New Rules 2024: ಜನಸಾಮಾನ್ಯರೇ, ಜನವರಿಯಿಂದ ಬದಲಾಗುತ್ತವೆ ಈ ಎಲ್ಲಾ ರೂಲ್ಸ್ !!

New Rules 2024: ಪ್ರತಿ ತಿಂಗಳ ಮೊದಲ ದಿನದಂದು ಗ್ಯಾಸ್ ಸಿಲಿಂಡರ್ ಬೆಲೆ , ಬ್ಯಾಂಕಿಂಗ್ , ಟೆಲಿಕಾಂ ಸೇರಿದಂತೆ ಇನ್ನಿತರ ಕ್ಷೇತ್ರದಲ್ಲಿ ಬದಲಾವಣೆಯಾಗುವುದು (December New Rule)ಸಹಜ. ಇನ್ನೇನೂ ಡಿಸೆಂಬರ್ ತಿಂಗಳು ಮುಗಿಯಲು ಕೆಲವೇ ದಿನಗಳು ಬಾಕಿ ಉಳಿದಿದ್ದು,ಹೊಸ ವರ್ಷ ಆರಂಭದಲ್ಲಿ ಹಣಕಾಸಿನ ನಿಯಮಗಳು, ಗ್ಯಾಸ್ ಸಿಲಿಂಡರ್ ಬೆಲೆ ಸೇರಿದಂತೆ ಅನೇಕ ನಿಯಮಗಳು(New Rules 2024) ಬದಲಾಗಲಿದೆ. ಯಾವೆಲ್ಲ ನಿಯಮಗಳು ಬದಲಾಗಲಿದೆ ಗೊತ್ತಾ?

 

ಜನವರಿ 2024 ರಲ್ಲಿ (January 2024 Rules Changes)ಆಗುವ ನಿಯಮ ಬದಲಾವಣೆಗಳು ಹೀಗಿವೆ:

# ಸಿಮ್ ಕಾರ್ಡ್ ಖರೀದಿ ನಿಯಮಗಳಲ್ಲಿ ಬದಲಾವಣೆ

ಸಿಮ್ ಕಾರ್ಡ್ ಗಳನ್ನು ಖರೀದಿ ಹಾಗೂ ಮಾರಾಟ ಮಾಡುವ ನಿಯಮಗಳಲ್ಲಿ ಬದಲಾವಣೆ ಯಾಗಲಿದೆ. ಸಿಮ್ ಕಾರ್ಡ್ ಗಳನ್ನು ಖರೀದಿ ಮಾಡುವಾಗ ಗ್ರಾಹಕರು ತಮ್ಮ ಗುರುತಿನ ಮಾಹಿತಿಯನ್ನು ಒದಗಿಸಬೇಕಾಗುತ್ತದೆ.

 

# ಉದ್ಯೋಗ ಕಾನೂನಿನಲ್ಲಿ ಬದಲಾವಣೆ

ಜನವರಿ 2024 ರಲ್ಲಿ ಅರೆಕಾಲಿಕ ಕಾರ್ಮಿಕರಿಗೆ ರಜೆ ಮತ್ತು ಅನಿಯಮಿತ ಸಮಯವನ್ನು ಲೆಕ್ಕಹಾಕುವ ಹೊಸ ವಿಧಾನ ಒಳಗೊಂಡ ಹಾಗೆ ಉದ್ಯೋಗ ಕಾನೂನಿನಲ್ಲಿ ಅನೇಕ ಬದಲಾವಣೆಯಾಗಲಿದೆ. ಅಂದರೆ, ಬೇರೆ ಬೇರೆ ಗಂಟೆಗಳಲ್ಲಿ ಕೆಲಸ ಮಾಡುವ ಇಲ್ಲವೇ ವರ್ಷದ ಕೆಲವು ಭಾಗಗಳಲ್ಲಿ ಉದ್ಯೋಗದಲ್ಲಿರುವ ಉದ್ಯೋಗಿಗಳು ವಿಶೇಷ ವಿಧಾನದ ಅಡಿಯಲ್ಲಿ ರಜೆ ಪಡೆಯಬಹುದು.

 

# ವಿದ್ಯಾರ್ಥಿ ವೀಸಾಗೆ ಅನ್ವಯಿಸುತ್ತದೆ

ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ತಮ್ಮ ಕೋರ್ಸ್ ಪೂರ್ಣವಾಗುವ ಮೊದಲೇ ಕೆಲಸದ ವೀಸಾಗಳಿಗೆ ಅರ್ಜಿ ಹಾಕಬೇಕು. ಅಂದರೆ, ನೆದರ್ಲ್ಯಾಂಡ್ಸ್ನಲ್ಲಿ ಕೆಲಸ ಮಾಡಲು ಇಚ್ಛಿಸುವ ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ತಮ್ಮ ಅಧ್ಯಯನವನ್ನು ಪೂರ್ಣಗೊಳಿಸುವ ಮೊದಲು ಕೆಲಸದ ವೀಸಾಗೆ ಅರ್ಜಿ ಸಲ್ಲಿಸಬೇಕು.

 

# ʻGSTʼ ದರದಲ್ಲಿ ಬದಲಾವಣೆ

ಜನವರಿ 1, 2024 ರಿಂದ ಜಿಎಸ್ಟಿ ದರ ಶೇ.8ರಿಂದ ಶೇ.9ಕ್ಕೆ ಹೆಚ್ಚಳ ಕಾಣಲಿದೆ. 2022 ರ ಬಜೆಟ್ ನಲ್ಲಿ ದ್ವಿಗುಣ ದರ ಹೆಚ್ಚಳದ ಅಂತಿಮ ಹಂತ ತಲುಪಲಿದೆ.

Leave A Reply

Your email address will not be published.