Home latest Pakistan: ಅಯೋಧ್ಯೆಯ ರಾಮಲಲ್ಲಾ ಪ್ರಾಣ ಪ್ರತಿಷ್ಠೆ ಅಭಿಷೇಕಕ್ಕೆ ಪಾಕಿಸ್ತಾನದ ಶಕ್ತಿಪೀಠದ ನೀರು!!!

Pakistan: ಅಯೋಧ್ಯೆಯ ರಾಮಲಲ್ಲಾ ಪ್ರಾಣ ಪ್ರತಿಷ್ಠೆ ಅಭಿಷೇಕಕ್ಕೆ ಪಾಕಿಸ್ತಾನದ ಶಕ್ತಿಪೀಠದ ನೀರು!!!

Pakistan

Hindu neighbor gifts plot of land

Hindu neighbour gifts land to Muslim journalist

Pakisthan Hinglaj Mata mandir : ಇಡೀ ದೇಶದ ಜನತೆ ಎದುರು ನೋಡುತ್ತಿದ್ದ ಅಭೂತಪೂರ್ವ ಕ್ಷಣಕ್ಕೆ ಸಾಕ್ಷಿಯಾಗುವ ಅಯೋಧ್ಯೆಯ ರಾಮ ಮಂದಿರದಲ್ಲಿ (Ayodhya Ram Mandir) ಬಾಲ ರಾಮ ಮೂರ್ತಿಯ (Ram Lalla Idol) ಪ್ರತಿಷ್ಠಾಪನೆಗೆ ಕ್ಷಣಗಣನೆ ಆರಂಭವಾಗಿದೆ.

 

ದೇಶದ ಪ್ರಮುಖ ಪವಿತ್ರ ನದಿಗಳ ನೀರನ್ನು ರಾಮ ಲಲ್ಲಾನಿಗೆ ಅಭಿಷೇಕಕ್ಕಾಗಿ ಅಯೋಧ್ಯೆಗೆ ಒಯ್ಯಲಾಗುತ್ತಿದೆ. ಈ ನಡುವೆ, ಪಾಕಿಸ್ತಾನದಿಂದ (Pakistan) ಹಿಂಗ್ಲಾಜ್ ಶಕ್ತಿಪೀಠದ (Hinglaj Mata mandir) ನೀರು ಕೂಡ ಅಯೋಧ್ಯೆಗೆ ತಲುಪಲಿದ್ದು, ರಾಮ ಲಲ್ಲಾ ಅಭಿಷೇಕಕ್ಕೆ ಬಳಕೆಯಾಗಲಿದೆ. ಇಂದು (ಜನವರಿ 20) ವಾಸ್ತು ಶಾಂತಿಯ ಬಳಿಕ ರಾಮ ಲಾಲ್ಲಾ ಮೂರ್ತಿ ಸಿಂಹಾಸನಾರೂಢವಾಗಲಿದೆ. ಇದಕ್ಕೂ ಮೊದಲು ಧಾರ್ಮಿಕ ವಿಧಿ ವಿಧಾನಗಳಾದ ಶಕ್ರಧಿವಾಸ, ಫಲಾಧಿವಾಸ ಬೆಳಗ್ಗೆ ನಡೆದಿದೆ. ಸಂಜೆ ಪುಷ್ಪಧಿವಾಸ ನಡೆಯಲಿದ್ದು, ಇದರ ಜೊತೆಗೆ ಪಾಕಿಸ್ತಾನದ ಶಕ್ತಿಪೀಠದಿಂದ ಅಯೋಧ್ಯೆಗೆ ನೀರು ತಲುಪಲಿದೆ.

 

ಹಿಂಗ್ಲಾಜ್ ಮಾತಾ ದೇವಾಲಯವು ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ಹಿಂಗ್ಲಾಜ್‌ನಲ್ಲಿ ಹಿಂಗೋಲ್ ನದಿಯ ದಡದಲ್ಲಿರುವ ಹಿಂದೂ ದೇವಾಲಯವಾಗಿದೆ. ಇದು ಹಿಂದೂ ದೇವತೆ ಸತಿಗೆ ಸಮರ್ಪಿತವಾಗಿರುವ ಐವತ್ತೊಂದು ಶಕ್ತಿಪೀಠಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಕೆಲವು ಜಾನಪದ ಕಥೆಗಳಲ್ಲಿ ಹಿಂಗ್ಲಾಜ್ ಮಾತೆಯು ದೋಡಿಯಾ ರಜಪೂತ್ ಕುಟುಂಬದವರ ದೇವತೆ ಎಂದು ಉಲ್ಲೇಖವಾಗಿದೆ. ಕೆಲ ನಂಬಿಕೆಗಳ ಪ್ರಕಾರ, ಶಿವನು ಸತಿಯ ಅವಶೇಷಗಳೊಂದಿಗೆ ಮೂರು ಲೋಕಗಳನ್ನು ಸುತ್ತುತ್ತಿದ್ದಾಗ ವಿಷ್ಣುವು ಸತಿಯ ದೇಹವನ್ನು 51 ಭಾಗಗಳಾಗಿ ತುಂಡರಿಸಿದ್ದನಂತೆ. ಆಗ ಸತಿಯ ದೇಹದ ಭಾಗಗಳು ಬಿದ್ದ ವಿವಿಧ ಪ್ರದೇಶಗಳನ್ನು ಶಕ್ತಿ ಪೀಠ ಎಂದು ಕರೆಯಲಾಯಿತು. ಅವುಗಳಲ್ಲಿ ಹಿಂಗ್ಲಾಜ್ ಮಾತೆಯ ಪೀಠ ಕೂಡ ಒಂದು ಎಂಬ ನಂಬಿಕೆಯಿದೆ.