LIC Housing Loans: ಎಲ್‌ಐಸಿ ಹೌಸಿಂಗ್ ನಿಂದ ಮಧ್ಯಮ ವರ್ಗದವರಿಗೆ ಭರ್ಜರಿ ಸಿಹಿ ಸುದ್ದಿ; ಮನೆ ನಿರ್ಮಾಣಕ್ಕೆ ಕೈಗೆಟಕುವ ದರದಲ್ಲಿ ಸಾಲ
LIC Housing Loans: ಕೈಗೆಟಕುವ ದರದಲ್ಲಿ ಮನೆಗಳ ನಿರ್ಮಾಣಕ್ಕೆ ಮತ್ತು ಖರೀದಿಗೆ ಸಾಲದ ಪ್ರಮಾಣವನ್ನು ಹೆಚ್ಚಿಸಲಾಗುವುದು ಎಂದು ಎಲ್.ಐ.ಸಿ ಹೇಳಿದೆ. ಈ ಮೂಲಕ ಮಧ್ಯಮ ವರ್ಗದ ಜನರಿಗೆ ಸಿಹಿ ಸುದ್ದಿ ನೀಡಿದೆ. ಪ್ರಸ್ತುತ ಅಗ್ಗದ ಮನೆಗಳ ಸಾಲ ಮಾರುಕಟ್ಟೆಯಲ್ಲಿ ಕಂಪನಿಯ ಪಾಲು ಶೇಕಡಾ 8-10ರಷ್ಟಿದ್ದು, ಈ ಮಾದರಿಯನ್ನು ಮುಂದಿನ 2 ವರ್ಷದಲ್ಲಿ ಶೇಕಡಾ 20-25ಕ್ಕೆ ಹೆಚ್ಚಿಸಲು ಕಂಪನಿ ತೀರ್ಮಾನಿಸಿದೆ.
ಕಡಿಮೆ ದರದ ಮನೆಗಳ ನಿರ್ಮಾಣ / ಖರೀದಿಗೆ ಸಾಲ ನೀಡಿಕೆ ಪ್ರಮಾಣವನ್ನು ಹೆಚ್ಚಿಸಲು ನಿರ್ಧರಿಸಿದೆ ‘ಎಲ್‌ಐಸಿ ಹೌಸಿಂಗ್ ಫೈನಾನ್ಸ್’
ಮಧ್ಯಮ ವರ್ಗದವರಿಗೆ ಸಿಹಿ ಸುದ್ದಿ ನೀಡಿದೆ ಸಾರ್ವಜನಿಕ ವಲಯದ ಗೃಹ ಸಾಲ ಸಂಸ್ಥೆ ‘ಎಲ್‌ಐಸಿ ಹೌಸಿಂಗ್ ಫೈನಾನ್ಸ್’
ಪ್ರಸ್ತುತ ಅಗ್ಗದ ಮನೆಗಳ ಸಾಲ ಮಾರುಕಟ್ಟೆಯಲ್ಲಿ ಶೇಕಡಾ 8-10ರಷ್ಟಿದೆ ಎಲ್‌ಐಸಿ ಹೌಸಿಂಗ್ ಫೈನಾನ್ಸ್ ಪಾಲು
ಮುಂದಿನ 2 ವರ್ಷದಲ್ಲಿ ಶೇಕಡಾ 20-25ಕ್ಕೆ ಹೆಚ್ಚಿಸಲೂ ತೀರ್ಮಾನಿಸಿದೆ ಎಲ್‌ಐಸಿ
ಎಲ್ಐಸಿ ಯು ಮಧ್ಯಮ ವರ್ಗದ ಜನರಿಗೆ ಸಿಹಿ ಸುದ್ದಿ ನೀಡಿದೆ. ಕೈಗೆಟಕುವ ದರದಲ್ಲಿ ಮನೆಗಳ ನಿರ್ಮಾಣಕ್ಕೆ ಮತ್ತು ಖರೀದಿಗೆ ಸಾಲದ ಪ್ರಮಾಣವನ್ನು ಹೆಚ್ಚಿಸಲಾಗುವುದು ಎಂದು ಎಲ್.ಐ.ಸಿ ಹೇಳಿದೆ. ಪ್ರಸ್ತುತ ಅಗ್ಗದ ಮನೆಗಳ ಸಾಲ ಮಾರುಕಟ್ಟೆಯಲ್ಲಿ ಕಂಪನಿಯ ಪಾಲು ಶೇಕಡಾ 8-10ರಷ್ಟಿದ್ದು, ಈ ಮಾದರಿಯನ್ನು ಮುಂದಿನ 2 ವರ್ಷದಲ್ಲಿ ಶೇಕಡಾ 20-25ಕ್ಕೆ ಹೆಚ್ಚಿಸಲು ಕಂಪನಿ ತೀರ್ಮಾನಿಸಿದೆ ಎಂದು ಸಂಸ್ಥೆಯ ವ್ಯಸ್ಥಾಪಕ ಅಧಿಕಾರಿ ತಿಳಿಸಿದ್ದಾರೆ.
ಇತ್ತೀಚೆಗೆ ಕಂಪನಿಯಲ್ಲಿ ನಡೆದ ಕೆಲ ಬದಲಾವಣೆಗಳಿಂದ ಸಾಲ ನೀಡಿಕೆಯಲ್ಲಿ ಶೇ 5 ರಷ್ಟು ಇಳಿಕೆಯಾಗಿತ್ತು. ಕಂಪನಿ ಈ ವರೆಗೆ ಹೆಚ್ಚು ಕ್ರೆಡಿಟ್ ಕೊಡ್ ಹೊಂದಿರುವವರಿಗೆ ಹಾಗೂ ಕಂಪನಿ ಕೆಲಸದಲ್ಲಿ ಇರುವವರಿಗೆ ಸಾಲ ನೀಡುತ್ತಿತ್ತು. ಮನೆಗೆ ಸಾಲ ನೀಡುವುದು ಕಂಪನಿಗೆ ಲಾಭ ವಾಗಲಿದೆ. ಪ್ರಧಾನ್ ಮಂತ್ರಿ ಆವಾಜ್ ಯೋಜನೆಯಿಂದ ಇಂತಹ ಸಾಲಗಳಿಗೆ ಬೇಡಿಕೆ ಹೆಚ್ಚಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಸ್ಥೆಯ ಈ ನಿರ್ಧಾರದಿಂದ ಎಲ್‌ಐಸಿ ಹೌಸಿಂಗ್ ಫೈನಾನ್ಸ್ ನ ನಿಯಮಗಳು ಸಡಿಲಗೊಳ್ಳಲಿದೆ. ಮಧ್ಯಮ ವರ್ಗದ ಜನರಿಗೆ ಸುಲಭವಾಗಿ ದೊರೆಯುವ ಸಾಧ್ಯತೆ ಇದೆ.
ಎಲ್‌ಐಸಿ ಷೇರು ಜಿಗಿತ ಕಂಡಿದೆ.
ಇದೇ ಮೊದಲ ಬಾರಿಗೆ ಎಲ್ಐಸಿಯ ಶೇರು 1,000 ದ ಗಾಡಿ ದಾಟುವ ಮುಖೇನ ದಾಖಲೆ ಬರೆದಿದೆ. ಸೋಮವಾರ ತನ್ನ ಗರಿಷ್ಠ ಷೇರು 1027.95 ರೂ.ಗೆ ತಲುಪಿತ್ತು. ಮತ್ತೆ ಮಂಗಳವಾರ ಈ ದಾಖಲೆಯನ್ನು ಮುರಿದು 1,033 ರೂ. ಮಟ್ಟವನ್ನು ಮುಟ್ಟಿತ್ತು. ಎಲ್‌ಐಸಿ ಷೇರು 23.80 ರೂ. ಅಥವಾ ಶೇ. 2.38ರಷ್ಟು ಏರಿಕೆ ಕಂಡಿದ್ದು 1,022.65 ರೂ.ನಲ್ಲಿ ದಿನದ ವಹಿವಾಟು ಕೊನೆಗೊಳಿಸಿದೆ. ಇದೇ ವೇಳೆ, ಕಂಪನಿಯ ಮಾರುಕಟ್ಟೆ ಮೌಲ್ಯ 6.49 ಲಕ್ಷ ಕೋಟಿ ರೂ.ಗೆ ಮುಟ್ಟಿದೆ. ಕಂಪನಿಯ ತ್ರೈಮಾಸಿಕ ಫಲಿತಾಂಶವನ್ನು ಫೆಬ್ರವರಿ 8 ರಂದು ಪ್ರಕಟಿಸಲಿದೆ. ಅಲ್ಲಿಯವರೆಗೆ ಷೇರು ಹೆಚ್ಚಾಗುವ ಸಾಧ್ಯತೆ ಇದೆ.
qgnm6z