Shivaraj K R Pete: ʼಕಾಮಿಡಿ ಕಿಲಾಡಿʼ ಶಿವರಾಜ್‌ ಕೆ ಆರ್‌ ಪೇಟೆ ಮಹಿಳೆ ಜೊತೆ ಅನುಚಿತ ವರ್ತನೆ

Share the Article

Shivaraj K R Pete: ಕಾಮಿಡಿ ಕಿಲಾಡಿ ಖ್ಯಾತಿ ಶಿವರಾಜ್‌ ಕೆ.ಆರ್.ಪೇಟೆ ಮಹಿಳೆಯೊಬ್ಬರನ್ನು ನಿಂದಿಸಿ, ಅವಾಚ್ಯ ಶಬ್ದಗಳನ್ನು ಬಳಕೆ ಮಾಡಿದ ಆರೋಪದ ಮೇಲೆ ದೂರನ್ನು ನೀಡಲಾಗಿದೆ.

ಶಾರದಾಬಾಯಿ ಎಂಬುವವರು ಸುಬ್ರಹ್ಮಣ್ಯನಗರ ಠಾಣೆಗೆ ದೂರನ್ನು ನೀಡಿದ್ದಾರೆ. ಮಾ.30ರಂದು ರಾತ್ರಿ ಈ ಘಟನೆ ನಡೆದಿದೆ.

ನಾನು ಕೆಲಸ ಮುಗಿಸಿ ದ್ವಿಚಕ್ರ ವಾಹನದಲ್ಲಿ ಮನೆಗೆ ವಾಪಸ್‌ ಬರುತ್ತಿದ್ದೆ. ರಾಜ್‌ ಕುಮಾರ್‌ ರಸ್ತೆ 10ನೇ ಕ್ರಾಸ್‌ನ ಹಿಂಭಾಗದ ಪೆಟ್ರೋಲ್‌ ಬಂಕ್‌ ಹತ್ತಿರ ಶಿವರಾಜ್‌ ಕೆ.ಆರ್.ಪೇಟೆ ಅವರು ಕಾರನ್ನು ತಂದು ನನ್ನ ವಾಹನಕ್ಕೆ ಟಚ್‌ ಮಾಡಿದ್ದರು. ಈ ಕಾರಿನಲ್ಲಿ ಶಿವರಾಜ್‌ ಕೆ.ಆರ್.ಪೇಟೆ ಸಹಿತ ಅವರ ಸ್ನೇಹಿತರು ಕೂಡಾ ಇದ್ದರು. ನಂತರ ಯಾವಳೇ ನೀನು? ಅಲ್ಲಾಡಿಸಿಕೊಂಡು ಹೋಗ್ತೀಯಾ! ಎಂದು ಅವಾಚ್ಯ ಪದ ಬಳಕೆ ಮಾಡಿ ನಿಂದನೆ ಮಾಡಿದ್ದಾರೆ ಎಂದು ಮಹಿಳೆ ತನ್ನ ದೂರಿನಲ್ಲಿ ತಿಳಿಸಿದ್ದಾರೆ.

ಇದೀಗ ಶಿವರಾಜ್‌ ಕೆ.ಆರ್‌.ಪೇಟೆ ಅವರನ್ನು ಪೊಲೀಸರು ಠಾಣೆಗೆ ಕರೆಸಿರುವ ಕುರಿತು ವರದಿಯಾಗಿದೆ.

ಇದನ್ನೂ ಓದಿ: ಕಾಂಗ್ರೆಸ್ ಗೆ ಬಿಗ್ ರಿಲೀಫ್ ನೀಡಿದ ಇಡಿ; ಎಲೆಕ್ಷನ್ ಮುಗಿಯುವವರೆಗೆ ಕಾಂಗ್ರೆಸ್ ನಿಂದ ಬಲವಂತವಾಗಿ 3,500 ಕೋಟಿ ತೆರಿಗೆ ವಸೂಲು ಮಾಡುವುದಿಲ್ಲ ಎಂದ ಇಡಿ

Leave A Reply