Aditya-L1 satellite: ISRO ಹಿರಿಮೆಗೆ ಮತ್ತೊಂದು ಗರಿಮೆ: ನಿಗದಿತ ಹಾಲೋ ಕಕ್ಷೆ ಸೇರಿದ ಆದಿತ್ಯ L1!!
Aditya-L1 satellite: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ(ISRO) ಮಹತ್ವಾಕಾಂಕ್ಷಿ ಆದಿತ್ಯ-ಎಲ್1 ಮಿಷನ್ (Aditya-L1 satellite)ಇಂದು ತನ್ನ ಗಮ್ಯಸ್ಥಾನವಾಗಿರುವ ಎಲ್-1 ಪಾಯಿಂಟ್ (L1)ಅನ್ನು ಯಶಸ್ವಿಯಾಗಿ ತಲುಪಿದೆ. ಈ ಮೂಲಕ ಹೊಸ ವರ್ಷದಲ್ಲಿ ಇಸ್ರೋ ಮಹತ್ವದ ಐತಿಹಾಸಿಕ ಸಾಧನೆ ಮಾಡಿದೆ.
ಸೂರ್ಯನ ಅಧ್ಯಯನವು ಸೌರ ಚಂಡಮಾರುತಗಳ ಬಗ್ಗೆ ಎಚ್ಚರಿಕೆ ನೀಡುತ್ತದೆ. ಸೌರ ಜ್ವಾಲೆಗಳು ಮತ್ತು ಸೌರ ಬಿರುಗಾಳಿಗಳಿಂದ ಭಾರತದ ಉಪಗ್ರಹಗಳು ಮತ್ತು ಸಂವಹನ ಜಾಲಗಳನ್ನು ಅಡ್ಡಿಪಡಿಸದಂತೆ ರಕ್ಷಿಸುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಭಾರತದ ಆದಿತ್ಯ ಉಪಗ್ರಹವನ್ನು ಎಲ್ 1 ಬಿಂದುವಿನಿಂದ ಹ್ಯಾಲೋ ಕಕ್ಷೆಗೆ ಸೇರಿಸಲಾಗಿದೆ.ಆದಿತ್ಯ ಎಲ್ 1 ಬಾಹ್ಯಾಕಾಶ ನೌಕೆಯನ್ನು ಸೆಪ್ಟೆಂಬರ್ 2, 2023 ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ (SDSC) ಉಡಾವಣೆ ಮಾಡಲಾಯಿತು.
ಈ ಕಾರ್ಯಾಚರಣೆಯು ಸುಮಾರು ಮೂರು ವರ್ಷಗಳ ಕಾಲ ತನ್ನ ಕಾರ್ಯನಿರ್ವಹಿಸಲಿದೆ.ಐದು ತಿಂಗಳ ಬಳಿಕ 6 ಜನವರಿ 2024 ರ ಸಂಜೆ, ಈ ಉಪಗ್ರಹವು ಎಲ್ 1 ಬಿಂದುವನ್ನು ತಲುಪಿದ್ದು, ಈ ಬಿಂದುವಿನ ಸುತ್ತಲೂ ಸೌರ ಹ್ಯಾಲೋ ಕಕ್ಷೆಯನ್ನು ನಿಯೋಜಿಸಲಾಗಿದೆ. ಈ ಉಪಗ್ರಹವನ್ನು ಭೂಮಿಯಿಂದ ಸುಮಾರು 1.5 ಮಿಲಿಯನ್ ಕಿಮೀ ದೂರದಲ್ಲಿರುವ ಸೂರ್ಯ-ಭೂಮಿಯ ವ್ಯವಸ್ಥೆಯ ಹಾಲೋ ಕಕ್ಷೆಯಲ್ಲಿ ಇರಿಸಲಾಗುತ್ತದೆ.