PUC Result Helpline: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ; ಸಂದೇಹ, ಗೊಂದಲಗಳಿಗೆ ಈ ಸಂಖ್ಯೆ ಡಯಲ್‌ ಮಾಡಿ

PUC Result Helpline: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ ಮಾಡಿದೆ. ವಿದ್ಯಾರ್ಥಿಗಳಿಗೆ ಫಲಿತಾಂಶದ ಕುರಿತು ಅಥವಾ ಮರು ಪರೀಕ್ಷೆ ವಿಷಯದ ಕುರಿತು ಅಥವಾ ಬೇರೆ ಯಾವುದೇ ಸಂದೇಹಗಳಿದ್ದರೆ ವಿದ್ಯಾರ್ಥಿಗಳು/ಪೋಷಕರು ಮಂಡಳಿ ನೀಡಿದ ಸಹಾಯವಾಣಿ ಸಂಖ್ಯೆಯನ್ನು ಸಂಪರ್ಕ ಮಾಡಲು ಹೇಳಲಾಗಿದೆ.

ಇದನ್ನೂ ಓದಿ: Liquor Ban: ಎಣ್ಣೆ ಪ್ರಿಯರೇ ಗಮನಿಸಿ; ಎರಡು ದಿನ ಮದ್ಯದಂಗಡಿ ಬಂದ್‌

ಮರು ಪರೀಕ್ಷೆ, ಪರೀಕ್ಷೆ ಫಲಿತಾಂಶ, ವಿದ್ಯಾರ್ಥಿಗಳು ತಮ್ಮ ಫಲಿತಾಂಶ ಉತ್ತಮಪಡಿಸಕೊಳ್ಳಲು ಮರುಪರೀಕ್ಷೆ, ಹಾಗೂ ಒಂದೊಂದು ಸಬ್ಜೆಕ್ಟ್‌ಗೆ ನೀಡಬೇಕಾದ ಶುಲ್ಕದ ಕುರಿತು ಈ ಕೆಳಗೆ ನೀಡಿದ ಸಹಾಯವಾಣಿಯನ್ನು ಸಂಪರ್ಕ ಮಾಡಬಹುದು.

ಇದನ್ನೂ ಓದಿ: K S Eshwarappa: ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡು, ನಾನು ಸ್ಪರ್ಧೆಯಿಂದ ಹಿಂದೆ ಸರಿಯುತ್ತೇನೆ – ಕೆ ಎಸ್ ಈಶ್ವರಪ್ಪ !!

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಸಹಾಯವಾಣಿ ಸಂಖ್ಯೆ 080- 23310075 ಅಥವಾ 080- 23310076

ಈ ವರ್ಷ 2024ರ ಮಾರ್ಚ್ 1ರಿಂದ ಮಾರ್ಚ್ 22 ರವರೆಗೆ ನಡೆದಿದ್ದ ವಿಜ್ಞಾನ, ಕಲೆ ಮತ್ತು ವಾಣಿಜ್ಯ ವಿಭಾಗಗಳಿಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆಗಳಿಗೆ (Second PUC Exam) ರಾಜ್ಯದಾದ್ಯಂತ 6,81,079 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು. ಒಟ್ಟು 1,124 ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇವರಲ್ಲಿ ಒಟ್ಟು 5,52, 690 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ ಎಂದು ಇಲಾಖೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದೆ.

Leave A Reply

Your email address will not be published.