Gas Geyser Precautions: ಅಪಾಯಕಾರಿ ಆಗುತ್ತಿದೆ ಗ್ಯಾಸ್ ಗೀಸರ್ !! ಯಾವ ದುರಂತ ಆಗದಂತೆ ಮುನ್ನೆಚ್ಚರಿಕೆ ವಹಿಸುವುದು ಹೇಗೆ ?!
Gas geyser leak : ಇತ್ತೀಚೆಗೆ ಹೆಚ್ಚಿನ ಕಡೆಗಳಲ್ಲಿ ಗೀಸರ್ ಗ್ಯಾಸ್ ಸೋರಿಕೆಯಿಂದ (Gas geyser leak) ಹೆಚ್ಚಿನ ಮಂದಿ ಮೃತಪಟ್ಟ ಘಟನೆಗಳ ಬಗ್ಗೆ ಕೇಳುತ್ತಲೇ ಇರುತ್ತೇವೆ. ಗ್ಯಾಸ್ ಗೀಸರ್(geyser gas) ಆನ್ ಇಟ್ಟು ಸ್ನಾನ ಮಾಡಲು ಮುಂದಾದ ಅದೆಷ್ಟೋ ಮಂದಿ ವಿಷಾನಿಲ ದೇಹಕ್ಕೆ ಸೇರಿ ಮೃತಪಟ್ಟಿದ್ದಾರೆ. ಹೀಗಾಗಿ, ಗ್ಯಾಸ್ ಗೀಸರ್ ಬಳಸುವಾಗ ಎಚ್ಚರ ವಹಿಸಬೇಕು.
ಅನ್ನಸಲ್ಸ್ ಆಫ್ ಇಂಡಿಯನ್ ಅಕಾಡೆಮಿ ಆಫ್ ನ್ಯೂರಾಲಜಿ ಸಂಸ್ಥೆ ನಡೆಸಿದ ಅಧ್ಯಯನದ ಅನುಸಾರ ಗಾಳಿಯಾಡದ ಸ್ನಾನಗೃಹಗಳಲ್ಲಿರುವ ಗ್ಯಾಸ್ ಗೀಸರ್ಗಳು 26 ರೀತಿಯ ಅಪಸ್ಮಾರಗಳಿಗೆ ಕಾರಣವಾಗುತ್ತದೆ ಎಂಬ ಅಚ್ಚರಿಯ ವಿಚಾರ ಹೊರ ಬಿದ್ದಿದೆ.
# ಗ್ಯಾಸ್ ಗೀಸರ್ ಮನೆಯಲ್ಲಿ ಬಳಸುವವರೇ ಗಮನಿಸಿ, ಈ ವಿಚಾರ ತಿಳಿದುಕೊಳ್ಳಿ:
ಗ್ಯಾಸ್ ಗೀಸರ್ ಒಲೆಯ ರೀತಿಯಲ್ಲಿ ಬೆಂಕಿ ಉರಿಯುತ್ತದೆ. ಹೀಗಾಗಿ ಇಂಗಾಲದ ಮಾನಾಕ್ಸೈಡ್ ಅನ್ನು ಹೊರಸೂಸುತ್ತದೆ. ಕಾರ್ಬನ್ ಮಾನಾಕ್ಸೈಡ್ ವಾಸನೆ ರಹಿತ ಮತ್ತು ಬಣ್ಣರಹಿತವಾಗಿರುವ ಹಿನ್ನೆಲೆ ಅನಿಲ ಸೋರಿಕೆಯಾದರೆ ಯಾರಿಗೂ ಬೇಗ ತಿಳಿಯದು. ಕಾರ್ಬನ್ ಮಾನಾಕ್ಸೈಡ್ ಅಪಾಯಕಾರಿಯಾಗಿದ್ದು, ಇದನ್ನು ಉಸಿರಾಡಿದ ಕೆಲವೇ ನಿಮಿಷಗಳ ತಲೆ ತಿರುಗುವಿಕೆ ಶುರುವಾಗಿ ಮೂರ್ಛೆ ಹೋಗುತ್ತಾರೆ. ಕಾರ್ಬನ್ ಮಾನಾಕ್ಸೈಡ್ ವಿಷದಿಂದ ಅಸ್ವಸ್ಥಗೊಂಡರೆ ಜೀವ ಹೋಗುವ ಸಂಭವ ಹೆಚ್ಚಿದೆ.
ಸುರಕ್ಷತಾ ಸಲಹೆಗಳು ಹೀಗಿವೆ:
* ಗ್ಯಾಸ್ ಗೀಸರ್ ಅನ್ನು ಸ್ನಾನಗೃಹ ಅಥವಾ ಅಡುಗೆಮನೆಯಂತಹ ಮುಚ್ಚಿದ ಸ್ಥಳದಲ್ಲಿ ಹಾಕಬಾರದು. ಒಂದು ವೇಳೆ, ಗೀಸರ್ ಹಾಕಿದರು ಕೂಡ ಕೋಣೆಗಳ ಕಿಟಕಿ, ಬಾಗಿಲು ತೆರೆದಿಡಲೆಬೇಕು.
* ಸ್ನಾನಗೃಹಕ್ಕೆ ಪ್ರವೇಶಿಸುವ ಮೊದಲು ಗೀಸರ್ ಅನ್ನು ಸ್ವಿಚ್ ಆಫ್ ಮಾಡಿ ಇಟ್ಟರೆ ಒಳ್ಳೆಯದು. ಇದರಿಂದ ಅಪಾಯ ಸಾಕಷ್ಟು ಕಡಿಮೆಯಾಗುತ್ತದೆ.
* ದಿನವಿಡೀ ಗೀಸರ್ ಆನ್ ಮಾಡಿ ಇಡುವುದು ಒಳ್ಳೆಯದಲ್ಲ. ಬಳಸುವ ಪ್ರತಿ ಬಾರಿಯೂ ಕೆಲವು ಗಂಟೆಗೆಳ ಅಂತರವನ್ನು ಕಾಯ್ದುಕೊಳ್ಳಬೇಕು.
* ಸ್ನಾನಗೃಹ ಅಥವಾ ಅಡುಗೆಮನೆಯಲ್ಲಿ ಎಕ್ಸಾಸ್ಟ್ ಫ್ಯಾನ್ ಇದ್ದರೆ ಅದನ್ನು ಸ್ವಿಚ್ ಆನ್ ಮಾಡಬೇಕು.
* ಸೋರಿಕೆಗಳ ಜೊತೆಗೆ ಎಲ್ಲ ರೀತಿಯ ಮುನ್ನೆಚ್ಚರಿಕೆಯ ಸಲುವಾಗಿ ಪ್ರತಿ ಬಾರಿಯೂ ಪರಿಶೀಲನೆ ಮಾಡುವುದು ಉತ್ತಮ.
* ತುರ್ತು ಆರೋಗ್ಯ ಸಮಸ್ಯೆ ಎದುರಾದಾಗ ಅಸ್ವಸ್ಥಗೊಂಡವರನ್ನು ತೆರೆದ ಪ್ರದೇಶಕ್ಕೆ ಒಯ್ಯುವುದು ಉತ್ತಮ.
ಇದನ್ನು ಓದಿ: Astro Tips: ಮನೆಯಲ್ಲಿ ಯಾವಾಗಲೂ ಜಗಳ ಆಗ್ತಾ ಇದ್ಯಾ? ಹಾಗಾದ್ರೆ ಮೊದಲು ಇದನ್ನು ಫಾಲೋ ಮಾಡಿ