Muslim Community:ಅಯೋಧ್ಯೆ ರಾಮ ಮಂದಿರ ಪ್ರತಿಷ್ಠಾಪನೆ ನಡುವೆ ಮುಸ್ಲಿಂ ನಾಯಕನ ಅಚ್ಚರಿಯ ಹೇಳಿಕೆ!ಮುಸ್ಲಿಮರು ಈ ದಿನದವರೆಗೆ ಯಾರೂ ಮನೆಯಿಂದ ಹೊರ ಬರದಂತೆ ಮನವಿ!!

Muslim Community: ಅಯೋಧ್ಯೆಯ ರಾಮಮಂದಿರದಲ್ಲಿ (Ayodhya Ram Mandir) ಜನವರಿ 22ರಂದು ನಡೆಯಲಿರುವ ಬಾಲರಾಮ ವಿಗ್ರಹದ ಪ್ರತಿಷ್ಠಾಪನೆಯ ಕುರಿತು ದಿನಕ್ಕೊಂದು ವಿವಾದಾತ್ಮಕ ಹೇಳಿಕೆಗಳು ಕೇಳಿ ಬರುತ್ತಿವೆ. ಈ ನಡುವೆ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (AIUDF) ಅಧ್ಯಕ್ಷ ಹಾಗೂ ಲೋಕಸಭಾ ಸದಸ್ಯ ಬದ್ರುದ್ದೀನ್ ಅಜ್ಮಲ್ ಅವರು ನೀಡಿರುವ ಹೇಳಿಕೆಗೆ ಭಾರೀ ಚರ್ಚೆಗೆ ಕಾರಣವಾಗಿದೆ.

 

ಸುದ್ದಿ ಸಂಸ್ಥೆ ಎಎನ್‌ಐ ಪ್ರಕಾರ, ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (AIUDF) ಅಧ್ಯಕ್ಷ ಹಾಗೂ ಲೋಕಸಭಾ ಸದಸ್ಯ ಬದ್ರುದ್ದೀನ್ ಅಜ್ಮಲ್ ಅವರು ಅಸ್ಸಾಂನ ಬಾರ್ಪೇಟಾದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮುಸ್ಲಿಮರಿಗೆ ವಿಶೇಷ ಮನವಿ ಸಲ್ಲಿಸಿದ್ದಾರೆ. ‘ನಾವು (ಮುಸ್ಲಿಮರು) ಜಾಗರೂಕರಾಗಿರಬೇಕು. ಮುಸ್ಲಿಮರು ಜನವರಿ 20 ರಿಂದ 25 ರವರೆಗೆ ಎಲ್ಲಿಗೇ ಆದರೂ ಪ್ರಯಾಣಿಸುವುದನ್ನು ತಪ್ಪಿಸಬೇಕಾಗಿದೆ. ಇಡೀ ಜಗತ್ತು ರಾಮ ಜನ್ಮಭೂಮಿಯಲ್ಲಿ ರಾಮಲಾಲಾ ಪ್ರತಿಮೆ ಸ್ಥಾಪನೆಯನ್ನು ನೋಡಲಿದೆ. ಹೀಗಾಗಿ, ನಾವು ಶಾಂತಿ ಕಾಪಾಡಬೇಕು. ಈ ನಿಟ್ಟಿನಲ್ಲಿ ಎಲ್ಲಾ ಮುಸ್ಲಿಮರು ಜನವರಿ 20 ರಿಂದ 25 ರವರೆಗೆ ತಮ್ಮ ಮನೆಗಳಲ್ಲಿಯೇ ಇರುವಂತೆ ಮನವಿ ಮಾಡಿದ್ದಾರೆ. ಬಿಜೆಪಿ ಮುಸ್ಲಿಂ ಸಮುದಾಯದ ದೊಡ್ದ ಶತ್ರು, ನಮ್ಮ ಜೀವನ, ನಂಬಿಕೆ, ಮಸೀದಿಗಳು, ಇಸ್ಲಾಮಿಕ್ ಕಾನೂನುಗಳು ಮತ್ತು ನಮ್ಮ ಅಜಾನ್‌ನ ಶತ್ರು ಎಂದು ಬದ್ರುದ್ದೀನ್ ಅಜ್ಮಲ್ ಬಿಜೆಪಿಯ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ.

Leave A Reply

Your email address will not be published.