Tumakuru anganwadi Recruitment: ಉದ್ಯೋಗಾಂಕ್ಷಿಗಳೇ ಗಮನಿಸಿ, ತುಮಕೂರು ಅಂಗನವಾಡಿ 384 ಹುದ್ದೆಗಳ ಭರ್ತಿ; ಇಂದೇ ಅರ್ಜಿ ಸಲ್ಲಿಸಿ!!

Tumakuru Govt Jobs: ಉದ್ಯೋಗಾಂಕ್ಷಿಗಳೇ ಗಮನಿಸಿ, ನಿಮಗೊಂದು ಮುಖ್ಯ ಮಾಹಿತಿ(Tumakuru Govt Jobs) ಇಲ್ಲಿದೆ. ತುಮಕೂರು ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಖಾಲಿಯಿರುವ ಕಾರ್ಯಕರ್ತೆ ಹಾಗೂ ಸಹಾಯಕಿಯರ ಭರ್ತಿಗೆ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ (tumakuru district anganwadi recruitment 2024)ಅರ್ಜಿ ಆಹ್ವಾನ ಮಾಡಲಾಗಿದೆ.

Actress Kiara: ಐಸ್-ಬ್ಲೂ ಗೌನ್ ನಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡ ನಟಿ ಕಿಯಾರ

ಸದರಿ ಹುದ್ದೆಗಳಿಗೆ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಹುದ್ದೆಯ ಕುರಿತಂತೆ ಹೆಚ್ಚಿನ ವಿವರ ಇಲ್ಲಿದೆ ನೋಡಿ!!ಕನಿಷ್ಠ 10ನೇ ತರಗತಿ ಪಾಸಾದವರು, ಗರಿಷ್ಠ 12 ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಲು ಅವಕಾಶವಿದೆ.

ಹುದ್ದೆಗಳ ವಿವರ:

ಅಂಗನವಾಡಿ ಕಾರ್ಯಕರ್ತೆ: 106

ಅಂಗನವಾಡಿ ಸಹಾಯಕಿ: 278

ವೆಬ್‌ಸೈಟ್‌ ವಿಳಾಸ : https://karnemakaone.kar.nic.in

ಪ್ರಮುಖ ದಿನಾಂಕಗಳು:

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು 10-01-2024 ಆರಂಭಿಕ ದಿನವಾಗಿದೆ. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು 05-02-2024 ಕೊನೆಯ ದಿನವಾಗಿದೆ.

 

ವಿದ್ಯಾರ್ಹತೆ:

* ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ 12ನೇ ತರಗತಿ / ಡಿಪ್ಲೊಮ ಇಸಿಸಿಇ / ತತ್ಸಮಾನ ಶಿಕ್ಷಣ ಇಲ್ಲವೇ ಪಾಸ್ ಆಗಿರಬೇಕು.

* ಅಂಗನವಾಡಿ ಸಹಾಯಕಿಯರ ಹುದ್ದೆಗೆ 10ನೇ ತರಗತಿ ಪಾಸ್‌ ಆಗಿರಬೇಕು.

ಇದನ್ನೂ ಓದಿ: Polutry Farm Building: ವಿಟ್ಲ ಸಮೀಪದ ಕೊಳ್ನಾಡಿಯಲ್ಲಿ ಕೋಳಿ ಫಾರಂ ಕಟ್ಟಡ ಕುಸಿತ: 5, 000ಕ್ಕೂ ಅಧಿಕ ಕೋಳಿಗಳು ಬಲಿ!!

# ವಯೋಮಿತಿ :

ಯಾವುದೇ ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷವಾಗಿದ್ದು, ಗರಿಷ್ಠ ವಯೋಮಿತಿ 35 ವರ್ಷಗಳು ಮೀರಿರಬಾರದು.ಅಂಗನವಾಡಿ ಕಾರ್ಯಕರ್ತೆ ನೇಮಕಾತಿಗಳಲ್ಲಿ ವಿಕಲಚೇತನರಿಗೆ 10 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.

ಅರ್ಜಿ ಸಲ್ಲಿಸುವ ವಿಧಾನ ಹೀಗಿದೆ:

# ಮೊದಲಿಗೆ, ವೆಬ್‌ಸೈಟ್‌ ವಿಳಾಸ https://karnemakaone.kar.nic.in ಕ್ಕೆ ಭೇಟಿ ನೀಡಬೇಕು.

# ನೇಮಕಾತಿ ಬಯಸುವ ಜಿಲ್ಲೆಗೆ ಶಿಶು ಅಭಿವೃದ್ಧಿ ಯೋಜನೆ ಮತ್ತು ನೇಮಕಾತಿ ಬಯಸುವ ಹುದ್ದೆಯನ್ನು ಆಯ್ಕೆ ಮಾಡಬೇಕು.

# ಇದಾದ ಬಳಿಕ ನೀವು ಅರ್ಜಿ ಸಲ್ಲಿಸಲು ಇಚ್ಚಿಸುವ ಅಂಗನವಾಡಿ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಿ.

# ಅಪ್ಲಿಕೇಶನ್‌ ಫಾರ್ಮ್‌ ತೆರೆಯಲಿದ್ದು, ಅಗತ್ಯ ಮಾಹಿತಿಗಳನ್ನು ತುಂಬಿಸಿ ಅರ್ಜಿ ಸಲ್ಲಿಸಬಹುದು.

# ಪ್ರಮಾಣ ಪತ್ರಗಳನ್ನು ಆಯಾ ಹೆಸರಿನ ಮುಂದೆ ಇರುವ ಆಯ್ಕೆ ಬಟನ್‌ ಕ್ಲಿಕ್‌ ಮಾಡಿ ಅಪ್‌ಲೋಡ್ ಮಾಡಬೇಕು.

 

ಅರ್ಜಿಯೊಂದಿಗೆ ಲಗತ್ತಿಸಬೇಕಾದ ದಾಖಲೆಗಳು ಹೀಗಿವೆ:

* ಜನನ ಪ್ರಮಾಣ ಪತ್ರ / ಜನ್ಮ ದಿನಾಂಕ ಇರುವ ಎಸ್‌ಎಸ್‌ಎಲ್‌ಸಿ, ಪಿಯುಸಿ ಅಂಕಪಟ್ಟಿ

* ವಾಸಸ್ಥಳ ದೃಢೀಕರಣ ಪತ್ರ.

* ವಿದ್ಯಾರ್ಹತೆ ಬಗ್ಗೆ ಪ್ರಮಾಣ ಪತ್ರ.

* ಮೀಸಲಾತಿ ಮತ್ತು ಜಾತಿ ಪ್ರಮಾಣ ಪತ್ರ.

* ವಿಧವೆಯಾಗಿದ್ದಲ್ಲಿ ಪತಿಯ ಮರಣ ಪ್ರಮಾಣ ಪತ್ರ.

* ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಯಾಗಿದ್ದಲ್ಲಿ ಉಪವಿಭಾಗಾಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರ.

* ಯೋಜನಾ ನಿರಾಶ್ರಿತರಾಗಿದ್ದಲ್ಲಿ ಪ್ರಮಾಣ ಪತ್ರ.

* ವಿಚ್ಛೇದಿತರಾಗಿದ್ದಲ್ಲಿ ಪ್ರಮಾಣ ಪತ್ರ.

https://karnemakaone.kar.nic.in

Leave A Reply

Your email address will not be published.