Gruha Jyothi Scheme:ರಾಜ್ಯ ಸರ್ಕಾರದಿಂದ ಗೃಹ ಜ್ಯೋತಿ ಫಲಾನುಭವಿಗಳಿಗೆ ಗುಡ್ ನ್ಯೂಸ್; ಸಂಪುಟದಿಂದ 10 ಯೂನಿಟ್ ಉಚಿತ ವಿದ್ಯುತ್ ನೀಡಲು ತೀರ್ಮಾನ!!

Share the Article

Gruha jyothi scheme: ಕಾಂಗ್ರೆಸ್(Congress)ಸರ್ಕಾರ ಪ್ರಮುಖ ಗ್ಯಾರಂಟಿಗಳಲ್ಲಿ ಒಂದಾದ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆ (gruha jyothi scheme) ನಿಯಮದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ.

ಗ್ಯಾರಂಟೀ ಯೋಜನೆಗಳ ಮೂಲಕ ರಾಜ್ಯದ ಜನತೆಗೆ ನೆರವಾದ ರಾಜ್ಯ ಸರ್ಕಾರ(State Government)ಇದೀಗ ಗೃಹಜ್ಯೋತಿ (Gruha Jyothi Scheme)ಫಲಾನುಭವಿಗಳಿಗೆ ಮತ್ತೊಂದು ಸಿಹಿಸುದ್ದಿ ನೀಡಿದೆ. ಹೆಚ್ಚುವರಿ ಶೇ. 10% ಬದಲಾಗಿ, 10 ಯೂನಿಟ್ ಉಚಿತ ವಿದ್ಯುತ್ ನೀಡಲು ತೀರ್ಮಾನ ಕೈಗೊಂಡಿದೆ.

ಇದನ್ನೂ ಓದಿ: SBI ಬ್ಯಾಂಕಿನಲ್ಲಿ ಖಾತೆ ಹೊಂದಿದ್ದೀರಾ?! ಹಾಗಿದ್ರೆ ಇಲ್ಲಿದೆ ನೋಡಿ ನಿಮಗೊಂದು ಭರ್ಜರಿ ಸಿಹಿ ಸುದ್ದಿ

ಈ ಮೊದಲು ಗೃಹ ಜ್ಯೋತಿ ಯೋಜನೆ ಅಡಿ ಬಳಸಿದ ಯುನಿಟ್ಗಿಂತ ಶೇ. 10ರಷ್ಟು ರಿಯಾಯಿತಿ ನೀಡಲಾಗುತ್ತಿತ್ತು. ಇದೀಗ ಶೇಕಡವಾರು ಬದಲಾಗಿ 10 ಯುನಿಟ್ ನೀಡಲು ಸರ್ಕಾರ ತೀರ್ಮಾನ ಕೈಗೊಂಡಿದ್ದು, ಈ ಬಗ್ಗೆ ಜನವರಿ 18ರಂದು ನಡೆದ ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಈ ಬಗ್ಗೆ ವಿಧಾನಸೌಧದಲ್ಲಿ ಸಂಪುಟ ಸಭೆಯ ಬಳಿಕ ಸಚಿವ ಹೆಚ್‌.ಕೆ.ಪಾಟೀಲ್‌ ಮಾಹಿತಿ ನೀಡಿದ್ದಾರೆ.

Leave A Reply