Masked Aadhar: ಆಧಾರ್ ಕಾರ್ಡ್ ನಂಬರ್ ಲೀಕ್ ಆಗುವ ಭಯವೇ?! ಟೆನ್ಶನ್ ಬಿಡಿ, UIDAI ಪರಿಚಯಿಸಿದೆ ಹೊಸ ವ್ಯವಸ್ಥೆ !!

Masked Aadhaar: ಪ್ರತಿಯೊಬ್ಬ ವ್ಯಕ್ತಿಯು ಆಧಾರ್ ಕಾರ್ಡ್ ಹೊಂದಿರಬೇಕಾಗುತ್ತದೆ. ಆಧಾರ್ ಜನರ ಪ್ರಮುಖ ದಾಖಲೆಗಳಲ್ಲಿ ಒಂದಾಗಿದ್ದು, ಪ್ಯಾನ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಸೇವೆಗಳೊಂದಿಗೆ ಸರ್ಕಾರದ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್ ಬೇಕಾಗುತ್ತದೆ.12 ಅಂಕಿಗಳ ಆಧಾರ್ ನಂಬರ್ ಅನ್ನು ದುರುಪಯೋಗ ಆಗುವುದನ್ನು ತಪ್ಪಿಸಲು ಯುಐಡಿಎಐ ಮಾಸ್ಕ್ಡ್ ಆಧಾರ್(Masked Aadhaar) ಸೌಲಭ್ಯ ನೀಡಿದೆ.

ಆಧಾರ್ ಸಂಖ್ಯೆ ದುರ್ಬಳಕೆ ಆಗದಂತೆ ತಡೆಯಲು ಮಾಸ್ಕ್ ಆಧಾರ್ ವ್ಯವಸ್ಥೆ ಮಾಡಲಾಗಿದೆ. ಮಾಸ್ಕ್ಡ್ ಆಧಾರ್ ಅಥವಾ ಮಸುಕು ಮಾಡಿದ ಆಧಾರ್ ಸಂಖ್ಯೆಯ ಕೊನೆ ನಾಲ್ಕಂಕಿ ಬಿಟ್ಟು ಉಳಿದ ಅಂಕಿಗಳು ಮುಚ್ಚಿರುತ್ತವೆ. ಆದರೆ, ಹೆಸರು, ಫೋಟೋ ಇತ್ಯಾದಿ ಡೆಮೋಗ್ರಾಫಿಕ್ ಮಾಹಿತಿ ಕಾಣಿಸುತ್ತದೆ.

ಇದನ್ನೂ ಓದಿ: Maldives and lakshadweep: ಲಕ್ಷದ್ವೀಪಕ್ಕೆ ಮೋದಿ ಭೇಟಿ- ಮಾಲ್ಡೀವ್ಸ್’ಗೆ ಆದ ನಷ್ಟ ಕೇಳಿದ್ರೆ ದಂಗಾಗ್ತೀರಾ !!

ಮಾಸ್ಕ್ ಮಾಡಿದ ಆಧಾರ್ ಡೌನ್ಲೋಡ್ ಮಾಡುವ ವಿಧಾನ ಹೀಗಿದೆ:

# ಮೊದಲಿಗೆ ಯುಐಡಿಎಐ uidai.gov.in ಭೇಟಿ ನೀಡಿ.

# ಮುಖ್ಯಪುಟದಲ್ಲಿ ಮೈ ಆಧಾರ್ ಸೆಕ್ಷನ್ಗೆ ಹೋಗಿ, ಅಲ್ಲಿ ‘ಡೌನ್ಲೋಡ್ ಆಧಾರ್’ ಅನ್ನು ಕ್ಲಿಕ್ ಮಾಡಿಕೊಳ್ಳಿ

# ಆಧಾರ್ ಡೌನ್ಲೋಡ್ ಪುಟ ತೆರೆದುಕೊಳ್ಳಲಿದ್ದು, ಇಲ್ಲಿ 12 ಅಂಕಿಗಳ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು. ಇಲ್ಲವೇ 16 ಅಂಕಿಗಳ ವರ್ಚುವಲ್ ಐಡಿ ಸಂಖ್ಯೆ ನಮೂದಿಸಿ.

# ಆಧಾರ್ನಲ್ಲಿರುವ ಹಾಗೆ ಪೂರ್ಣ ಹೆಸರು, ಪಿನ್ ಕೋಡ್, ಸೆಕ್ಯುರಿಟಿ ಕೋಡ್ ವಿವರವನ್ನು ಈ ಪುಟದಲ್ಲಿ ನಮೂದಿಸಬೇಕು.

# ಇದಾದ ಬಳಿಕ ‘ಸೆಲೆಕ್ಟ್ ಯುವರ್ ಪ್ರಿಫರೆನ್ಸ್’ ಸೆಕ್ಷನ್ನಲ್ಲಿ ‘ಮಾಸ್ಕ್ಡ್ ಆಧಾರ್’ ಅನ್ನು ಆಯ್ಕೆ ಮಾಡಿಕೊಳ್ಳಿ.

# ನೊಂದಾಯಿತ ಮೊಬೈಲ್ ನಂಬರ್ಗೆ ಬರುವ ಒಟಿಪಿಯನ್ನು ನಮೂದಿಸಿದರೆ ವೆರಿಫಿಕೇಶನ್ ಪ್ರಕ್ರಿಯೆ ಮುಗಿಯಲಿದೆ. ಮಸುಕು ಮಾಡಿದ ಆಧಾರ್ ಅನ್ನು ಪಿಡಿಎಫ್ ಫಾರ್ಮ್ಯಾಟ್ನಲ್ಲಿ ಡೌನ್ಲೋಡ್ ಮಾಡಬಹುದು.

Leave A Reply

Your email address will not be published.