Puttur: ಗೆಜ್ಜೆಗಿರಿ ನಂದನ ಬಿತ್ತಿಲ್, ಪಡುಮಲೆಯಲ್ಲಿ ಪ್ರಾರ್ಥನೆ ಸಲ್ಲಿಸಿ, ಚುನಾವಣಾ ಪ್ರಚಾರ ಆರಂಭಿಸಿದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್.

Share the Article

Puttur: ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅವರು ಸೋಮವಾರ ಪುತ್ತೂರಿನ ಚುನಾವಣಾ ಪ್ರಚಾರಕ್ಕೆ ಗೆಜ್ಜೆಗಿರಿ ನಂದನ ಬಿತ್ತ್’ಲ್ ಕ್ಷೇತ್ರದಲ್ಲಿ ಪ್ರಾರ್ಥನೆ ಸಲ್ಲಿಸಿ ಆರಂಭಿಸಿದರು.

ಇದನ್ನೂ ಓದಿ: Financial Rules Changes: ಇಂದಿನಿಂದ ದೇಶದಲ್ಲಿ ಆಗಲಿದೆ 6 ದೊಡ್ಡ ಬದಲಾವಣೆ; LPG ಬೆಲೆಯಿಂದ FasTag KYC ವರೆಗೆ

ಗೆಜ್ಜೆಗಿರಿ ಕ್ಷೇತ್ರದ ಆದಿದೈವ ದೂಮಾವತಿ ನಡೆಯಲ್ಲಿ ಪ್ರಾರ್ಥಿಸಿ, ಸತ್ಯಧರ್ಮ ಚಾವಡಿಯಲ್ಲಿ ದೇಯಿ ಬೈದೆತಿ ಸಾನಿಧ್ಯದಲ್ಲಿ ಪ್ರಸಾದ ಸ್ವೀಕರಿಸಿದರು.

ಇದನ್ನೂ ಓದಿ: Udupi (Kaup): ಕಾಪು ಪೊಲೀಸ್‌ ಠಾಣೆಯ ಮಹಿಳಾ ಪೊಲೀಸ್‌ ಆತ್ಮಹತ್ಯೆ ಪ್ರಕರಣ; ಡೈರಿ ಪತ್ತೆ

ಪಡುಮಲೆ ಪೂಮಾಣಿ, ಕಿನ್ನಿಮಾಣಿ, ವ್ಯಾಘ್ರ ಚಾಮುಂಡಿ ಕ್ಷೇತ್ರಕ್ಕೆ ತೆರಳಿ ದೈವಗಳಿಗೆ ಪ್ರಾರ್ಥನೆ ಸಲ್ಲಿಸಿ, ಪ್ರಸಾದ ಸ್ವೀಕರಿಸಿದರು.

ಪಡುಮಲೆ ನಾಗ ಬೆರ್ಮೆರ್ ಗುಡಿ, ನಾಗ ಸಾನಿಧ್ಯಕ್ಕೆ ತೆರಳಿ, ಪ್ರಾರ್ಥನೆ ಸಲ್ಲಿಸಿದರು.

ಪುತ್ತೂರು ಚುನಾವಣಾ ಪ್ರಚಾರ ಸಮಿತಿ ಉಸ್ತುವಾರಿ ಕಾವು ಹೇಮನಾಥ ಶೆಟ್ಟಿ, ಜಿಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಗೆಜ್ಜೆಗಿರಿ ಕ್ಷೇತ್ರದ ಗೌರವಾಧ್ಯಕ್ಷ ಜಯಂತ ನಡುಬೈಲು, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ವಿಶ್ವನಾಥ ರೈ, ವಿಟ್ಲ – ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್, ಕ್ಷೇತ್ರದ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್, ವಿಜಯ್ ಕುಮಾರ್ ಸೊರಕೆ, ಮಹೇಶ್ಚಂದ್ರ ಸಾಲ್ಯಾನ್, ಶ್ರೀಪ್ರಸಾದ್ ಪಾಣಾಜೆ, ಕಮಲೇಶ್ ಸರ್ವೆದೋಳಗುತ್ತು, ಅಣಿಲೆ ಜೈರಾಜ್ ಶೆಟ್ಟಿ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಲಕ್ಷ್ಮೀಶ್ ಗಬ್ಬಲಡ್ಕ, ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ, ಮಾಧವ ಸಾಲ್ಯಾನ್ ಕುರೆಮಜಲು, ಡಿಸಿಸಿ ಸದಸ್ಯ ಅಶೋಕ್ ಕುಮಾರ್ ಸಂಪ್ಯ, ಕ್ಷೇತ್ರದ ಧರ್ಮದರ್ಶಿ ಶ್ರೀಧರ ಪೂಜಾರಿ ಮೊದಲಾದರು ಉಪಸ್ಥಿತರಿದ್ದರು.

Leave A Reply