SBI Shares: ತಾತನ ಎಸ್‌ಬಿಐ ಷೇರು ಸರ್ಟಿಫಿಕೇಟ್ ಮೊಮ್ಮಗನಿಗೆ ಸಿಕ್ಕಾಗ; 30 ವರ್ಷದ ನಂತರ ಸಿಕ್ಕ 500 ರೂ. ಮೌಲ್ಯದ ಷೇರಿನ ಇಂದಿನ ಬೆಲೆ ಎಷ್ಟು
SBI Shares: ಚಂಡೀಗಢದ ವೈದ್ಯ ತನ್ಮಯ್ ಮೋತಿವಾಲಾ ಅವರ ಕೈಯಲ್ಲಿ ಒಂದು ಸಂಪತ್ತಿನ ಗಣಿ ದೊರಕಿದೆ. ಹೌದು, ವಿಷಯ ಏನೆಂದರೆ ಅವರ ಅಜ್ಜ 1994 ರಲ್ಲಿ 500 ರೂಪಾಯಿ ಮೌಲ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಷೇರುಗಳನ್ನು ಖರೀದಿಸಿದ್ದು ಅನಂತರ ಅವರು ಅದನ್ನು ಮರೆತುಬಿಟ್ಟರು. ಈಗ ಅದರ ದಾಖಲೆಗಳು ಸಿಕ್ಕಿವೆ.
ವೈದ್ಯರು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಬರೆದಿದ್ದು, ಅದು ವೈರಲ್ ಆಗಿದೆ. ಇಂದು ಆ ಷೇರುಗಳ ಮೌಲ್ಯವನ್ನು ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಆಗಿದೆ. ನನ್ನ ಅಜ್ಜ 1994 ರಲ್ಲಿ 500 ರೂ ಮೌಲ್ಯದ ಈ ಷೇರುಗಳನ್ನು ಖರೀದಿಸಿದ್ದು, ನಂತರ ಅದರ ಬಗ್ಗೆ ಮರೆತುಬಿಟ್ಟಿದ್ದಾರೆ ಎಂದು ಡಾ.ತನ್ಮಯ್ ಮೋತಿವಾಲಾ ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ಬರೆದಿದ್ದಾರೆ. ಈ ಷೇರುಗಳ ದಾಖಲೆಗಳು ಸಿಕ್ಕ ನಂತರ ಅವುಗಳನ್ನು ಡಿಮ್ಯಾಟ್ ಆಗಿ ಪರಿವರ್ತಿಸಲು ಕಳುಹಿಸಿದ್ದೇನೆ ಎಂದು ಬರೆದಿದದ್ದಾರೆ.
ಈ ಪೋಸ್ಟ್‌ಗೆ ಅದ್ಭುತ ಪ್ರತಿಕ್ರಿಯೆಗಳು ಬರಲಾರಂಭಿಸಿದ ನಂತರ ಜನರು ಕುತೂಹಲದಿಂದ ಇದರ ಮೌಲ್ಯದ ಬಗ್ಗೆ ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸಿದಾಗ, 500 ರೂ.ಗಳ ಆ ಷೇರುಗಳು ಈಗ 750 ಪಟ್ಟು ಹೆಚ್ಚಾಗಿ 3.75 ಲಕ್ಷ ರೂ.ಗೆ ಏರಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಪ್ರಪಂಚದಲ್ಲಿ ಒಂದೇ ಒಂದು ಕಾಡು ಇಲ್ಲದ ದೇಶ ಯಾವುದು?
ಇದರ ನಂತರ ತನ್ಮಯ್ ಮೋತಿವಾಲಾ ಅವರು ಈ ಭೌತಿಕ ಷೇರುಗಳನ್ನು ಡಿಮ್ಯಾಟ್ ಖಾತೆಗೆ ಪರಿವರ್ತಿಸುವುದು ಕಷ್ಟಕರ ಪ್ರಕ್ರಿಯೆ ಎಂದು ಹೇಳಿದರು. SEBI ಪ್ರಕಾರ, ಯಾರಾದರೂ ಭೌತಿಕ ಷೇರು ಪ್ರಮಾಣಪತ್ರಗಳನ್ನು ಹೊಂದಿದ್ದರೆ ಅವರು ಎಲೆಕ್ಟ್ರಾನಿಕ್ ರೂಪಕ್ಕೆ ತರಬೇಕಾಗುತ್ತದೆ. ಇದರ ನಂತರವೇ ವಹಿವಾಟು ಅಥವಾ ವರ್ಗಾವಣೆ ಮಾಡಬಹುದು. ಬಹುಶಃ ಎಲ್ಲರೂ ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ತನ್ಮಯ್ ಬರೆದಿದ್ದಾರೆ. ನಾವು ಸಲಹೆಗಾರರ ಸಹಾಯವನ್ನು ತೆಗೆದುಕೊಳ್ಳಬೇಕಾಗಿತ್ತು. ಇದರ ಹೊರತಾಗಿಯೂ ಇದು ನಮಗೆ ಬಹಳ ಸಮಯ ತೆಗೆದುಕೊಂಡಿದೆ. ಪ್ರಸ್ತುತ ಈ ಷೇರುಗಳನ್ನು ಮಾರಾಟ ಮಾಡುವ ಯಾವುದೇ ಯೋಜನೆಯನ್ನು ಮಾಡುತ್ತಿಲ್ಲ ಎಂದು ಅವರು ಬರೆದಿದ್ದಾರೆ.
https://twitter.com/Least_ordinary/status/1773257534893445432