Home News Kalladka Prabhakar Bhat: ಕಲ್ಲಡ್ಕ ಪ್ರಭಾಕರ್ ಭಟ್‌ರನ್ನು ಬಂಧಿಸಲ್ಲವೆಂದ ಸರ್ಕಾರ!!

Kalladka Prabhakar Bhat: ಕಲ್ಲಡ್ಕ ಪ್ರಭಾಕರ್ ಭಟ್‌ರನ್ನು ಬಂಧಿಸಲ್ಲವೆಂದ ಸರ್ಕಾರ!!

Kalladka Prabhakar Bhat

Hindu neighbor gifts plot of land

Hindu neighbour gifts land to Muslim journalist

Kalladka Prabhakar Bhat: “ಮುಸ್ಲಿಂ ಮಹಿಳೆಯರ ಪರ್ಮನೆಂಟ್‌ ಗಂಡ” ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದ ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ್‌ ಭಟ್‌ ಅವರನ್ನು ಸರಕಾರ ಬಂಧಿಸಲ್ಲ ಎಂದು ಹೈಕೋರ್ಟ್‌ ಮುಂದೆ ಹೇಳಿದೆ.

ಮೋದಿ ಸರಕಾರ ಮುಸ್ಲಿಂ ಮಹಿಳೆಯರಿಗೆ ಪರ್ಮನೆಂಟ್‌ ಗಂಡನನ್ನು ಕೊಟ್ಟಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ್‌ ಭಟ್‌ ಅವರ ವಿರುದ್ಧ ಹಲವು ಪೊಲೀಸ್‌ ಠಾಣೆಗಳಲ್ಲಿ ಎಫ್‌ಐಆರ್‌ ದಾಖಲಾಗಿದೆ. ಇದೀಗ ತಮ್ಮ ವಿರುದ್ಧ ದಾಖಲಾದ ಮೊಕದ್ದಮೆ ರದ್ದತಿ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಲಾಗಿತ್ತು.

ಈ ಅರ್ಜಿ ವಿಚಾರಣೆ ಮಾಡಿದ ನ್ಯಾಯಾಲಯದ ಮುಂದೆ ಸ್ವತಃ ಸರಕಾರವೇ ಪ್ರಭಾಕರ್‌ ಭಟ್‌ ಅವರನ್ನು ಬಂಧಿಸುವುದಿಲ್ಲ ಎಂದು ಹೇಳಿದೆ ಎಂದು ಸುರ್ವಣ ನ್ಯೂಸ್‌ ವರದಿ ಮಾಡಿದೆ. ಸರಕಾರದ ಪರ ವಕೀಲರ ವಾದ ಆಲಿಸಿದ ನ್ಯಾಯಾಲಯ ಪ್ರಭಾಕರ್‌ ಭಟ್‌ ಅವರ ವಿರುದ್ಧ ಒತ್ತಾಯದ ಕ್ರಮ ಕೈಗೊಳ್ಳದಂತೆ ಆದೇಶ ಹೊರಡಿಸಿ ವಿಚಾರಣೆಯನ್ನು ಜ.9ಕ್ಕೆ ಮುಂದೂಡಲಾಗಿದೆ.

ಇದನ್ನು ಓದಿ: PUC Exam: ದ್ವಿತೀಯ ಪಿಯು ಪ್ರಿಪರೇಟರಿ, ಪ್ರಥಮ ಪಿಯು ವಾರ್ಷಿಕ ಪರೀಕ್ಷೆ Time table ಪ್ರಕಟ!!!

ಕಲ್ಲಡ್ಕ ಪ್ರಭಾಕರ್ ಭಟ್‌ರ ಅರ್ಜಿ ವಿಚಾರಣೆ ವೇಳೆ, ಅವರ ವಿರುದ್ಧ ದೂರು ದಾಖಲಿಸಿದ್ದವರ ಪರವಾಗಿ ವಾದ ಮಾಡಿದ ವಕೀಲ ಬಾಲನ್‌ ಅವರು, ಪ್ರಭಾಕರ್ ಭಟ್‌ ಅವರು ಮುಸ್ಲಿಂ ಮಹಿಳೆಯರ ಬಗ್ಗೆ ಅವಮಾನಕರ ಮಾತುಗಳನ್ನಾಡಿದ್ದಾರೆ. ಇವರು ಕೋಮುಗಲಭೆ ಸೃಷ್ಟಿಸುವಂತ ಹೇಳಿಕೆ ನೀಡಿದ್ದಾರೆ. ಇವರು ಸಮಾಜದಲ್ಲಿ ಭಯವನ್ನು ಉಂಟುಮಾಡುವ ಭಯೋತ್ಪಾದಕರಾಗಿದ್ದಾರೆ. ಪೊಲೀಸರು ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದಕೊಂಡಿದ್ದಾರೆ. ಇವರ ವಿರುದ್ಧ ಸರ್ಕಾರವೇ ರೌಡಿಶೀಟರ್ ಪ್ರಕರಣ ತೆರೆಯಲು ಚಿಂತನೆ ಮಾಡಿದೆ ಎಂದು ಹೇಳಿದ್ದಾರೆ ಎಂದು ಸುವರ್ಣ ನ್ಯೂಸ್‌ ವರದಿ ಮಾಡಿದೆ.

ನಂತರ ಸರ್ಕಾರದ ಪರ ವಕೀಲರಿಂದ ವಾದವನ್ನು ಮಂಡಿಸುತ್ತಾ, ಈ ಪ್ರಕರಣದಲ್ಲಿ ಸರ್ಕಾರದಿಂದ ಪ್ರಭಾಕರ್ ಭಟ್ ಅವರನ್ನು ಬಂಧಿಸಲ್ಲ. ಆದ್ದರಿಂದ ಈ ವಿಚಾರಣೆಗೆ ಮುಂದಿನ ದಿನಾಂಕವನ್ನು ನೀಡುವಂತೆ ಮನವಿ ಮಾಡಿದರು. ಸರ್ಕಾರವೇ ಸ್ವತಃ ಆರೋಪಿಯನ್ನು ಬಂಧಿಸಲ್ಲ ಎಂದು ನ್ಯಾಯಾಲಯಕ್ಕೆ ಹೇಳಿದೆ. ಹಾಗಾಗಿ, ಈ ಪ್ರಕರಣಕ್ಕೆ ತಡೆ ನೀಡುವ ಅಗತ್ಯವಿಲ್ಲ. ಸರ್ಕಾರವೇ ಆರೋಪಿಯನ್ನು ಬಂಧಿಸಲ್ಲ ಎಂದ ಮೇಲೆ ಈ ಪ್ರಕರಣದ ವಿಚಾರಣೆ ಬೇಡವೆಂದ ನ್ಯಾಯಾಲಯ ವಿಚಾರಣೆಯನ್ನು ಜ.9ಕ್ಕೆ ಮುಂದೂಡಿತು ಎಂದು ಸುವರ್ಣ ನ್ಯೂಸ್‌ ವರದಿ ಮಾಡಿದೆ.