HSRP ನಂಬರ್‌ ಪ್ಲೇಟ್‌ ಕುರಿತು ಮಹತ್ವದ ಮಾಹಿತಿ; ವಾಹನ ಸವಾರರಿಗೆ ಇತ್ತ ಗಮನಿಸಿ!!!

Share the Article

HSRP Number Plate Update: ರಾಜ್ಯದ 2 ಕೋಟಿ ವಾಹನಗಳ ಪೈಕಿ 3.9 ಲಕ್ಷ ವಾಹನಗಳಿಗೆ ಮಾತ್ರ ಹೈ-ಸೆಕ್ಯುರಿಟಿ ನೋಂದಣಿ ಫಲಕಗಳನ್ನು ಅಳವಡಿಸಲಾಗಿದ್ದು, ರಾಜ್ಯ ಸರ್ಕಾರವು ಪ್ರಸ್ತುತ ನವೆಂಬರ್ 17, 2023 ರ ಗಡುವನ್ನು ಫೆಬ್ರವರಿ 17, 2024 ರವರೆಗೆ ಮೂರು ತಿಂಗಳವರೆಗೆ ವಿಸ್ತರಿಸಿದೆ.

HSRP ಎಂಬುವುದು ವಾಹನಗಳ ನೋಂದಣಿ ನಂಬರ್‌ ಪ್ಲೇಟ್‌. ಇದನ್ನು ಅಲ್ಯೂಮಿನಿಯಂ ಲೋಹದಲ್ಲಿ ತಯಾರಿಸಲಾಗುತ್ತದೆ. ಲೇಸರ್‌ ಸ್ಕ್ಯಾನ್‌ ಇದರಲ್ಲಿ ಇದ್ದು ಸ್ಕ್ಯಾನ್‌ ಮಾಡಿದಾಗ ವಾಹನದ ಕುರಿತು ಸಂಪೂರ್ಣ ಮಾಹಿತಿ ದೊರಕಲಿದೆ. ಇದು ಅಶೋಕಚಕ್ರದ ಚಿತ್ರವನ್ನು ಹೊಂದಿದೆ. ಇದನ್ನು ಅಳವಡಿಸುವುದರಿಂದ ನಕಲಿ ನಂಬರ್‌ಪ್ಲೇಟ್‌ ಅಳವಡಿಸುವುದನ್ನು ಕಂಡು ಹಿಡಿಯಲು ಸಾಧ್ಯವಾಗುತ್ತದೆ.

2019 ರ ಎಪ್ರಿಲ್‌ಕ್ಕಿಂತ ಮೊದಲು ನೋಂದಣಿ ಮಾಡಿಸಿಕೊಂಡ ಟ್ಯಾಕ್ಟರ್‌, ಪ್ರಯಾಣಿಕರ ಕಾರು, ದ್ವಿಚಕ್ರ ವಾಹನ, ತ್ರಿಚಕ್ರ ವಾಹನ, ಲಘು ಮೋಟಾರು ವಾಹನ, ಮಧ್ಯಮ ಮತ್ತು ಭಾರೀ ವಾಣಿಜ್ಯ ವಾಹನ ಸೇರಿ ಎಲ್ಲಾ ಹಳೆಯ ವಾಹನಗಳಿಗೆ ಈ ನಿಯಮ ಅನ್ವಯವಾಗಲಿದೆ.

ಇದನ್ನು ಓದಿ: GIG Employees Insurance: ಕರ್ನಾಟಕದಲ್ಲೇ ಮೊದಲು, ಡೆಲಿವರಿ ನೌಕರರಿಗೆ ಇನ್ನು ಮುಂದೆ ಸಿಗಲಿದೆ ಈ ಸೌಲಭ್ಯ!!! ಕೂಡಲೇ ಅರ್ಜಿ ಸಲ್ಲಿಸಿ!!!

Leave A Reply