Actor Jayaram: ಅಯ್ಯಪ್ಪನ ಮುಂದೆ ಕಣ್ಣೀರು ಹಾಕಿದ ʼಘೋಸ್ಟ್‌ʼ ನಟ ಜಯರಾಂ!!!

Share the Article

Actor Jayaram: ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಅಭಿನಯದ ಘೋಸ್ಟ್‌ ಸಿನಿಮಾದಲ್ಲಿ ಪೊಲೀಸ್‌ ಅಧಿಕಾರಿಯಾಗಿ ನಟಿಸಿದ್ದ ಮಲಯಾಳಂ ನಟ ಜಯರಾಮ್‌(Actor Jayaram) ಅವರು ಅಯ್ಯಪ್ಪ ದರ್ಶನದ ಸಂದರ್ಭ ಅಳುತ್ತಿರುವ ವೀಡಿಯೋವೊಂದು ಇದೀಗ ವೈರಲ್‌ ಆಗಿದೆ. ಅಯ್ಯಪ್ಪನ ದರ್ಶನ ಮಾಡುತ್ತಲೇ ಕಣ್ಣೀರಿಟ್ಟ ನಟ ಜಯರಾಂ ಅವರ ಭಕ್ತಿಯ ವೀಡಿಯೋಗೆ  ನೆಟ್ಟಿಗರು ಕಮೆಂಟ್‌ ಮಾಡಿದ್ದಾರೆ.

ನಟ ಜಯರಾಂ ಅವರ ಕುರಿತು ಹೇಳುವುದಾದರೆ ಇವರು ಪುನೀತ್‌ ರಾಜ್‌ಕುಮಾರ್‌ ನೆನಪಿನಲ್ಲಿ ಬೊಂಬೆ ಹೇಳುತೈತೆ ಹಾಡು ಹಾಡಿ ಕನ್ನಡ ಪ್ರೇಮ ಜೊತೆಗೆ ತಮ್ಮ ಅಗಾಧ ಪ್ರೀತಿಯನ್ನು ಕೂಡಾ ಅರ್ಪಣೆ ಮಾಡಿದ್ದರು. ಇವರಿಗೆ ಕನ್ನಡದ ಕುರಿತು ಅತೀವ ಅಭಿಮಾನ ಇದೆ.

ತನ್ನ ಮೂಲ ಭಾಷೆ ಮಲಯಾಳಂ ಆಗಿದ್ದರೂ ಕೂಡ ಕನ್ನಡ ಭಾಷೆಯನ್ನು ಕಲಿತು ಘೋಸ್ಟ್‌ ಸಿನಿಮಾದಲ್ಲಿ ಡಬ್ಬಿಂಗ್‌ ಮಾಡಿದ ಹಿರಿಮೆ ಇವರಿಗಿದೆ. ಇದೀಗ ಅಯ್ಯಪ್ಪನ ಸನ್ನಿಧಿಯಲ್ಲಿ ನಟ ಜಯರಾಂ ಅಳುತ್ತಿರುವ ವೀಡಿಯೋ ವೈರಲ್‌ ಆಗಿದ್ದು, ಜಯರಾಂ ಅಭಿಮಾನಿಗಳು ನಟನ ಭಕ್ತಿಯನ್ನು ಮೆಚ್ಚಿಕೊಂಡು ಕಮೆಂಟ್‌ ಮಾಡಿದ್ದಾರೆ.

Leave A Reply