Ajmeer: ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಶಾಲಾ ವಿದ್ಯಾರ್ಥಿನಿಗೆ ಬೋರ್ಡ್‌ ಪರೀಕ್ಷೆ ಬರೆಯಲು ನಿರಾಕರಿಸಿದ ಶಾಲೆ

Ajmeer: ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಶಾಲಾ ವಿದ್ಯಾರ್ಥಿನಿಯೊಬ್ಬಳಿಗೆ ಬೋರ್ಡ್‌ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡದೆ ಸತಾಯಿಸಿರುವ ಘಟನೆಯೊಂದು ನಡೆದಿದೆ. ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಈಕೆ ಶಾಲೆಗೆ ಬಂದರೆ ಶಾಲೆಯ ವಾತಾವರಣ ಹಾಳಾಗುತ್ತದೆ ಎಂದು ಈಕೆಗೆ ಮನೆಯಲ್ಲಿಯೇ ಕಲಿಯಲು ಶಾಲೆ ಹೇಳಿತ್ತು. ಇದಾದ ನಂತರ ಇದೀಗ ಈಕೆ ಬೋರ್ಡ್‌ ಪರೀಕ್ಷೆಗೆ ಹಾಜರಾಗಲೆಂದು ಬಂದರೆ ಶಾಲೆ ಅವಕಾಶ ಮಾಡಿಕೊಡದೇ ನಾಚಿಕೆಗೇಡಿನ ಕೆಲಸ ಮಾಡಿರುವಂತಹ ಘಟನೆಯೊಂದು ಬೆಳಕಿಗೆ ಬಂದಿದೆ. ಈ ಹೀನಾಯ ಕೃತ್ಯ ನಡೆದಿರುವುದು ರಾಜಸ್ಥಾನದ ಅಜ್ಮೀರ್‌ನಲ್ಲಿ.

ಈ ಕುರಿತು ಇದೀಗ ಸಂತ್ರಸ್ತೆ ಮಕ್ಕಳ ಕಲ್ಯಾಣ ಸಮಿತಿಗೆ ಪತ್ರ ಬರೆದಿದ್ದಾಳೆ. ಇದಾದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಸಂತ್ರಸ್ತೆ ಜೊತೆ ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿತ್ತು. ನಂತರ ಈ ಕುರಿತು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ಕೂಡಾ ದಾಖಲಾಗಿತ್ತು.

ಅನಂತರ ಈಕೆ ಶಾಲೆಗೆಂದು ಆಗಮಿಸಿದಾಗ, ಶಾಲಾ ಶಿಕ್ಷಕರು ನಿರಾಕರಿಸಿದ್ದಾರೆ. ಈಕೆ ಬಂದರೆ ಶಾಳಾ ವಾತಾವರಣ ಹಾಳಾಗುತ್ತದೆ ಎಂದು ಮನೆಗೆ ಕಳುಹಿಸಿ, ಮನೆಯಲ್ಲೇ ಓದು ಎಂದು ಹೇಳಿ, ಪರೀಕ್ಷೆ ಬರೆದರೆ ಆಯಿತು ಎಂದು ಕಳುಹಿಸಿದ್ದಾರೆ.

4 ತಿಂಗಳ ನಂತರ ಬೋರ್ಡ್ ಪರೀಕ್ಷೆಗಳು ಪ್ರಾರಂಭವಾಗುತ್ತಿದ್ದಂತೆ, ಸಂತ್ರಸ್ತೆಗೆ ಶಾಲಾ ಆಡಳಿತ ಮಂಡಳಿಯಿಂದ ಬೋರ್ಡ್ ಪರೀಕ್ಷೆಯ ಪ್ರವೇಶ ಪತ್ರವನ್ನೂ ನಿರಾಕರಿಸಲಾಗಿದೆ. ಪ್ರಕರಣದ ಗಂಭೀರತೆಯನ್ನು ಅರಿತ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ಅಂಜಲಿ ಶರ್ಮಾ ಅವರು ಘಟನೆಯ ಬಗ್ಗೆ ತಕ್ಷಣ ಪರಿಶೀಲನೆ ನಡೆಸಿದ್ದು, ವಿದ್ಯಾರ್ಥಿನಿಯ ವಿದ್ಯಾಭ್ಯಾಸಕ್ಕೆ ಚ್ಯುತಿ ಬಾರದಂತೆ ನೋಡಿಕೊಂಡಿದ್ದಾರೆ. ಈ ಮೂಲಕ ಬೋರ್ಡ್‌ ಪರೀಕ್ಷೆ ಮುಗಿದಿದ್ದರೂ, ಮಕ್ಕಳ ಕಲ್ಯಾಣ ಸಮಿತಿಯು ಮಂಡಳಿಯ ಪೂರಕ ಪರೀಕ್ಷೆಗಳಿಗೆ ಹಾಜರಾಗಲು ಸಂತ್ರಸ್ತರಿಗೆ ಅವಕಾಶ ನೀಡಲು ಪ್ರಯತ್ನಿಸುತ್ತಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: Kadaba: ಎದೆಹಾಲು ಉಣಿಸುವಾಗ ಮಗು ಆಕಸ್ಮಿಕ ಸಾವು; ಖಿನ್ನತೆಗೆ ಜಾರಿದ ತಾಯಿ ಆತ್ಮಹತ್ಯೆ

Leave A Reply

Your email address will not be published.