CM Siddaramaiah: ಲ್ಯಾಂಡ್ ಆಗಬೇಕೆನ್ನುವಾಗ ಕೆಳಗೆ ಕಾಣಿಸಿತು ಎರಡೆರಡು ಹೆಲಿಪ್ಯಾಡ್ !! ಕನ್ಫೂಸ್ ಆಗಿ ಗಾಳಿಯಲ್ಲಿ ಆಟವಾಡಿದ ಸಿಎಂ ಸಿದ್ದು ಹೆಲಿಕಾಪ್ಟರ್ !! ಮುಂದೇನಾಯ್ತು

Share the Article

CM Siddaramaiah: ಇಂದು ಸಿಎಂ ಸಿದ್ದರಾಮಯ್ಯನವರು(CM Siddaramaiah) ಗದಗ ಪ್ರವಾಸ ಕೈಗೊಂಡಿದ್ದಾರೆ. ಈ ಸಂದರ್ಭ ಹೆಲಿಕ್ಯಾಪ್ಟರ್‌ ಲ್ಯಾಂಡಿಂಗ್‌ (Helicopter Landing)ಆಗುವ ಸಂದರ್ಭ ಭಾರಿ ಗೊಂದಲದ ವಾತಾವರಣ ಸೃಷ್ಟಿಯಾಗಿದೆ.

 

ಗದಗದ ಹೆಲಿಪ್ಯಾಡ್‌ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿದ್ದ (CM Siddaramaiah) ಪೈಲಟ್‌ ಅರ್ಧಕ್ಕೆ ಇಳಿಸಿ ಮತ್ತೆ ಹೆಲಿಕಾಪ್ಟರ್‌ ಹಾರಿಸಿದ್ದಾರೆ ಎನ್ನಲಾಗಿದೆ. ಇದರಿಂದ ಹೆಲಿಕಾಫ್ಟರ್ ನಲ್ಲಿದ್ದ ಕಾಂಗ್ರೆಸ್‌ ಮುಖಂಡರು ಆತಂಕಗೊಂಡ ಘಟನೆ ವರದಿಯಾಗಿದೆ. ಎರಡು ಕಡೆ ಹೆಲಿಪ್ಯಾಡ್‌ ಇದ್ದ ಹಿನ್ನೆಲೆಯಲ್ಲಿ ಗೊಂದಲವಾಗಿ ಹೆಲಿಕಾಪ್ಟರ್‌ ಪೈಲಟ್‌ ಮೊದಲ ಹೆಲಿಪ್ಯಾಡ್‌ ನಲ್ಲಿ ಹೆಲಿಕಾಪ್ಟರ್‌ ಅರ್ಧಕ್ಕೆ ಇಳಿಸಿ ಮತ್ತೆ ಹಾರಿಸಿದ್ದಾರಂತೆ. ಇದಾದ ಬಳಿಕ ಮತ್ತೊಂದು ಹೆಲಿಪ್ಯಾಡ್‌ ನಲ್ಲಿ ಹೆಲಿಕಾಪ್ಟರ್‌ ಲ್ಯಾಂಡಿಂಗ್‌ ಮಾಡಿದ್ದಾರಂತೆ. ಒಟ್ಟಿನಲ್ಲಿ ಕಾಂಗ್ರೆಸ್ ನಾಯಕರು, ಪೊಲೀಸರು, ಜಿಲ್ಲಾಡಳಿತ ಒಂದು ಕ್ಷಣ ಗೊಂದಲಕ್ಕೀಡಾಗಿದ್ದು ಸುಳ್ಳಲ್ಲ.

Leave A Reply