Madhu Bangarappa: ಶಾಲಾ ಮಕ್ಕಳೇ ಗಮನಿಸಿ- ನಿಮಗಾಗಿ ಬಂದಿದೆ ಕೋವಿಡ್ ಮಾರ್ಗಸೂಚಿ; ಬಿಗ್‌ ಅಪ್ಡೇಟ್‌ ನೀಡಿದ ಸಚಿವ ಮಧು ಬಂಗಾರಪ್ಪ!!!

Share the Article

Madhu Bangarappa: ಸುದ್ದಿಗಾರರೊಂದಿಗೆ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಆರೋಗ್ಯ ಇಲಾಖೆ ಸಲಹೆ ಮೇರೆಗೆ ಶಾಲಾ ಮಕ್ಕಳಿಗೆ ಪ್ರತ್ಯೇಕ ಮಾರ್ಗಸೂಚಿ (Covid Rules) ಬಿಡುಗಡೆ ಮಾಡುತ್ತೇವೆ’ ಎಂದು ತಿಳಿಸಿದ್ದಾರೆ.

ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಅವರು, ನಾವು ಆರೋಗ್ಯ ಇಲಾಖೆ ಮಾರ್ಗಸೂಚಿ ಪರಿಗಣಿಸುತ್ತೇವೆ. ಶಾಲಾ ವಿದ್ಯಾರ್ಥಿಗಳಿಗೆ ಏನೆಲ್ಲಾ ಕ್ರಮ ವಹಿಸಬೇಕೆಂದೂ ನಿರ್ಧಾರ ಮಾಡುತ್ತಿದ್ದೇವೆ. ಇನ್ನೊಂದೆಡೆ, ಈಗಾಗಲೇ ಈ ವಿಚಾರವಾಗಿ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಆಗಿದ್ದು ಕೋವಿಡ್ ಪರೀಕ್ಷೆ ಪ್ರಮಾಣ ಹೆಚ್ಚಳ ಮಾಡಲು ಹೇಳಿದ್ದಾರೆ ಎಂದರು.

ಇದನ್ನು ಓದಿ: Bigg Boss 10: ಕಿಚ್ಚನ ಬದಲಿಗೆ ಬಂದ ಶ್ರುತಿ! ಕಿಚ್ಚನ ಪಂಚಾಯ್ತಿ ಇಲ್ವ? ಹಾಗಾದರೆ ನೋ ಎಲಿಮಿನೇಷನ್‌?!

ಜೊತೆಗೆ ಶಾಲಾ ಪಠ್ಯ ಪರಿಷ್ಕರಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಶಿಕ್ಷಣ ಸಚಿವರು , ಮೈಸೂರು ಹುಲಿ ಟಿಪ್ಪು ಸುಲ್ತಾನ್ ಅವರ ಕುರಿತ ಪಠ್ಯಕ್ಕೆ ಸಂಬಂಧಿಸಿದಂತೆ ತಜ್ಞರು ಯಾವ ಅಂಶ ಉಲ್ಲೇಖಿಸುತ್ತಾರೋ ನೋಡಬೇಕು. ಆದರೆ, ಪಠ್ಯ ತಿರುಚುವ ಪ್ರಯತ್ನ ಮಾಡುವುದಿಲ್ಲ ಎಂದಿದ್ದಾರೆ.

Leave A Reply