Anganawadi: ಹೆಚ್ಚಿದ ತಾಪಮಾನ; ರಾಜ್ಯದ ಈ 8 ಜಿಲ್ಲೆಗಳ ಅಂಗನವಾಡಿ ಸಮಯ ಬದಲಾವಣೆ-ಸರಕಾರ ಆದೇಶ
Anganawadi: ರಾಜ್ಯದಲ್ಲಿ ಉಷ್ಣತೆ ಹೆಚ್ಚಳವಾಗಿದೆ. ತಾಪಮಾನದ ಏರಿಕೆ ಇನ್ನೂ ಕೆಲ ದಿನಗಳ ಕಾಲ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಪುಟ್ಟ ಪುಟ್ಟ ಮಕ್ಕಳು ರಣ ಬಿಸಿಲಿಗೆ ಅಂಗನವಾಡಿಗೆ ಹೋಗಲು ಹಿಂದೇಟು ಹಾಕುತ್ತಿರುವ ಕುರಿತು ಅರಿತ ಸರಕಾರ ಇದೀಗ ಅಂಗನವಾಡಿಗಳ ಸಮಯವನ್ನು ಎರಡು ತಿಂಗಳ ಕಾಲ ಬದಲಾವಣೆ ಮಾಡಿ ಆದೇಶ ಹೊರಡಿಸಿದೆ.
ರಾಜ್ಯದ ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ, ಬಳ್ಳಾರಿ, ಯಾದಗಿರಿ, ಕೊಪ್ಪಳ, ರಾಯಚೂರು, ಬೀದರ್ ಮತ್ತು ಕಿತ್ತೂರು ಕರ್ನಾಟಕ ಭಾಗದ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕೇಂದ್ರಗಳ ವೇಳಾಪಟ್ಟಿಯನ್ನು ಬದಲಾವಣೆ ಮಾಡಲಾಗಿದೆ.
ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಮಾತ್ರ ಕಾರ್ಯ ನಿರ್ವಹಿಸಲಿದೆ ಈ ಎಂಟು ಜಿಲ್ಲೆಯಲ್ಲಿನ ಅಂಗನವಾಡಿಗಳು. ಬದಲಾದ ವೇಳಾಪಟ್ಟಿಗೆ ತಕ್ಕಂತೆ ಐಸಿಡಿಎಸ್ ಸೇವೆ ನಿಯಮಾನುಸಾರ ಅಡೆತಡೆಗಳಿಲ್ಲದೆ ಅಂಗನವಾಡಿ ಫಲಾನುಭವಿಗಳಿಗೆ ತಲುಪಿಸಲು ಅಗತ್ಯ ಕ್ರಮ ವಹಿಸಲು ಸೂಚಿಸಲಾಗಿದೆ.