Home latest Andhrapradesh: ಮದ್ಯದ ಬಾಟಲಿ ಹಿಡಿದು ಬಾಲಕರ ಫೋಟೋ ಶೂಟ್: ಇದರ ಹಿಂದಿನ ಅಸಲಿಯತ್ತೇನು?? ಪೋಲಿಸರು ಹೇಳಿದ್ದೇನು??

Andhrapradesh: ಮದ್ಯದ ಬಾಟಲಿ ಹಿಡಿದು ಬಾಲಕರ ಫೋಟೋ ಶೂಟ್: ಇದರ ಹಿಂದಿನ ಅಸಲಿಯತ್ತೇನು?? ಪೋಲಿಸರು ಹೇಳಿದ್ದೇನು??

Andhrapradesh

Hindu neighbor gifts plot of land

Hindu neighbour gifts land to Muslim journalist

Andhrapradesh: ಆಂಧ್ರದಲ್ಲಿ(Andhra) ಹೊಸ ವರ್ಷದ ಆಚರಣೆಯಲ್ಲಿ (New Year Party)ಮುಳುಗಿದ್ದ ಬಾಲಕರ ಗುಂಪೊಂದು ಮದ್ಯದ ಬಾಟಲಿಗಳನ್ನು(Liquor Bottles)ಹಿಡಿದು ಸಂಭ್ರಮಿಸಿದ ವಿಡಿಯೋವೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್(Social Media viral)ಆಗಿ ಸಂಚಲನ ಮೂಡಿಸಿತ್ತು. ಸದ್ಯ, ವೈರಲ್ ಆದ ಈ ವೀಡಿಯೋ ಕುರಿತು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

ಆಂಧ್ರಪ್ರದೇಶದ ಬಾಲಕರ ಹಾಸ್ಟೆಲ್‌ವೊಂದರಲ್ಲಿ (Hostel)ಡಿ.31 ರ ರಾತ್ರಿ ವೇಳೆಗೆ ಹೊಸ ವರ್ಷದ ಸಂಭ್ರಮದಲ್ಲಿ 7 ನೇ ತರಗತಿಯ ವಿದ್ಯಾರ್ಥಿಗಳು ಮದ್ಯದ ಬಾಟಲಿಗಳೊಂದಿಗೆ ಸಂಭ್ರಮಿಸುತ್ತಿದ್ದರು ಎನ್ನುವ ಬರಹದೊಂದಿಗಿನ ವಿಡಿಯೋವೊಂದು ಸೋಶೀಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅದರಲ್ಲಿಯೂ ಅಪ್ರಾಪ್ತ ವಿದ್ಯಾರ್ಥಿಗಳು ಮದ್ಯ ಹಾಗೂ ಡ್ರಗ್ಸ್‌ ಸೇವನೆ ಮಾಡಿದ್ದಾರೆ ಎಂದು ವೈರಲ್‌ ವಿಡಿಯೋದಲ್ಲಿ ಉಲ್ಲೇಖ ಮಾಡಲಾಗಿತ್ತು. ಪೊಲೀಸರು ಈ ವಿಡಿಯೋ ಹಿಂದಿನ ಸತ್ಯವನ್ನು ಬಹಿರಂಗ ಪಡಿಸಿದ್ದಾರೆ.

ಇದನ್ನು ಓದಿ: Pension Scheme: ಈ ಯೋಜನೆಯಲ್ಲಿ ಪ್ರತಿ ತಿಂಗಳು ಜಸ್ಟ್ 210 ರೂ. ಠೇವಣಿ ಮಾಡಿ, ವೃದ್ಧಾಪ್ಯದಲ್ಲಿ ಪ್ರತಿ ತಿಂಗಳು 5,000 ರೂ. ಪಿಂಚಣಿ ಪಡೆಯಿರಿ!!

ಡಿಸೆಂಬರ್ 31 ರಂದು ಈ ಘಟನೆ ನಡೆದಿದ್ದು, ವಿಡಿಯೋವನ್ನು ಮೆಕ್ಯಾನಿಕ್ ಚಿತ್ರೀಕರಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ವೀಡಿಯೋ ಚಿತ್ರೀಕರಣ ನಡೆದ ಘಟನಾ ಸ್ಥಳವು ಹಾಸ್ಟೆಲ್ ಆಗಿರದೇ ಹಾಸ್ಟೆಲ್ ಪಕ್ಕದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡವಾಗಿದೆ. ವಿಡಿಯೋವನ್ನು ರೀಲ್ಸ್ ಗಾಗಿ ಚಿತ್ರೀಕರಿಸಲಾಗಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.‌ಈ ವಿಡಿಯೋದಲ್ಲಿರುವ ವಿದ್ಯಾರ್ಥಿಗಳು ಯಾವುದೇ ಮದ್ಯ ಅಥವಾ ಮಾದಕ ದ್ರವ್ಯ ಸೇವನೆ ಮಾಡಿಲ್ಲ ಎನ್ನಲಾಗಿದೆ. ಹಾಸ್ಟೆಲ್ ಪಕ್ಕದಲ್ಲಿ ವಾಸವಿದ್ದ ಎಸಿ ಮೆಕ್ಯಾನಿಕ್ ಹಾಗೂ ಕಾರು ಚಾಲಕ ಸೇರಿ ಮದ್ಯ ಸೇವಿಸಿದ್ದು, ರೀಲ್ಸ್ ಮಾಡುವ ನೆಪದಲ್ಲಿ ವಿದ್ಯಾರ್ಥಿಗಳು ಆ ಸ್ಥಳದಲ್ಲಿ ಕುಳಿತು ಬಿರಿಯಾನಿ ತಿನ್ನುತ್ತಿದ್ದಾಗ ವಿಡಿಯೋ ಚಿತ್ರೀಕರಣ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಾಸ್ಟೆಲ್ ಆಡಳಿತದ ವಿರುದ್ಧ ಆಡಳಿತಾತ್ಮಕ ಕ್ರಮ ಕೈಗೊಳ್ಳಲಾಗಿದ್ದು, ಈಗ ನಾವು ವೀಡಿಯೊವನ್ನು ಪರಿಶೀಲಿಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.