Deep Fake: ನಟಿ ರಶ್ಮಿಕಾ ಮಂದಣ್ಣ ಡೀಪ್‌ಫೇಕ್‌ ಪ್ರಕರಣ; ನಾಲ್ವರು ಶಂಕಿತರ ಪತ್ತೆ, ಮಾಸ್ಟರ್‌ಮೈಂಡ್‌ಗಾಗಿ ಶೋಧ!!!

entertainment news four suspects identified in rashmika mandannas deepfake case

Share the Article

Actress Rashmika Mandanna: ರಶ್ಮಿಕಾ ಮಂದಣ್ಣ ಬಗ್ಗೆ ಇತ್ತೀಚೆಗೆ ಡೀಪ್‌ ಫೇಕ್‌ ಫೊಟೋ ವೈರಲ್‌ ಆಗಿತ್ತು. ಈಗ ರಶ್ಮಿಕಾ ಅವರು ಡೀಪ್‌ ಫೇಕ್‌ ವೀಡಿಯೋ ಕುರಿತು ಪೊಲೀಸರು ತನಿಖೆ ನಡೆಸಿದ್ದರು. ಈತನ್ಮಧ್ಯೆ, ರಶ್ಮಿಕಾ ಮಂದಣ್ಣ ಅವರ ಡೀಪ್‌ ಫೇಕ್‌ ವೈರಲ್‌ ವೀಡಿಯೋಗೆ ಸಂಬಂಧಿಸಿದಂತೆ ಒಂದು ಹೊಸ ಅಪ್ಡೇಟ್‌ ಬಂದಿದೆ. ಈ ಪ್ರಕರಣದಲ್ಲಿ ನಾಲ್ವರನ್ನು ಪೊಲೀಸರು ಗುರುಸಿದ್ದಾರೆ. ಆದರೂ ಪೊಲೀಸರು ಇನ್ನೂ ತನಿಖೆ ನಡೆಸುತ್ತಿದ್ದಾರೆ.

ಇದನ್ನು ಓದಿ: Astro Tips: ಹೊಸ ವರ್ಷಕ್ಕೆ ಈ ಗಿಫ್ಟ್‌ಗಳನ್ನು ಖಂಡಿತಾ ನೀಡಬೇಡಿ; ದಾರಿದ್ರ್ಯ ಬರುತ್ತೆ, ಹುಷಾರ್‌!!!

ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್ ಫೇಕ್ ಪ್ರೊಫೈಲ್ ಪ್ರಕರಣದಲ್ಲಿ ಭಾಗಿಯಾಗಿರುವ ನಾಲ್ವರು ಶಂಕಿತರನ್ನು ಪೊಲೀಸರು ಪತ್ತೆ ಮಾಡಿದ್ದಾರೆ ಎಂದು ಎಎನ್‌ಐ ಟ್ವೀಟ್‌ನಲ್ಲಿ ಬರೆದುಕೊಂಡಿದೆ.

ಪೊಲೀಸರ ಪ್ರಕಾರ, ಇವರು ಮೇಕರ್‌ಗಳಲ್ಲ, ಆದರೆ ಅಪ್‌ಲೋಡ್ ಮಾಡಿದ್ದಾರೆ. ಹಾಗಾಗಿ ಪ್ರಕರಣದ ಪ್ರಮುಖ ಸಂಚುಕೋರರಿಗಾಗಿ ಪೊಲೀಸರು ಇನ್ನೂ ಶೋಧ ನಡೆಸುತ್ತಿದ್ದಾರೆ.

Leave A Reply