Udupi ಯಲ್ಲಿ ಯುವತಿಗೆ ವ್ಯಕ್ತಿಯೋರ್ವನಿಂದ ವಿನಾಕಾರಣ ಕಿರುಕುಳ ಆರೋಪ; ಸ್ಥಳೀಯರಿಂದ ಬಿತ್ತು ಗೂಸಾ, ವೀಡಿಯೋ ವೈರಲ್‌!!!

Udupi: ಕಾರ್ಕಳದ ಖಾಸಗಿ ಫೈನಾನ್ಸ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೋರ್ವಳಿಗೆ ವ್ಯಕ್ತಿಯೋರ್ವ ವಿನಾಕಾರಣ ಕಿರುಕುಳ ನೀಡುತ್ತಿದ್ದದನ್ನು ಪ್ರಶ್ನಿಸಿ ಸ್ಥಳೀಯರ ಗುಂಪೊಂದು ವ್ಯಕ್ತಿಯನ್ನು ಎಳೆದಾಡಿ ಆತನಿಗೆ ಬೈಗುಳದಿಂದ ಜಾಡಿಸಿದ ಘಟನೆಯೊಂದು ಬುಧವಾರ ನಡೆದಿದೆ.

 

 

ಇರ್ವತ್ತೂರಿನ ಜಗದೀಶ್‌ ಪೂಜಾರಿ ಎಂಬಾತ ಕಳೆದ ಹಲವು ದಿನಗಳಿಂದ ಕಾರ್ಕಳದ ಫೈನಾನ್ಸ್‌ನಲ್ಲಿ ಅಕೌಂಟೆಂಟ್‌ ಆಗಿದ್ದ ಯುವತಿಯನ್ನು ಹಿಂಬಾಲಿಸಿ ಅಡ್ಡಗಟ್ಟಿ ಮಾತನಾಡಲು ಪ್ರಯತ್ನ ಪಡುತ್ತಿದ್ದ ಎಂದು ಆರೋಪ ಮಡಲಾಗಿದೆ. ಬುಧವಾರ ಕೂಡಾ ಈತನ ಚಾಳಿ ಮುಂದುವರಿದಿದೆ ಎನ್ನಲಾಗಿದೆ. ಸಂಜೆ ಸಮಯ ಯುವತಿ ತನ್ನ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಸಮಯದಲ್ಲಿ ಆರೋಪಿ ಆಕೆಯನ್ನು ಹಿಂಬಾಲಿಸಿ ಕಿರುಕುಳ ನೀಡಿದಾಗ ಸ್ಥಳೀಯರು ಈತನನ್ನು ಹಿಡಿದು ಹಿಗ್ಗಾಮುಗ್ಗ ಜಾಡಿಸಿ, ಮಂಗಳಾರತಿ ಮಾಡಿದ್ದಾರೆ.

ಇದನ್ನು ಓದಿ: Mangalore: ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್‌ ಯಂತ್ರ ವಶಕ್ಕೆ!!

ಇದೀಗ ಯುವತಿ ಈತನ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ದೂರು ನೀಡಿದ್ದು, ಈ ಪ್ರಕಾರ ಆರೋಪಿ ಜಗದೀಶ್‌ ಪೂಜಾರಿ ವಿರುದ್ಧ ಪ್ರಕರಣ ದಾಖಲಾಗಿದೆ.

Leave A Reply

Your email address will not be published.