BBK Season 10: ಬಿಗ್‌ಬಾಸ್‌ ಮನೆಯಲ್ಲಿ ಬಳಸೋ ಚಾರ್ಜರ್‌ ಸತ್ಯ ಬಯಲು!!! ಸ್ಪರ್ಧಿಗಳೇ ನೀಡಿದ್ರು ಸ್ಪಷ್ಟನೆ!!!

Bigg Boss Kannada Season 10: ಬಿಗ್‌ಬಾಸ್‌ ಮನೆಯ ಬಗ್ಗೆ ಇತ್ತೀಚೆಗೆ ಭಾರೀ ಚರ್ಚೆಗೊಳಗಾದ ಒಂದು ವಿಷಯ ಎಂದರೆ ಬಿಗ್‌ಬಾಸ್‌ ಸ್ಪರ್ಧಿಗಳು ಚಾರ್ಜರ್‌ ಯೂಸ್‌ ಮಾಡ್ತಾ ಇದ್ದಾರೆ. ಅದು ಫೋನ್‌ ಚಾರ್ಜರ್‌ ಎಂದು. ಆದರೆ ಈ ಚರ್ಚೆಗೆ ಇದೀಗ ಫುಲ್‌ ಸ್ಟಾಪ್‌ ಬಿದ್ದಿದೆ. ಹೌದು, ಇದಕ್ಕೆ ಸ್ಪರ್ಧಿಗಳೇ ಸ್ಪಷ್ಟನೆ ನೀಡಿದ್ದಾರೆ.

 

ಬಿಗ್‌ಬಾಸ್‌ ಮನೆಗೆ ಇಂದು ಶ್ರುತಿ ಅವರು ಭೇಟಿ ನೀಡಿದ್ದಾರೆ. ನ್ಯಾಯ ಪಂಚಾಯಿತಿ ನಡೆಸಿಕೊಡಲು ಶ್ರುತಿ ಅವರು ಮನೆಗೆ ಆಗಮನಿಸಿದ್ದರು. ಈ ಸಮಯದಲ್ಲಿ ಅವರು ಎಲ್ಲರ ಬಳಿ ನೀವು ಬಿಗ್‌ಬಾಸ್‌ ಮನೆಯಲ್ಲಿ ಫೋನ್‌ ಯೂಸ್‌ ಮಾಡ್ತಾ ಇದ್ದೀರಾ ಅಂತಾ ಕೇಳ್ತಾರೆ. ಆಗ ಮನೆ ಮಂದಿ ನಗಾಡ್ತಾ ಏನ್‌ ಮೇಡಂ… ಎಂದು ಕೇಳ್ತಾರೆ. ಅದಕ್ಕೆ ಶ್ರುತಿ ಅವರು ನಿಮಗೆ ಇದು ತಮಾಷೆ ಅನಿಸ್ತಿದೆಯೇ? ಬನ್ನಿ ಈ ಫೋಟೋ ನೋಡಿ ಎಂದು ಲಿವಿಂಗ್‌ ಏರಿಯಾದಲ್ಲಿರುವ ಟಿವಿಯಲ್ಲಿ ವೈರಲ್‌ ಆಗಿರುವ ಫೋಟೋ ಹಾಕ್ತಾರೆ. ಇದನ್ನು ಕಂಡು ಮನೆ ಮಂದಿ ಇದಾ…ಎಂದು ನಗುತ್ತಾರೆ. ಅನಂತರ ಇದಕ್ಕೆ ಮೈಕಲ್‌, ವಿನಯ್‌ ಇಬ್ಬರು ಸ್ಪಷ್ಟನೆ ನೀಡುತ್ತಾರೆ.

ಆ ಚಾರ್ಜರ್‌ಗಳು ಮೊಬೈಲ್‌ ಚಾರ್ಜರಲ್ಲ. ಮೈಕಲ್‌ ಯೂಸ್‌ ಮಾಡ್ತಾ ಇದ್ದಿದ್ದು, ಚಾರ್ಜರ್‌ ಮಾತ್ರ ಒನ್‌ಪ್ಲಸ್‌ ಮೊಬೈಲ್‌ ಚಾರ್ಜರ್‌ ಆಗಿರುತ್ತದೆ. ಅದನ್ನು ಅವರು ಟ್ರಿಮರ್‌ ಚಾರ್ಜ್‌ ಮಾಡಲು ಬೇರೆ ಕೇಬಲ್‌ ಹಾಕಿ ಬಳಸುತ್ತಿದ್ದೇವೆ ಎಂದು ಹೇಳುತ್ತಾರೆ.

Leave A Reply

Your email address will not be published.