Home Interesting Fruit Flies:ಎಷ್ಟೇ ಜೋಪಾನ ಮಾಡಿದರೂ ಹಣ್ಣುಗಳಿಗೆ ಕೀಟಗಳ ಉಪಟಳವೇ?! ಈ ವಿಧಾನ ಬಳಸಿದ್ರೆ ಹತ್ತಿರಕ್ಕೂ ಸುಳಿಯಲ್ಲ

Fruit Flies:ಎಷ್ಟೇ ಜೋಪಾನ ಮಾಡಿದರೂ ಹಣ್ಣುಗಳಿಗೆ ಕೀಟಗಳ ಉಪಟಳವೇ?! ಈ ವಿಧಾನ ಬಳಸಿದ್ರೆ ಹತ್ತಿರಕ್ಕೂ ಸುಳಿಯಲ್ಲ

Image credit source: terro.com

Hindu neighbor gifts plot of land

Hindu neighbour gifts land to Muslim journalist

Fruit Flies: ಹಣ್ಣುಗಳ(Fruits)ಸೇವನೆ ಮಾಡುವುದು ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ.ಆದರೆ, ಹಣ್ಣುಗಳನ್ನು ಮನೆಗೆ ತಂದ ಬಳಿಕ ಅದನ್ನು ಶೇಖರಣೆ ಮಾಡುವುದು (Kitchen Hacks)ಕೂಡ ಮುಖ್ಯ. ಆದರೆ, ಹಣ್ಣನ್ನು ಸರಿಯಾಗಿ ಶೇಖರಣೆ ಮಾಡದೇ ಹೋದರೆ ಕೀಟಗಳು(Fruit Flies)ಅದರ ಮೇಲೆ ಮುತ್ತಿಕುತ್ತವೆ.

 ಹಣ್ಣುಗಳನ್ನು ಮನೆಯಲ್ಲಿ ಎಲ್ಲಿಟ್ಟರೂ ಹಣ್ಣಿನ ನುಸಿಗಳು (flies on fruits) ಹಣ್ಣಿನ ಮೇಲೆ ಕೂರುತ್ತದೆ. ಇದರಿಂದ ರೋಗಾಣುಗಳು ಹರಡುವ ಜೊತೆಗೆ ಇದರ ಸೇವನೆಯಿಂದ ಅನಾರೋಗ್ಯಕ್ಕೀಡಾಗುವ ಸಾಧ್ಯತೆ ಕೂಡ ಹೆಚ್ಚಿದೆ. ಇದನ್ನು ತಪ್ಪಿಸಲು, ಯಾವಾಗಲೂ ಮನೆಗೆ ಬಂದ ನಂತರ ಹಣ್ಣುಗಳನ್ನು(How to get rid of fruit flies) ಸ್ವಚ್ಛಗೊಳಿಸಬೇಕು. ಹಣ್ಣುಗಳನ್ನು ಹೊಸ ಪ್ಲಾಸ್ಟಿಕ್ ಕವರ್ನಲ್ಲಿ ಕಟ್ಟಿ ಪ್ಯಾಕ್ ಮಾಡಿ(home remedies daily life hacks) ಇಡಬೇಕು.

ಸಿಹಿ ಆಗಿರುವ ಹಣ್ಣನ್ನು ಹಾಗೆಯೇ ಇಟ್ಟರೆ ಕೀಟಗಳು ಹೆಚ್ಚು ಬರುತ್ತವೆ. ಇದಕ್ಕಾಗಿ ಹಣ್ಣನ್ನು ಗಾಜಿನ ಬಾಕ್ಸ್ನಲ್ಲಿ ಮುಚ್ಚಿಡುವ ಇಲ್ಲವೇ ರೆಫ್ರಿಜರೇಟರ್ನಲ್ಲಿ ಸಂಗ್ರಹಿಸುವ ಅಭ್ಯಾಸ ಮಾಡಿಕೊಳ್ಳಿ. ಹಣ್ಣಿನ ರಸಕ್ಕೆ ಕರ್ಪೂರದ ತುಂಡು ಹಾಕಿಡಬಹುದು. ಕೀಟಗಳು ಇರುವಲ್ಲಿ ಕರ್ಪೂರವನ್ನು ಸುಟ್ಟುಹಾಕಿದರೆ ಸಣ್ಣ ನುಸಿ ಅದರ ಬಲವಾದ ವಾಸನೆಗೆ ಓಡಿಹೋಗುತ್ತದೆ. ಮಾಗಿದ ಹಣ್ಣು ಇಲ್ಲವೇ ಹೆಚ್ಚು ಬೆಳೆದ ಹಣ್ಣನ್ನು ಎಂದಿಗೂ ಫ್ರಿಜ್ನಲ್ಲಿ ಇಡಬೇಡಿ. ಒಂದು ವೇಳೆ ಇಟ್ಟರೆ ಕೀಟ ಬೆಳೆಯುತ್ತದೆ. ಮನೆಯೊಳಗೆ ತೆರೆದ ಸ್ಥಳಗಳಲ್ಲಿ ಹಣ್ಣು ಮತ್ತು ತರಕಾರಿ ಸಿಪ್ಪೆಗಳನ್ನು ಪ್ಲಾಸ್ಟಿಕ್ ಕವರ್ನಲ್ಲಿ ಕಟ್ಟಿ ಬಿಸಾಡುವ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು.