Sumalatha Ambareesh: JDS ಪಾಲಾದ ಮಂಡ್ಯ – ಸುಮಲತಾ ಟಿಕೆಟ್ ನಿಗೂಢ !!
Sumalatha Ambareesh: ಲೋಕಸಭಾ ಚುನಾವಣೆ ಪ್ರಯುಕ್ತ ಮೈತ್ರಿ ಮಾಡಿಕೊಂಡಿರುವ ಬಿಜೆಪಿ-ಜೆಡಿಎಸ್ ಟಿಕೆಟ್ ಹಂಚಿಕೆ ವಿಚಾರಕ್ಕೆ ಕೊನೆಗೂ ತೆರೆ ಬಿದ್ದಿದ್ದು ಮಂಡ್ಯ, ಹಾಸನ, ಕೋಲಾರ (Mandya, Hassan, Kolar) ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ತೀರ್ಮಾನ ಆಗಿದೆ.
ಹೌದು, ಈ ಕುರಿತಂತೆ ಲೋಕಸಭಾ ಚುನಾವಣಾ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರವಾಲ್ (Radha Mohan Das Agarwal) ಅವರು ಮಂಡ್ಯ, ಹಾಸನ, ಕೋಲಾರ (Mandya, Hassan, Kolar) ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ತೀರ್ಮಾನ ಆಗಿದೆ ಎಂದು ತಿಳಿಸಿದ್ದಾರೆ. ಇದರೊಂದಿಗೆ ಮಂಡ್ಯ(Mandya) ವಿಚಾರ ಗೊಂದಲಕ್ಕೆ ತೆರೆಬಿದ್ದಿದೆ. ಹಾಗೂ ಸುಮಲತಾ (Sumalatha Ambareesh) ಅವರ ಟಿಕೆಟ್ ಬಗ್ಗೆ ತೀರ್ಮಾನ ಆಗಿಲ್ಲ ಎಂಬುದಾಗಿಯೂ ಅವರು ಹೇಳಿದ್ದಾರೆ. ಹೀಗಾಗಿ ಸುಮಲತಾ ಟಿಕೆಟ್ ನಿಗೂಢವಾಗಿಯೇ ಉಳಿದಿದೆ.
Intresting News: ಬದ್ಧತೆಯೇ ಯಶಸ್ಸಿನ ಮೂಲ ಮಂತ್ರ
ಅಂದಹಾಗೆ ಅಗರವಾಲ್ ಅವರು ಈ ಘೋಷಣೆ ಮಾಡುತ್ತಿದ್ದಂತೆ ‘ಹೊಸ ನಿರ್ಧಾರ ತಾಳುವಲ್ಲಿ ಸುಮಲತಾ ಅವರ ಪಾತ್ರ ಬಹಳ ದೊಡ್ಡದಿದೆ. ಅವರ ರಾಜಕೀಯ ಭವಿಷ್ಯವು ಸಹ ಬಹಳ ಉತ್ತಮ ಆಗಿರಲಿದೆ’ ಎಂದು ಹೇಳಿ ಭಾರೀ ಕುತೂಹಲವನ್ನೂ ಕೆರಳಿಸಿದ್ದಾರೆ. ಅಂದರೆ ಸುಮಲತಾ ಅವರಿಗೆ ಬೇರೆ ಯಾವುದಾದರೂ ಕ್ಷೇತ್ರದ ಟಿಕೆಟ್ ನೀಡಬಹುದೇನೋ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದ್ದಾರೆ.
ಆದರೂ ಮಂಡ್ಯ ಟಿಕೆಟ್ ನಿರೀಕ್ಷೆಯಲ್ಲಿದ್ದು, ಗೆಲುವಿನ ನಗೆ ಬೀರಲು ಸುಮಲತಾಗೆ ಭಾರೀ ನಿರಾಸೆಯಾಗಿದೆ. ಇದರಿಂದ ತುಂಬಾ ನೋವುಂಟಾಗಿದೆ ಎಂದು ಅವರ ಆಪ್ತರು, ಬೆಂಬಲಿಗರು ತಿಳಿಸಿದ್ದಾರೆ. ಇನ್ನು ತಮ್ಮ ಮುಂದಿನ ನಡೆ ಬಗ್ಗೆ ಸುಮಲತಾ ಅವರು ಇದುವರೆಗೆ ಏನೂ ಹೇಳಿಲ್ಲ. ಪಕ್ಷೇತರ ಸ್ಪರ್ಧೆಗೆ ಮುಂದಾಗುತ್ತಾರೇನೋ ಎಂಬ ಗುಮಾನಿ ಮೂಡಿದೆ.
ಇನ್ನು ಅವರ ಆಪ್ತರಾಗಿರುವ ಶಶಿಕುಮಾರ್ ಹನಕೆರೆ (Shashikumar Hanakere) ಮಾತನಾಡಿ ಪಕ್ಷೇತರ ಸಂಸದೆಯಾಗಿರುವ ಸುಮಲತಾ ಅವರು ಬಿಜೆಪಿಗೆ ಬೇಷರತ್ ಬೆಂಬಲ (unconditional support) ಘೋಷಿಸಿದಾಗ ಜೆಡಿಎಸ್ ಪಕ್ಷವು ಎನ್ ಡಿಎ ಮೈತ್ರಿಕೂಟದ ಭಾಗವಾಗಿರಲಿಲ್ಲ. ಬಿಜೆಪಿ ನಾಯಕರಿಗೆ ಪಕ್ಷವನ್ನು ಹಳೇ ಮೈಸೂರು ಭಾಗದಲ್ಲಿ ಬಲಿಷ್ಠವಾಗಿ ಬೆಳೆಸುವ ಆಸೆ ಇದ್ದು ಸುಮಲತಾ ಅವರ ಮೂಲಕ ಆ ಕಾರ್ಯ ಸಾಧಿಸುತ್ತಾರೆ ಅಂತ ಭಾವಿಸಲಾಗಿತ್ತು. ಅದರೆ ಬಿಜೆಪಿ ವರಿಷ್ಠರು ಸುಮಲತಾ ಅವರಿಗೆ ಟಿಕೆಟ್ ನಿರಾಕರಿಸುವ ನಿರ್ಧಾರ ಯಾಕೆ ತೆಗೆದುಕೊಂಡರೋ ಅರ್ಥವಾಗುತ್ತಿಲ್ಲ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಕಾರ್ಯಕರ್ತರೆಲ್ಲ ಸುಮಲತಾ ಅವರನ್ನು ಆಗ್ರಹಿಸುತ್ತಿದ್ದೇವೆ. ಗೆಲ್ಲುವ ಅತ್ಯುತ್ತಮ ಅವಕಾಶವಿರುವುದರಿಂದ ಅವರು ಸ್ಪರ್ಧಿಸಲೇ ಬೇಕು ಎಂದು ಹೇಳಿದ್ದಾರೆ.