Home News Controversy Post: ‘ಭಾರತೀಯ ಮುಸ್ಲಿಮರಿಗೆ ಪ್ರತ್ಯೇಕ ದೇಶ ಬೇಕು’; ವಿವಾದಾತ್ಮಕ ಪೋಸ್ಟ್ ಮಾಡಿ ಪೇಚಿಗೆ ಸಿಲುಕಿದ...

Controversy Post: ‘ಭಾರತೀಯ ಮುಸ್ಲಿಮರಿಗೆ ಪ್ರತ್ಯೇಕ ದೇಶ ಬೇಕು’; ವಿವಾದಾತ್ಮಕ ಪೋಸ್ಟ್ ಮಾಡಿ ಪೇಚಿಗೆ ಸಿಲುಕಿದ ವಿವಿ ಪ್ರೊಫೆಸರ್ !!

Hindu neighbor gifts plot of land

Hindu neighbour gifts land to Muslim journalist

Controversy Post: ಬಿಹಾರ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರು(Bihar Professor) ತಮ್ಮ ಸಾಮಾಜಿಕ ಮಾಧ್ಯಮಗಳ ಪೋಸ್ಟ್ ಮೂಲಕ “ಮುಸ್ಲಿಮರಿಗೆ ಪ್ರತ್ಯೇಕ ದೇಶ ಬೇಕು ” ಎಂದು ವಿವಾದಾತ್ಮಕ (Controversy Post) ಪೋಸ್ಟ್ ಮಾಡಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

 

ಖುರ್ಷಿದ್ ಆಲಂ ಬಿಹಾರದ ಜೈ ಪ್ರಕಾಶ್ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ ಎನ್ನಲಾಗಿದೆ. ಖುರ್ಷಿದ್ ಆಲಂ ಅವರು ಅವರು ಎರಡು ಭಾರತ ವಿರೋಧಿ ಬರಹಗಳನ್ನು ಬರೆದಿದ್ದಾರೆ ಎನ್ನಲಾಗಿದೆ. ಒಂದು ಪೋಸ್ಟ್ನಲ್ಲಿ , “ಯುನೈಟೆಡ್ ಪಾಕಿಸ್ತಾನ ಮತ್ತು ಬಾಂಗ್ಲಾದೇಶ #Zindabad” ಎಂದು ಬರೆದುಕೊಂಡಿದ್ದಾರೆ.

 

ಮತ್ತೊಂದರಲ್ಲಿ ಭಾರತೀಯ ಮುಸ್ಲಿಮರು ಪಾಕಿಸ್ತಾನ ಮತ್ತು ಬಾಂಗ್ಲಾದೇಶಕ್ಕೆ ಹೊಂದಿಕೊಂಡಿರುವ ಪ್ರತ್ಯೇಕ ತಾಲ್ನಾಡನ್ನು ಬಯಸುತ್ತಾರೆ” ಎಂದು ಕೆಲವು ದಿನಗಳ ಹಿಂದೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರಂತೆ. ಇವರ ಸಾಮಾಜಿಕ ಮಾಧ್ಯಮದ ಪೋಸ್ಟ್ ಗಮನಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿತ್ತು. ಇದಾದ ಬಳಿಕ ಕಾಲೇಜು ಆಡಳಿತ ಮಂಡಳಿ ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಣೆ ನೀಡುವ ಆರೋಪದ ಮೇರೆಗೆ ಖುರ್ಷಿದ್ ಆಲಂ ಅವರಿಗೆ ಶೋಕಾಸ್ ನೋಟಿಸ್ ನೀಡಿತ್ತು. ಹೀಗಾಗಿ, ಪ್ರೊಫೆಸರ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ.