Power Outage:’ರಾಮಮಂದಿರ’ ಉದ್ಘಾಟನೆ ದಿನ ರಾಜ್ಯಾದ್ಯಂತ ವಿದ್ಯುತ್ ಸ್ಥಗಿತ !!
Ram Mandir Inauguration: ರಾಜ್ಯಾದ್ಯಂತ ‘ರಾಮಮಂದಿರ’ (Ram Mandir inauguration)ಉದ್ಘಾಟನೆ ದಿನ ವಿದ್ಯುತ್ ಸ್ಥಗಿತ( power outage)ಮಾಡಲಿದೆ ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ಗಂಭೀರ ಆರೋಪ ಮಾಡಿದೆ.
ಕರ್ನಾಟಕದ ರೈತ ವಿರೋಧಿ ಸರ್ಕಾರವಾಗಿರುವ ಕಾಂಗ್ರೆಸ್ ರೈತರಿಗೆ ಹೆಚ್ಚು ಉಪಟಳ ನೀಡುತ್ತಿದೆ. ರೈತರ ಸಹಾಯಧನ, ಸಾಲ ಸೌಲಭ್ಯಕ್ಕೆ ಕತ್ತರಿ ಹಾಕಿದ್ದು ಸಾಲದು ಎಂಬಂತೆ ರೈತರ ಆತ್ಮಹತ್ಯೆಗಳನ್ನೂ ಕೂಡ ಕಾಂಗ್ರೆಸ್ ಲೇವಡಿ ಮಾಡಿದೆ. ಬರದಿಂದ ಕಂಗೆಟ್ಟಿರುವ ರೈತರಿಗೆ ಗಾಯದ ಮೇಲೆ ಬರೆ ಎಳೆದಂತೆ ಲೋಡ್ ಶೆಡ್ಡಿಂಗ್ ದರ ಕೂಡ ಹಾಕಲಾಗುತ್ತಿದೆ ಎಂದು ಬಿಜೆಪಿ(BJP)ಕಾಂಗ್ರೆಸ್(Congress)ವಿರುದ್ಧ ಕಿಡಿಕಾರಿದೆ.
ಈ ಕುರಿತು ಬಿಜೆಪಿ ಎಕ್ಸ್ ನಲ್ಲಿ ಟ್ವಿಟ್ ಮಾಡಿದ್ದು, ಶ್ರೀರಾಮ ಮಂದಿರದ ಉದ್ಘಾಟನೆ ಜನವರಿ 22 ರಂದು ಅದ್ಧೂರಿಯಾಗಿ ನಡೆಯಲಿದ್ದು, ಇಡೀ ದೇಶವೇ ಸಂಭ್ರಮದಲ್ಲಿರುವಾಗ ರಾಜ್ಯ ಸರ್ಕಾರ ರಾಜ್ಯದಲ್ಲಿ ಸಂಭ್ರಮವನ್ನು ಕೆಡಿಸಲು ಶತಾಯ ಗತಾಯ ಪ್ರಯತ್ನ ನಡೆಸುತ್ತಿದೆ. ಕುತಂತ್ರಗಳ ಮೂಲಕ ಅಯೋಧ್ಯಗೆ ಹೋಗುವವರಿಗೆ ಗೋಧ್ರಾ ಬೆದರಿಕೆ ಹಾಕಲಾಗುತ್ತಿದೆ. ಈ ಅಮೋಘ ಘಳಿಗೆ ವೇಳೆ ಸುಳ್ಳು ಸುದ್ದಿ ಹಬ್ಬಿಸಿ ರಾಮ ಭಕ್ತರು ಸಂಭ್ರಕಾಚರಣೆ ಮಾಡದಂತೆ 144 ಸೆಕ್ಷನ್ ಜಾರಿ ರಾಜ್ಯಾದ್ಯಂತ 22 ರಂದು ವಿದ್ಯುತ್ ಸ್ಥಗಿತ ಮಾಡಲಾಗುತ್ತಿದೆ. ಮನೆ ಮನೆಯ ಟಿವಿ ಕೇಬಲ್ ಸಂಪರ್ಕ ತಪ್ಪಿಸುವ ಯೋಜನೆ ಕೂಡ ಇದೆ. ರಾಮ ಬಂಟ ಹನುಮನ ನಾಡಿನಲ್ಲಿ ಅವರ ಸರ್ಕಾರದ ದುರಾಡಳಿತಕ್ಕೆ, ಕುತಂತ್ರಕ್ಕೆ, ರಾಜ್ಯದ ಜನರು ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠಕಲಿಸಲಿದ್ದಾರೆ ಎಂದು ಬಿಜೆಪಿ ಕಾಂಗ್ರೆಸ್ ವಿರುದ್ಧ ಆರೋಪ ಮಾಡಿದೆ.
https://x.com/BJP4Karnataka/status/1743507614338814330?s=20