Gardening Tips: ಮನಿ ಪ್ಲಾಂಟ್ ಬೆಳೆಸಲು ಈ ವಿಧಾನ ಅನುಸರಿಸಿ, ಕುಳಿತಲ್ಲೇ ಹಣ ಗಳಿಸಿ!!
Gardening Tips:ಮನಿ ಪ್ಲಾಂಟ್ (Money Plant) ಹೆಸರೇ ಹೇಳುವಂತೆ ನಮ್ಮ ಮನೆಯಲ್ಲಿ (Home) ಲಕ್ಷ್ಮಿ ನೆಲೆಸಲು ಈ ಗಿಡಗಳು ಪರೋಕ್ಷವಾಗಿ ಕಾರಣವಾಗುತ್ತವೆ ಎಂಬ ಬಲವಾದ ನಂಬಿಕೆಯಿದೆ (Believe). ಮನಿ ಪ್ಲಾಂಟ್ ಗಳಿರುವ(Gardening Tips) ಮನೆಯಲ್ಲಿ ಹಣದ ಕೊರತೆ ಎದುರಾಗದು. ಅಷ್ಟೇ ಅಲ್ಲದೆ, ಸಕಾರಾತ್ಮಕತೆ ಮತ್ತು ಸಂತೋಷ ಮತ್ತು ಸಮೃದ್ಧಿ ವೃದ್ದಿಯಾಗುತ್ತದೆ ಎಂಬ ನಂಬಿಕೆಯಿದೆ.
ಮನಿ ಪ್ಲಾಂಟ್ ಕೇವಲ ನೋಡುವುದಕ್ಕೆ ಮಾತ್ರವಲ್ಲದೇ, ವಾಸ್ತುವಿನ ದೃಷ್ಟಿಯಿಂದಲೂ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಹೀಗಾಗಿ ಬಹುತೇಕ ಮನೆಗಳಲ್ಲಿ ಮನಿ ಪ್ಲಾಂಟ್ ಬೆಳೆಸಲಾಗುತ್ತದೆ. ವಾಸ್ತು ಶಾಸ್ತ್ರದಲ್ಲಿ ಮನಿಪ್ಲಾಂಟ್ಗೆ ವಿಶೇಷವಾದ (Special) ಸ್ಥಾನಮಾನವಿದೆ. ಇದನ್ನು ಸರಿಯಾದ ದಿಕ್ಕಿನಲ್ಲಿ ಇರಿಸಿದರೆ ಮನೆಗೆ ಹಣದ ಹೊಳೆ ಹರಿದು ಬರಲು (money plant care tips)ಪೂರಕವಾಗುತ್ತದೆ. ಮನಿ ಪ್ಲಾಂಟ್ ಬಳ್ಳಿಗಳಿಗೆ ಸಮರ್ಪಕ ನೀರು ಮತ್ತು ಮಣ್ಣು ಹಾಕಿ ನೆಡಬೇಕಾಗುತ್ತದೆ. ಮನೆಯಲ್ಲಿ ಮನಿ ಪ್ಲಾಂಟ್ ಬೆಳೆಯುವುದು ಹೇಗೆ ಗೊತ್ತಾ??
ಮನಿ ಪ್ಲಾಂಟ್ 15 ರಿಂದ 24 ಡಿಗ್ರಿ ಸೆಲ್ಸಿಯಸ್ನಲ್ಲಿ ಉತ್ತಮವಾಗಿ ಬೆಳೆಯುತ್ತದೆ. ಹೀಗಾಗಿ, ಬೇಸಿಗೆ ಕಾಲದಲ್ಲಿ ಅದರ ಎಲೆಗಳ ಮೇಲೆ ನೀರನ್ನು ಸಿಂಪಡಿಸಬೇಕಾಗುತ್ತದೆ. ಹೀಗೆ ಮಾಡಿದರೆ ಸಾಕಷ್ಟು ಪ್ರಮಾಣದ ತೇವಾಂಶವನ್ನು ನಿರ್ವಹಿಸಲು ಸಾಧ್ಯವಾಗುತ್ತದೆ. ಪ್ರತಿಯೊಂದು ಗಿಡಕ್ಕೂ ವಿಭಿನ್ನ ಪ್ರಮಾಣದ ನೀರು ಬೇಕಾಗುತ್ತದೆ. ಮನಿ ಪ್ಲಾಂಟ್ ಗಿಡಕ್ಕೆ ಹೆಚ್ಚು ನೀರು ಬೇಕಾಗುವುದಿಲ್ಲ. ನೀರು ಹಾಕುವಾಗ ಮಣ್ಣು ಸ್ವಲ್ಪ ಒಣಗಿದೆಯೇ ಎಂಬುದನ್ನು ಗಮನಿಸಬೇಕು.
ಮನಿ ಪ್ಲಾಂಟ್ಗಾಗಿ ಕಂದು ಮಣ್ಣನ್ನು ಬಳಸಿದರೆ ಉತ್ತಮ. ಈ ಮಣ್ಣನ್ನು ಬಳಕೆ ಮಾಡುವುದರಿಂದ ಒಂದೇ ಸ್ಥಳದಲ್ಲಿ ನೀರು ಸಂಗ್ರಹವಾಗುವುದಿಲ್ಲ. ಅಷ್ಟೇ ಅಲ್ಲದೇ, ಈ ಮಣ್ಣು ತನ್ನ ಬೇರುಗಳನ್ನು ಕೊಳೆಯದಂತೆ ರಕ್ಷಿಸುತ್ತದೆ. ತೇವಾ ಮನಿ ಪ್ಲಾಂಟ್ಗೆ ಮಣ್ಣನ್ನು ಸಿದ್ಧಪಡಿಸುವ ಸಂದರ್ಭ 50 ಪ್ರತಿಶತ ಸಾಮಾನ್ಯ ಮಣ್ಣು, 20 ಪ್ರತಿಶತ ಕಾಂಪೋಸ್ಟ್, 10 ಪ್ರತಿಶತ ಮರಳು, 10 ಪ್ರತಿಶತ ಕೋಕೋಪೀಟ್, 5 ಪ್ರತಿಶತ ಪರ್ಲೈಟ್ ಮತ್ತು ವರ್ಮಿಕ್ಯುಲೈಟ್ ಅನ್ನು ಮಿಶ್ರಣ ಮಾಡಬೇಕು. ಈ ವಿಧಾನ ಅನುಸರಿಸಿದರೆ ಸಾಕು ನಿಮ್ಮ ಮನೆಯಲ್ಲಿ ಮನಿ ಪ್ಲಾಂಟ್ ಚೆನ್ನಾಗಿ ಬೆಳೆಯುತ್ತದೆ.
ಇದನ್ನು ಓದಿ: Pratap Simha: ಸಂಸದ ಪ್ರತಾಪ್ ಸಿಂಹ ಅವರಿಗೆ ಎದುರಾಯ್ತು ಮತ್ತೊಂದು ಸಂಕಷ್ಟ: ಕೈ ತಪ್ಪಲಿದೆಯೇ ಮೈಸೂರು ಲೋಕ ಸಭಾ ಟಿಕೇಟ್?!