POK: ಶೀಘ್ರದಲ್ಲೇ ಪಾಕ್ ಆಕ್ರಮಿತ ಕಾಶ್ಮೀರ ಭಾರತದೊಂದಿಗೆ ವಿಲೀನ- ರಾಜನಾಥ್ ಸಿಂಗ್ ಮಹತ್ವದ ಹೇಳಿಕೆ
POK: ಪಾಕ್ (POK)ಆಕ್ರಮಿತ ಪ್ರದೇಶವು ಭಾರತಕ್ಕೆ ಸೇರಬೇಕೆಂಬ ಭಾರತೀಯರ ಹಲವು ವರ್ಷಗಳ ಕನಸು ಇದೀಗ ನೆರವೇರುವ ಕಾಲ ಹತ್ತಿರವಾಗಿದೆ. ಈ ಕುರಿತು ಶೀಘ್ರವೇ ಪಾಕ್ ಆಕ್ರಮಿತ ಕಾಶ್ಮೀರ (POK)ಭಾರತದೊಂದಿಗೆ ವಿಲೀನವಾಗುತ್ತದೆ ಎಂದು ದೇಶದ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಹೊಸ ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ: Ayodhya: ಬಾಲಕ ರಾಮನಿಗೆ ಮೊದಲ ಹೋಳಿಯ ಸಂಭ್ರಮ
ಹೌದು, ಕಾಶ್ಮೀರದ ಬಗ್ಗೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರ ಇತ್ತೀಚಿನ ಟೀಕೆಗಳ ಬಗ್ಗೆ ಮಾತನಾಡಿದ ರಾಜನಾಥ್ ಸಿಂಗ್ ಅವರು, ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ಜನರು ತವರು ಭಾರತದೊಂದಿಗೆ ವಿಲೀನದ ಬೇಡಿಕೆಯನ್ನು ಎತ್ತುತ್ತಿದ್ದು, ಅಲ್ಲಿನ ಜನ ಖಂಡಿತಾ ಭಾರತದೊಂದಿಗೆ ವಿಲೀನಗೊಳ್ಳುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: NTK party in Krishnagiri: ಕಾಡುಗಳ್ಳ ವೀರಪ್ಪನ್ ಪುತ್ರಿಗೆ ಕೃಷ್ಣಗಿರಿಯಲ್ಲಿ ಎನ್‌ಟಿಕೆ ಪಕ್ಷದಿಂದ ಸ್ಪರ್ಧೆ
ಅಲ್ಲದೆ ಶೆಹಬಾಜ್ ಬಗ್ಗೆ ಪ್ರತಿಕ್ರಿಯಿಸಿದ ಸಿಂಗ್ ಅವರು ಶೆಹಬಾಜ್ ಎಂದಾದರೂ ಕಾಶ್ಮೀರವನ್ನು ತೆಗೆದುಕೊಳ್ಳಬಹುದೇ? ಅವರು ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆ ಚಿಂತಿಸಬೇಕು. ಸುಮಾರು ಒಂದೂವರೆ ವರ್ಷಗಳ ಹಿಂದೆಯೇ, ನಾವು ದಾಳಿ ಮಾಡಿ ಆಕ್ರಮಿಸಿಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದ್ದೆ. ಏಕೆಂದರೆ ಅಲ್ಲಿ ಪರಿಸ್ಥಿತಿ ಬದಲಾಗುತ್ತಿದೆ. ಪಿಒಕೆ ಜನರೇ ಭಾರತದೊಂದಿಗೆ ವಿಲೀನಕ್ಕೆ ಒತ್ತಾಯಿಸುತ್ತಿದ್ದಾರೆ. ಹೀಗಾಗಿ ನಾವು ಯಾವುದೇ ದೇಶದ ಮೇಲೆ ದಾಳಿ ಮಾಡಲು ಹೋಗುವುದಿಲ್ಲ. ಭಾರತವು ವಿಶ್ವದ ಯಾವುದೇ ದೇಶದ ಮೇಲೆ ದಾಳಿ ಮಾಡುವ ಗುಣವನ್ನು ಹೊಂದಿಲ್ಲ. ಆದರೆ ಪಿಒಕೆ ನಮ್ಮದು. ಪಿಒಕೆ ಸ್ವತಃ ಭಾರತದೊಂದಿಗೆ ವಿಲೀನಗೊಳ್ಳುತ್ತದೆ. ಕಾದು ನೋಡಿ ಎಂದು ಹೇಳಿದರು.