HD Kumarswamy: ಕುಮಾರಸ್ವಾಮಿಗಿಂತಲೂ ಹೆಂಡತಿಯೇ ಹೆಚ್ಚು ಶ್ರೀಮಂತೆ – HDK ಒಟ್ಟು ಆಸ್ತಿ ಎಷ್ಟು?!

Share the Article

HD Kumarswamy: ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಮಂಡ್ಯ ಲೋಕಸಭಾ ಕ್ಷೇತ್ರದ ಬಿಜೆಪಿ-ಜೆಡಿಎಸ್(BJP) ಮೈತ್ರಿ ಅಭ್ಯರ್ಥಿಯಾಗಿ ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ. ಜೊತೆಗೆ ಅಫಿಡವಿಟ್ ನಲ್ಲಿ ಒಟ್ಟು 217.21 ಕೋಟಿ ರೂಪಾಯಿ ಆಸ್ತಿ ಹೊಂದಿರುವುದಾಗಿ ಘೋಷಿಸಿದ್ದಾರೆ. ಆದರೆ ಕುಮಾರಸ್ವಾಮಿ ಅವರಿಗಿಂತ ಅವರ ಹೆಂಡತಿಯೇ ಹೆಚ್ಚು ಶ್ರೀಮಂತಳಾಗಿದ್ದಾರೆ.

ಇದನ್ನೂ ಓದಿ: Road Accident: ಬೆಂಗಳೂರಿನಲ್ಲಿ ಭಯಾನಕ ಆಕ್ಸಿಡೆಂಟ್‌; ಸ್ಕೂಟರ್‌ ಸವಾರನ ಮೇಲೆ ಎರಗಿದ ಕೋಲೆ ಬಸವ

ರಾಜ್ಯ ರಾಜಕಾರಣದಿಂದ ರಾಷ್ಟ್ರ ರಾಜಕಾರಣದತ್ತ ಮುಖ ಮಾಡಿರುವ ಎಚ್ ಡಿ ಕುಮಾರಸ್ವಾಮಿ(H D kumarswamy) ಅವರು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಾರ್ಚ್ 4ರಂದು ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ತಮ್ಮ ಉಮೇದುರಾರಿಕೆ ಅಫಿಡವಿಟ್ ತಮ್ಮ ಆಸ್ತಿ ವಿವರ ಸಹ ಘೋಷಿಸಿಕೊಂಡಿದ್ದು, ಬರೋಬ್ಬರಿ 217.21 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. ವಿಶೇಷ ಅಂದ್ರೆ ಕಳೆದ ವರ್ಷಕ್ಕಿಂತ ಈ ಕುಮಾರಸ್ವಾಮಿ ಆಸ್ತಿ ಮೌಲ್ಯ 50.07 ಕೋಟಿ ರೂ. ಹೆಚ್ಚಳವಾಗಿದೆ. ಜೊತೆಗೆ ದ್ದಅವರ ಪತ್ನಿಯೇ ಅವರಿಗಿಂತ ಹೆಚ್ಚು ಸಿರಿವಂತರಾಗಿದ್ದಾರೆ.

ಇದನ್ನೂ ಓದಿ: KSRTC Special Bus: ಯುಗಾದಿ ಹಬ್ಬಕ್ಕೆ ಕೆಎಸ್‌ಆರ್‌ಟಿಸಿಯಿಂದ ಪ್ರಯಾಣಿಕರಿಗೆ ಶುಭ ಸುದ್ದಿ

• ಎಚ್‌ಡಿ ಕುಮಾರಸ್ವಾಮಿ ಆಸ್ತಿ ವಿವರ:

ಒಟ್ಟು: ₹62.82 ಕೋಟಿ

ಚರಾಸ್ತಿ- ₹10.71 ಕೋಟಿ

ಸ್ತಿರಾಸ್ತಿ- ₹43.94 ಕೋಟಿ

ವಿವಿಧ ಕಡೆ ಸಾಲ – ₹19.12ಕೋಟಿ.

₹6.97 ಕೋಟಿ ಹೆಚ್ಡಿಕೆ(HUF)

1.20 ಕೋಟಿ ಹೆಚ್ಡಿಕೆ(HUF)

₹47 ಲಕ್ಷ ಮೌಲ್ಯದ 750 ಗ್ರಾಂ ಚಿನ್ನಾಭರಣ.

₹9.62ಲಕ್ಷ ಮೌಲ್ಯದ 12.5ಕೆಜಿ ಬೆಳ್ಳಿ.

₹ 2.60ಲಕ್ಷ ಮೌಲ್ಯದ 4 ಕ್ಯಾರೆಟ್ ವಜ್ರ.

• ಅನಿತಾ ಕುಮಾರಸ್ವಾಮಿ ಆಸ್ತಿ ಹೀಗಿದೆ 

ಒಟ್ಟು ಆಸ್ತಿ ₹154.39 ಕೋಟಿ

ಚರಾಸ್ತಿ- ₹90.32 ಕೋಟಿ.

ಸ್ತಿರಾಸ್ತಿ- ₹64.07 ಕೋಟಿ.

ಸಾಲ- ₹63.05 ಕೋಟಿ.

₹2.41ಕೋಟಿ ಮೌಲ್ಯದ 3.8ಕೆಜಿ ಚಿನ್ನಾಭರಣ.

₹13 ಲಕ್ಷ ಮೌಲ್ಯದ 17 ಕೆಜಿ ಬೆಳ್ಳಿ.

₹33ಲಕ್ಷ ಮೌಲ್ಯದ 50 ಕ್ಯಾರೆಟ್ ಡೈಮಂಡ್.

Leave A Reply