Interesting question: ಇನ್ಶುರೆನ್ಸ್ ನಲ್ಲಿ ಫಸ್ಟ್ ಪಾರ್ಟಿ ಮತ್ತು ಥರ್ಡ್ ಪಾರ್ಟಿ ಬಗ್ಗೆ ಗೊತ್ತು; ಹಾಗಾದ್ರೆ ಮಧ್ಯದ ಸೆಕೆಂಡ್ ಪಾರ್ಟಿ ಯಾರು ?
Interesting Question: ಕೆಲವು ಕನ್ಫ್ಯೂಷನ್ ಗಳು ಪ್ರಶ್ನೆಗಳು ಆಗಾಗ ನಮ್ಮಲ್ಲಿ ಕುತೂಹಲವನ್ನು ಮೂಡಿಸುತ್ತಾ ಸಾಗುತ್ತವೆ. ಆದ್ರೆ ಪ್ರಶ್ನೆ ಬಂದ ತಕ್ಷಣ ಅದಕ್ಕೆ ಉತ್ತರ ಪಡೆದುಕೊಳ್ಳುವ, ತಿಳಿದುಕೊಳ್ಳುವ, ಹುಡುಕುವ ಬದಲು ಬೇರೇನೋ ಕೆಲಸ ಬರುತ್ತೆ, ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದೇ ಹೋಗುತ್ತದೆ. ಅದು ಉತ್ತರವಾಗಿ ಬದಲಾಗೋದೇ ಇಲ್ಲ. ಅಂತಹ ಒಂದು ಪ್ರಶ್ನೆಯನ್ನು ನಾವಿಲ್ಲ ತಂದಿದ್ದೇವೆ, ಉತ್ತರದ ಸಮೇತ. (Who is second party ?)
ಇನ್ಶುರೆನ್ಸ್ ನಲ್ಲಿ ಆಗಾಗ ನಾವು ಫಸ್ಟ್ ಪಾರ್ಟಿ ಇನ್ಶುರೆನ್ಸ್, ಥರ್ಡ್ ಪಾರ್ಟಿ ಇನ್ಶುರೆನ್ಸ್ ಅಂತ ಕೇಳುತ್ತಿರುತ್ತೇವೆ. ಫಸ್ಟ್ ಪಾರ್ಟಿ (First party) ಅಂದ್ರೆ ಗಾಡಿಯ ಮಾಲೀಕ ಮತ್ತು ಥರ್ಡ್ ಪಾರ್ಟಿ ಅಂದ್ರೆ ನಮ್ಮ ಗಾಡಿಯಿಂದ ಯಾರಿಗಾದರೂ (ಮೂರನೆಯ ವ್ಯಕ್ತಿಗೆ) ಅಥವಾ ಅಂತಹಾ ವ್ಯಕ್ತಿಯ ಆಸ್ತಿ ಪಾಸ್ತಿ ವಾಹನ ಇತ್ಯಾದಿಗಳಿಗೆ ಏನಾದರೂ ಅವಘಡ ಸಂಭವಿಸಿದರೆ ಆ ವ್ಯಕ್ತಿಯನ್ನು ಥರ್ಡ್ ಪಾರ್ಟಿ (Third party) ಅನ್ನಲಾಗುತ್ತದೆ. ಮೊದಲ ಮತ್ತು ಮೂರನೆಯ ವ್ಯಕ್ತಿ ಬಂದು ಕೂತಾಯಿತು, ಅದ್ಯಾರಪ್ಪಾ ಎರಡನೆಯವನು, ಸೆಕೆಂಡ್ ಪಾರ್ಟಿ (Second party) ಯಾರು, ಆತ ಎಲ್ಲಿ ಯಾವ ಗಾಡಿ ಹತ್ತಿ ಹೋದ ? ಈ ಪ್ರಶ್ನೆ ತಮಾಷೆಯಾಗಿ ನಿಮಗೆ ಅನ್ನಿಸಬಹುದು. ಬಹುಜನರಿಗೆ ಸೆಕೆಂಡ್ ಪಾರ್ಟಿ ಯಾರು ಅಂತಲೇ ಗೊತ್ತಿಲ್ಲ. ಇವತ್ತು ಸೆಕೆಂಡ್ ಪಾರ್ಟಿ ಖಂಡಿತ ನಿಮ್ಮ ಮುಂದೆ ಪ್ರತ್ಯಕ್ಷ ಆಗುತ್ತಾನೆ/ಳೆ !!
Drone Prathap: ಬಿಗ್ ಬಾಸ್’ನಿಂದ ಡ್ರೋನ್ ಪ್ರತಾಪ್ ಔಟ್ ?!
ಇನ್ಶೂರೆನ್ಸ್ ನಲ್ಲಿ ಸೆಕೆಂಡ್ ಪಾರ್ಟಿ ಅಂದರೆ ಅದು ಬೇರೆ ಯಾರೂ ಅಲ್ಲ, ಅದು ನಮಗೆ ಪಾಲಿಸಿ ಕೊಟ್ಟ ಕಂಪನಿ ! ನಾವು ಮನೆ ಬಾಡಿಗೆ ಪತ್ರದಲ್ಲಿ (Rent argiment) ಮಾಡುವಾಗ ಮನೆ ಬಾಡಿಗೆ ಪಡೆಯುವ ಮತ್ತು ಮನೆ ಬಾಡಿಗೆಗೆ ಕೊಡುವವರ ಮಧ್ಯೆ ಅಗ್ರಿಮೆಂಟ್ ನಡೆಯುತ್ತಲ್ಲ. ಅಲ್ಲಿ ಕೂಡಾ ನಾವು ಫಸ್ಟ್ ಪಾರ್ಟಿ ಮತ್ತು ಸೆಕೆಂಡ್ ಪಾರ್ಟಿ ಎಂದು ಕಾನೂನು ಭೀತಿಯಲ್ಲಿ ಸಂಭೋಧಿಸುತ್ತೇವೆ. ಅದೇ ರೀತಿ, ನಾನು ಇನ್ಸೂರೆನ್ಸ್ ಪಡೆಯುವಾಗ ಕಾರಿನ ಮಾಲೀಕ ಫಸ್ಟ್ ಪಾರ್ಟಿ ಆಗಿದ್ದರೆ, ಇನ್ಸೂರೆನ್ಸ್ ಕೊಡುವ ಕಂಪನಿಯು ಸೆಕೆಂಡ್ ಪಾರ್ಟಿ (Second party) ಆಗಿರುತ್ತದೆ. ನಮ್ಮ ವಾಹನದಿಂದ ಇನ್ಯಾರಿಗೋ, ನಮಗೆ ಗೊತ್ತಿಲ್ಲದ ಮೂರನೆಯ ವ್ಯಕ್ತಿಗೆ ಹಾನಿ ಆದಾಗ, ಹಾನಿ ಆಗಬಹುದಾದ ಅಂತಹ ವ್ಯಕ್ತಿಯನ್ನು ಮೂರನೆಯ ವ್ಯಕ್ತಿ ಅಥವಾ ಥರ್ಡ್ ಪಾರ್ಟಿ ಎಂದು ಗುರುತಿಸಲಾಗುತ್ತದೆ. ಈಗ ಗೊತ್ತಾಯ್ತಲ್ಲ, ಸೆಕೆಂಡ್ ಪಾರ್ಟಿ ಯಾರು ಎಂದು ? ಇಂತಹಾ ಇನ್ನಿತರ ಟ್ರಿಕ್ಕಿ, ವಿಶೇಷ ವಿಷಯಗಳೊಂದಿಗೆ ಮತ್ತೆ ಪ್ರತ್ಯಕ್ಷ ಆಗ್ತೇವೆ, ನಿಮ್ಮ ಗೆಳೆಯರಿಗೂ ಈ ಲೇಖನವನ್ನು ಪರಿಚಯಿಸಿ ನಮ್ಮನ್ನು ಬೆಂಬಲಿಸಿ. ಶುಭ ದಿನ.