Hit And Run Law: ಹಿಟ್‌ ಆಂಡ್‌ ರನ್‌ ಕಠಿಣ ಕಾನೂನು ಕುರಿತು ಕೇಂದ್ರದಿಂದ ಮಹತ್ವದ ಆದೇಶ ಜಾರಿ!!

Hit And Run Law: ಕೇಂದ್ರ ಸರ್ಕಾರ (Central Government)ಜಾರಿಗೆ ಹಿಟ್ ಆ್ಯಂಡ್ ರನ್ ಕಠಿಣ ಕಾನೂನು (Hit And Run Law) ಜಾರಿಗೆ ತರಲು ಮುಂದಾಗಿತ್ತು. ಇದನ್ನು ಖಂಡಿಸಿ ಟ್ಯಾಂಕರ್ಸ್, ಬಸ್ ಸೇರಿದಂತೆ ವಾಣಿಜ್ಯ ಬಳಕೆಯ ವಾಹನಗಳ ಚಾಲಕರು ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದರು.

 

ಫೆಡರೇಷನ್ ಆಫ್ ಕರ್ನಾಟಕ ಲಾರಿ ಓನರ್ಸ್ ಅಸೋಸಿಯೇಷನ್ ಕರ್ನಾಟಕದಲ್ಲಿ ಜನವರಿ 17ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ. ಇದರ ಬೆನ್ನಲ್ಲೇ, ಕೇಂದ್ರ ಸರ್ಕಾರವು (Central Government) ಹಿಟ್ ಆ್ಯಂಡ್ ರನ್ ಕಠಿಣ ಕಾನೂನು ಜಾರಿ ಸದ್ಯಕ್ಕೆ ಜಾರಿಗೆ ತರುವುದಿಲ್ಲ ಎಂದು ತಿಳಿಸಿದೆ. ಹೀಗಾಗಿ, ಸಂಘಟನೆಗಳು ಅನಿರ್ದಿಷ್ಟಾವಧಿ ಮುಷ್ಕರ ವಾಪಸ್ ಪಡೆದಿದೆ.

ಇದನ್ನೂ ಓದಿ: Masked Aadhar: ಆಧಾರ್ ಕಾರ್ಡ್ ನಂಬರ್ ಲೀಕ್ ಆಗುವ ಭಯವೇ?! ಟೆನ್ಶನ್ ಬಿಡಿ, UIDAI ಪರಿಚಯಿಸಿದೆ ಹೊಸ ವ್ಯವಸ್ಥೆ !!

ಭಾರತೀಯ ನ್ಯಾಯ್ ಸಂಹಿತಾ (ಬಿಎನ್ಎಸ್) ಅಡಿಯಲ್ಲಿ, ನಿರ್ಲಕ್ಷ್ಯದ ಚಾಲನೆಯಿಂದ ಗಂಭೀರವಾದ ರಸ್ತೆ ಅಪಘಾತವನ್ನು ಉಂಟುಮಾಡುವ ಹಾಗೂ ಪೊಲೀಸರಿಗೆ ತಿಳಿಸದೆ ಓಡಿಹೋದ ಚಾಲಕರು 10 ವರ್ಷಗಳವರೆಗೆ ಶಿಕ್ಷೆ ಅಥವಾ 7 ಲಕ್ಷ ರೂ. ದಂಡವನ್ನು ಪಾವತಿ ಮಾಡಬೇಕಾಗುತ್ತದೆ. ಇದರ ನಡುವೆ, ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರು ಆಲ್ ಇಂಡಿಯಾ ಮೋಟರ್ ಟ್ರಾನ್ಸ್ಪೋರ್ಟ್ ಕಾಂಗ್ರೆಸ್ನ (AIMTC) ಮುಖಂಡರ ಜತೆ ಮಾತುಕತೆ ನಡೆಸಿ ಎಐಎಂಟಿಸಿ ಜೊತೆಗೆ ಚರ್ಚೆ ನಡೆಸಿ ಹಿಟ್ ಆ್ಯಂಡ್ ರನ್ ಕಾನೂನು ಜಾರಿಗೆ ತರಲಾಗುತ್ತದೆ. ಅಲ್ಲಿಯವರೆಗೆ ಕಾನೂನು ಜಾರಿಯಾಗುವುದಿಲ್ಲ ಎಂದು ಭರವಸೆ ನೀಡಿದ್ದು, ಈ ಕುರಿತು ಭಲ್ಲಾ ಅವರು ಪ್ರಕಟಣೆ ಹೊರಡಿಸಿದ್ದಾರೆ.

Leave A Reply

Your email address will not be published.