Indian railway: ಮಕ್ಕಳನ್ನೂ ರೈಲಲ್ಲಿ ಕರೆದುಕೊಂಡು ಹೋಗ್ತೀರಾ ?! ಹಾಗಿದ್ರೆ ಬದಲಾಗಿದೆ ನೋಡಿ ಈ ಎಲ್ಲಾ ನಿಯಮಗಳು

Indian Railways : ಭಾರತದಲ್ಲಿ ಲಕ್ಷಾಂತರ ಪ್ರಯಾಣಿಕರು(Railway Passengers) ರೈಲ್ವೇ ಮೂಲಕ ಪ್ರಯಾಣಿಸುವುದು ಗೊತ್ತಿರುವ ವಿಚಾರವೇ! ಈಗಾಗಲೇ ಭಾರತೀಯ ರೈಲ್ವೆ( Indian Railway)ತನ್ನ ಪ್ರಯಾಣಿಕರ ಅನುಕೂಲಕ್ಕಾಗಿ ಅನೇಕ ರೈಲ್ವೆ ನಿಲ್ದಾಣಗಳಲ್ಲಿ ವೈ-ಫೈ ವ್ಯವಸ್ಥೆ, ಎಸ್ಕಲೇಟರ್ ಗಳು ಸೇರಿದಂತೆ ಅನೇಕ ಸೌಲಭ್ಯಗಳನ್ನು ಆರಂಭಿಸಿದೆ. ಇದೀಗ, ಮಕ್ಕಳ ಟಿಕೆಟ್‌ ರಿಸರ್ವೇಶನ್ (Children’s ticket Reservation)ಕುರಿತು ಕೂಡ ರೈಲ್ವೆ ಕೆಲವು ನಿಯಮಗಳನ್ನು ಜಾರಿಗೆ ತಂದಿದೆ.

# 5 ವರ್ಷದೊಳಗಿನ ಮಕ್ಕಳು ಉಚಿತವಾಗಿ ಪ್ರಯಾಣ ಮಾಡಬಹುದು:
1 ವರ್ಷದಿಂದ 4 ವರ್ಷದೊಳಗಿನ ಮಕ್ಕಳು ರೈಲ್ವೆಯಲ್ಲಿ ಪ್ರಯಾಣಿಸುವುದಾದರೆ ಈ ಮಕ್ಕಳಿಗೆ ಟಿಕೆಟ್ ಬುಕ್ ಮಾಡಬೇಕಾಗಿಲ್ಲ. ರೈಲಿನಲ್ಲಿ 5 ವರ್ಷದೊಳಗಿನ ಮಕ್ಕಳು ಟಿಕೆಟ್ ಇಲ್ಲದೆ ಪ್ರಯಾಣ ಮಾಡಬಹುದು. ಆದರೆ, ಜನರ ಬೇಡಿಕೆಯ ಅನುಸಾರ, ರೈಲ್ವೆ ಆಗಸ್ಟ್ 2022 ರಲ್ಲಿ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ತಂದಿದೆ. ಇದರ ಅನುಸಾರ, 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಉಚಿತವಾಗಿ ಪ್ರಯಾಣ ಮಾಡಬಹುದು.ಆದರೆ, ಇಲ್ಲಿ ಪ್ರತ್ಯೇಕ ಸೀಟು ಸಿಗುವುದಿಲ್ಲ. ಪೋಷಕರು ತಮ್ಮ ಮಗುವಿಗೆ ಪ್ರತ್ಯೇಕ ಆಸನವನ್ನು ಕಾಯ್ದಿರಿಸುವ ಆಯ್ಕೆಯನ್ನು ಹೊಂದಿರಲಿದ್ದು, ಇದಕ್ಕಾಗಿ ಅವರು ಸಂಪೂರ್ಣ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ.

#12 ವರ್ಷ ವಯಸ್ಸಿನ ಮಕ್ಕಳಿಗೆ ಅನ್ವಯವಾಗುವ ನಿಯಮ:
5 ರಿಂದ 12 ವರ್ಷ ವಯಸ್ಸಿನ ಮಕ್ಕಳಿಗೆ ಪ್ರತ್ಯೇಕ ಸೀಟಿನ ಅಗತ್ಯವಿರದೇ ಹೋದರು ಕೂಡಾ ಆ ಮಗುವಿಗೆ ಟಿಕೆಟ್ ದರದ ಅರ್ಧದಷ್ಟು ಪಾವತಿ ಮಾಡಬೇಕಾಗುತ್ತದೆ. ಮಗುವು ತನ್ನ ಪೋಷಕರ ಸೀಟಿನಲ್ಲಿ ಕುಳಿತು ಪ್ರಯಾಣಿಸಬಹುದು. 5 ವರ್ಷದಿಂದ 12 ವರ್ಷದೊಳಗಿನ ಮಕ್ಕಳಿಗೆ ಪ್ರತ್ಯೇಕ ಆಸನವನ್ನು ರಿಸರ್ವ್ ಮಾಡಿದ್ದಲ್ಲಿ, ಪೂರ್ಣ ಟಿಕೆಟ್ ದರವನ್ನು ವಿಧಿಸಲಾಗುತ್ತದೆ.

Leave A Reply

Your email address will not be published.