7th Pay Commission: ಸರ್ಕಾರಿ ನೌಕರರ ವೇತನ ಈ ತಿಂಗಳಿನಿಂದಲೇ ಹೆಚ್ಚಳ; ಖಾತೆಗೆ ಜಮೆ ಆಗಲಿದೆ ಭಾರೀ ಮೊತ್ತ!!
7th pay commission :2024 ಕೇಂದ್ರ ಸರ್ಕಾರಿ ನೌಕರರಿಗೆ(Central employees)ಅನೇಕ ಸಿಹಿ ಸುದ್ದಿಗಳು ಹೊರಬೀಳಲಿದೆ. ಈ ವರ್ಷ ನೌಕರರು ವೇತನದಲ್ಲಿ ಭಾರಿ ಹೆಚ್ಚಳವನ್ನು ಪಡೆಯಲಿದ್ದಾರೆ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: Drone prathap: ಬಿಗ್ ಬಾಸ್’ನಿಂದ ಡ್ರೋನ್ ಪ್ರತಾಪ್ ಔಟ್ ?!
ವರ್ಷಕ್ಕೆ ಎರಡು ಬಾರಿ ತುಟ್ಟಿಭತ್ಯೆ (DA Hike)ದರವನ್ನು ಏರಿಕೆ ಮಾಡಲಾಗುತ್ತದೆ. ಜನವರಿಯಲ್ಲಿ ಏರಿಕೆಯಾಗುವ ತುಟ್ಟಿಭತ್ಯೆ ದರ ಎಷ್ಟಾಗಲಿದೆ ಎಂಬುದನ್ನು ಹಿಂದಿನ ವರ್ಷದ ಜುಲೈನಿಂದ ಡಿಸೆಂಬರ್ವರೆಗಿನ AICPI ಸೂಚ್ಯಂಕವನ್ನು ಆಧರಿಸಿ ಲೆಕ್ಕಹಾಕಲಾಗುತ್ತದೆ. ನವೆಂಬರ್ ವರೆಗಿನ AICPI ದತ್ತಾಂಶವನ್ನು ಆಧರಿಸಿಕೊಂಡು ಈ ಬಾರಿಯ ಡಿಎ(Dearness Allowance)ಕನಿಷ್ಠ 50 ಪ್ರತಿಶತವನ್ನು ತಲುಪಲಿದೆ ಎಂಬುದು ಸ್ಪಷ್ಟವಾಗಿದೆ.
ಸದ್ಯ, ಕೇಂದ್ರ ಸರ್ಕಾರಿ ನೌಕರರು 46 ಪ್ರತಿಶತ ತುಟ್ಟಿಭತ್ಯೆಯನ್ನು(7th pay commission) ಪಡೆಯುತ್ತಿದ್ದು, ಜನವರಿಯಿಂದ ಶೇ.50 ಅಥವಾ ಶೇ.51ಕ್ಕೆ ಹೆಚ್ಚಳವಾಗುವ ಸಂಭವವಿದೆ. ಇದರ ಜೊತೆಗೆ ಜನವರಿ 31ರ ನಂತರ ಕೇಂದ್ರ ಸರ್ಕಾರಿ ನೌಕರರಿಗೆ ಮತ್ತೊಂದು ಭತ್ಯೆಯನ್ನು 3%ದಷ್ಟು ಹೆಚ್ಚಳ ಮಾಡಲಿದೆ ಎನ್ನಲಾಗಿದೆ.
ಮನೆ ಬಾಡಿಗೆ ಭತ್ಯೆಯಲ್ಲಿ (HOUSE RENT ALLOWANCE)ಮುಂದಿನ ಪರಿಷ್ಕರಣೆ 3 ಶೇಕಡಾ ಆಗಿದ್ದು, HRA ಯ ಗರಿಷ್ಠ ದರವು 27% ಆಗಿದೆ. ಪರಿಷ್ಕರಣೆಯ ಬಳಿಕ, ಗರಿಷ್ಠ HRA ದರವು 30 ಪ್ರತಿಶತಕ್ಕೆ ಹೆಚ್ಚಳವಾಗಲಿದೆ. ಒಂದು ವೇಳೆ ಡಿಎ 50% ದಷ್ಟು ಹೆಚ್ಚಾದಾಗ ಮಾತ್ರವೇ ಇಷ್ಟು ಮೊತ್ತ ಆಗಲಿದೆ. ಅಂದರೆ ಜ್ಞಾಪಕ ಪತ್ರದ ಪ್ರಕಾರ, HRA 30%, 20% ಮತ್ತು 10% ಆಗುತ್ತದೆ. X, Y ಮತ್ತು Z ವರ್ಗದ ಆಧಾರದ ಮೇಲೆ ಮನೆ ಬಾಡಿಗೆ ಭತ್ಯೆ ನೀಡಲಾಗುತ್ತದೆ.
7ನೇ ವೇತನ ಆಯೋಗದ(7TH PAY COMMISSION) ಶಿಫಾರಸ್ಸಿನ ಅನುಸಾರ ಕೇಂದ್ರ ಸರ್ಕಾರ ಕೆಲವು ನಿಯಮಗಳನ್ನು ರೂಪಿಸಿದೆ. 2021 ರಲ್ಲಿ ತುಟ್ಟಿಭತ್ಯೆ 25% ಮೀರಿದ ಸಂದರ್ಭ HRA ಯನ್ನು ಪರಿಷ್ಕರಿಸಲಾಗಿತ್ತು. ಜುಲೈ 2021 ರಂದು ಡಿಎ 25% ದಾಟಿದಾಗ HRAಯನ್ನು 3% ಹೆಚ್ಚಿಸಲಾಗಿತ್ತು. HRA ಪ್ರಸ್ತುತ 27%, 18% ಮತ್ತು 9% ಆಗಿದೆ. ತುಟ್ಟಿಭತ್ಯೆ ಶೀಘ್ರದಲ್ಲೇ 50% ತಲುಪುವ ನಿರೀಕ್ಷೆಯಿದೆ. ಹೀಗಾದಾಗ HRA ಮತ್ತೆ ಶೇಕಡಾ 3 ರಷ್ಟು ಹೆಚ್ಚಳವಾಗಲಿದೆ.