾಂಗ್ರೆಸ್‍ನವರೇ ಮೋದಿ ಫೋಟೋ ಹಾಕ್ತಿದ್ದಾರೆ. ಎಡಿಎಂಕೆ, ಡಿಎಂಕೆ ಎಲ್ಲಾ ಪಕ್ಷದವರು ಮೋದಿ (Narendra Modi) ಫೋಟೋ ಬಳಸುತ್ತಿದ್ದಾರೆ. ಇದು ಒಳ್ಳೆಯ ಸಂಗತಿ ಎಂದಿದ್ದಾರೆ. ಅಲ್ಲದೆ ಈಶ್ವರಪ್ಪ ನಾಮಪತ್ರ ಹಾಕಿ ತಪ್ಪು ಮಾಡದೋದು ಬಿಟ್ಟು, ತಮ್ಮ ನಾಮಪತ್ರ ವಾಪಸ್ ಪಡೆದು, ತಮ್ಮ ತಪ್ಪು ತಿದ್ದಿಕೊಳ್ಳಬಹುದು. ಇದು ಈಶ್ವರಪ್ಪ ಸುಧಾರಣೆಗೆ ಬಿಜೆಪಿ ನೀಡುವ ಅವಕಾಶವಾಗಿ ಎಂದು ಈಶ್ವರಪ್ಪಗೆ ಟಾಂಗ್ ನೀಡಿದರು.