Patna High Court: ಹೆಂಡತಿಯನ್ನು “ಭೂತ ಪಿಶಾಚಿ” ಎಂದು ಕರೆಯುವುದು ಕ್ರೌರ್ಯ ಎನಿಸಿಕೊಳ್ಳುವುದಿಲ್ಲ : ಪಟ್ನಾ ಹೈಕೋರ್ಟ್

Patna High Court: ಪತಿ ತನ್ನ ಹೆಂಡತಿಯನ್ನು ಭೂತ-ಪಿಶಾಚಿ ಎಂದು ಸಂಬೋಧಿಸುವುದು ಕ್ರೌರ್ಯ ಎನಿಸಿಕೊಳ್ಳುವುದಿಲ್ಲ ಎಂದು ಪಟ್ನಾ ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.

ನ್ಯಾಯಮೂರ್ತಿ ಬಿಬೇಕ್‌ ಚೌಧರಿ ಅವರ ಏಕಸದಸ್ಯ ಪೀಠವು ಐಪಿಸಿ ಸೆಕ್ಷನ್ 498 ಎ (ಪತಿ ಅಥವಾ ಅವರ ಸಂಬಂಧಿಕರಿಂದ ಹೆಂಡತಿಯ ಮೇಲಿನ ಕ್ರೌರ್ಯ) ಅಡಿಯಲ್ಲಿ ಹೊಲಸು ಭಾಷೆಯ ಬಳಕೆಯು ‘ಕ್ರೌರ್ಯ’ ಎಂದು ಪರಿಗಣಿಸುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಜಾರ್ಖಂಡ್‌ನ ಬೊಕಾರೊ ನಿವಾಸಿಗಳಾದ ಶಹದೇವ್ ಗುಪ್ತಾ ಮತ್ತು ಅವರ ಪುತ್ರ ನರೇಶ್ ಕುಮಾರ್ ಗುಪ್ತಾ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸಿತು.

ಬಿಹಾರದಲ್ಲಿ ನರೇಶ್ ಕುಮಾರ್ ಮತ್ತು ಜ್ಯೋತಿ ಎಂಬುವವರು 1993ರಲ್ಲಿ ವಿವಾಹವಾಗಿದ್ದರು. ಬಳಿಕ ಪತಿ ಮತ್ತು ಆತನ ತಂದೆ ಹೆಂಡತಿಯ ಮನೆಯವರಿಗೆ ಕಾರನ್ನು ವರದಕ್ಷಿಣೆಯಾಗಿ ನೀಡುವಂತೆ ಪೀಡಿಸುತ್ತಾರೆ ಎಂಬುದಾಗಿ ಪತ್ನಿಯ ಮನೆಯವರು ಪ್ರಕರಣ ದಾಖಲಿಸಿದ್ದರು.

ಅದರಲ್ಲಿ ಪತಿ ತನ್ನನ್ನು “ಭೂತ ಪಿಶಾಚಿ” ಎಂದೆಲ್ಲಾ ಸಂಬೋಧಿಸುತ್ತಿರುವುದಾಗಿ ಉಲ್ಲೇಖಿಸಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ನಳಂದಾ ನ್ಯಾಯಾಲಯ ಪತ್ನಿಯ ಪರವಾಗಿ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಗಂಡನ ಮನೆಯವರು ಪಟನಾ ಹೈಕೊರ್ಟ್‌ ಮೆಟ್ಟಿಲೇರಿದ್ದರು.

“ವೈವಾಹಿಕ ಸಂಬಂಧಗಳಲ್ಲಿ, ವಿಶೇಷವಾಗಿ ವಿಫಲವಾದ ವೈವಾಹಿಕ ಸಂಬಂಧಗಳಲ್ಲಿ”, “ಗಂಡ ಮತ್ತು ಹೆಂಡತಿ ಇಬ್ಬರೂ” “ಒಬ್ಬರನ್ನೊಬ್ಬರು” “ಕೊಳಕು ಭಾಷೆ” ಯಿಂದ ನಿಂದಿಸಿದ ನಿದರ್ಶನಗಳಿವೆ.” ಆದಾಗ್ಯೂ, ಅಂತಹ ಎಲ್ಲಾ ಆರೋಪಗಳು ಕ್ರೌರ್ಯದ ಮುಸುಕಿನೊಳಗೆ ಬರುವುದಿಲ್ಲ” ಎಂದು ಹೈ ಕೋರ್ಟ್ ಹೇಳಿದೆ.

ಆರೋಪಿಗಳಿಂದ ಆಕೆಗೆ “ಕಿರುಕುಳ” ಮತ್ತು “ಕ್ರೂರವಾಗಿ ಚಿತ್ರಹಿಂಸೆ” ನೀಡಲಾಗಿದೆ ಎಂದು ಹೈಕೋರ್ಟ್ ಗಮನಿಸಿದೆ ಆದರೆ ದೂರುದಾರರು “ಅರ್ಜಿದಾರರ ವಿರುದ್ಧ” ಸ್ಪಷ್ಟವಾದ ಆರೋಪಗಳನ್ನು ಮಾಡಲು ವಿಫಲರಾಗಿದ್ದಾರೆ. ಹೈಕೋರ್ಟ್ ಅವಲೋಕನದ ಆಧಾರದ ಮೇಲೆ, ಕೆಳ ನ್ಯಾಯಾಲಯಗಳು ನೀಡಿದ ತೀರ್ಪುಗಳನ್ನು ಹೈಕೋರ್ಟ್ ರದ್ದುಗೊಳಿಸಿದೆ.

ಇದನ್ನೂ ಓದಿ: Mumbai Police: ಬ್ಲೂ ಫಿಲಂ ನಿರ್ಮಿಸುತ್ತಿದ್ದ ಗುಂಪನ್ನು ಬಂಧಿಸಿದ ಪೊಲೀಸರು

4 Comments
  1. MichaelLiemo says

    buying ventolin in usa: Ventolin inhaler best price – ventolin buy canada
    can i buy ventolin over the counter in australia

  2. Josephquees says

    ventolin online united states: buy Ventolin – albuterol ventolin

  3. Josephquees says

    cheap Rybelsus 14 mg: Buy semaglutide pills – Semaglutide pharmacy price

  4. Timothydub says

    buy prescription drugs from india: online Indian pharmacy – india pharmacy

Leave A Reply

Your email address will not be published.