

Actress Sreeleela: ಕನ್ನಡ ಚಿತ್ರರಂಗದಲ್ಲಿ ಸಿನಿ ಜರ್ನಿ ಆರಂಭಿಸಿ ತೆಲುಗು ಚಿತ್ರರಂಗದಲ್ಲಿ ಮಿಂಚಿ ಭರ್ಜರಿ ಯಶಸ್ಸು ಕಂಡಿರುವ ನಟಿ ಶ್ರೀಲೀಲಾ (Sreeleela)ಇದೀಗ ಸಿನಿ ಲೋಕದಲ್ಲಿ ಸತತ ಸೋಲುಗಳನ್ನು ಕಾಣುತ್ತಿದ್ದಾರೆ. ನಟಿ ಶ್ರೀಲೀಲಾ ಅವರಿಗೆ ಸಿನಿಮಾ ಕ್ಷೇತ್ರದಲ್ಲಿ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಆದರೆ, ಅವರು ನಟಿಸಿರುವ ಇತ್ತೀಚಿನ ಚಿತ್ರಗಳು ಸೂಪರ್‌ಹಿಟ್ ಆಗದೆ ನಿರಾಶೆ ಮೂಡಿಸಿದೆಯಂತೆ. ಹೀಗಾಗಿ ನಟಿ ಶ್ರೀ ಲೀಲಾ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಶ್ರೀಲೀಲಾ ಅಭಿನಯದ ಸ್ಕಂದ, ಆದಿಕೇಶವ ಮತ್ತು ಎಕ್ಸ್‌ಟ್ರಾರ್ಡಿನರಿ ಮ್ಯಾನ್ ಚಿತ್ರಗಳು ನಿರೀಕ್ಷಿತ ಮಟ್ಟದಲ್ಲಿ ಹಿಟ್ ಆಗದೆ ನಿರಾಸೆ ಮೂಡಿಸಿದೆ. ಅದರಲ್ಲಿಯೂ ಇತ್ತೀಚಿಗೆ ಬಿಡುಗಡೆಯಾದ ಗುಂಟೂರು ಖಾರಂ ಸಿನಿಮಾದಲ್ಲಿ ಶ್ರೀಲೀಲಾ ಡ್ಯಾನ್ಸ್‌ಗೆ ಎಲ್ಲರೂ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದಾಗ್ಯೂ, ಆ ಚಿತ್ರ ಬ್ಲಾಕ್‌ಬಸ್ಟರ್ ಆಗದೆ ನಿರಾಸೆ ಮೂಡಿಸಿದೆ. ತೆಲುಗು ಗುಂಟೂರು ಸಿನಿಮಾದಲ್ಲಿ ನಟಿಸಿದ್ದ ಶ್ರೀಲೀಲಾ ಅವರು ಸದ್ಯ ಬೇರೆ ಯಾವ ಸಿನಿಮಾ ಒಪ್ಪಿಕೊಳ್ಳದೆ ಎಂಬಿಬಿಎಸ್ ಪರೀಕ್ಷೆಯತ್ತ ಚಿತ್ತ ವಹಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಶ್ರೀಲೀಲಾ ಎಂಬಿಬಿಎಸ್ ಓದುತ್ತಿರುವ ಸಂಗತಿ ಎಲ್ಲರಿಗೂ ಗೊತ್ತಿರುವಂತದ್ದೇ!! ಶ್ರೀಲೀಲಾ ಸಿನಿಮಾದಿಂದ ಸ್ವಲ್ಪ ಬ್ರೇಕ್ ತೆಗೆದುಕೊಂಡು ವಿದ್ಯಾಭ್ಯಾಸದತ್ತ ಗಮನ ಹರಿಸಲು ನಿರ್ಧಾರ ಮಾಡಿದ್ದಾರಂತೆ. . ಅಂತಿಮ ವರ್ಷದ ಪರೀಕ್ಷೆಗೆ ತಯಾರಿ ನಡೆಸಲು ಸಿನಿಮಾದಿಂದ ತುಸು ಬ್ರೇಕ್ ತೆಗೆದುಕೊಳ್ಳಲು ಅವರು ನಿರ್ಧರಿಸಿದ್ದಾರಂತೆ. ಗುಂಟೂರು ಖಾರಂ ಚಿತ್ರೀಕರಣಕ್ಕಾಗಿ ಕೆಲವು ಪರೀಕ್ಷೆಗಳನ್ನು ತಪ್ಪಿಸಿಕೊಂಡಿದ್ದಾರೆ ಎಂದು ಒಟಿಟಿ ಪ್ಲೇ ವರದಿ ಮಾಡಿದೆ. ಹೀಗಾಗಿ, ನಟಿ ಶ್ರೀಲೀಲಾ ಸಿನಿಮಾದಿಂದ ಸ್ವಲ್ಪ ಗ್ಯಾಪ್ ತೆಗೆದುಕೊಂಡು ಎಂಬಿಬಿಎಸ್ ಪರೀಕ್ಷೆಗೆ ತಯಾರಿ ನಡೆಸಲು ತೀರ್ಮಾನ ಕೈಗೊಂಡಿದ್ದಾರೆ. ಇದಾದ ಬಳಿಕ, ಕೊಂಚ ರೆಸ್ಟ್ ತೆಗೆದುಕೊಂಡು ಮತ್ತೆ ಸಿನಿಮಾಗಳಲ್ಲಿ ನಟಿಸಲಿದ್ದಾರೆ ಎಂದು ವರದಿಗಳು ತಿಳಿಸಿವೆ.













