Pension Holders: ಪಿಂಚಣಿದಾರರಿಗೆ ಮುಖ್ಯ ಮಾಹಿತಿ- ಇನ್ಮುಂದೆ ಪೆನ್ಶನ್ ಬೇಕಂದ್ರೆ ನೀವು ಇಲ್ಲಿಗೆ ಹೋಗಲೇ ಬೇಕು !!

Indian railway news Railway pensioners will get pension from bandhan Bank

Indian Railways News : ಭಾರತೀಯ ರೈಲ್ವೇ(Indian Railways) ದೇಶದ ಅತಿದೊಡ್ಡ ಉದ್ಯೋಗದಾತರಲ್ಲಿ ಒಂದಾಗಿದ್ದು, ಪಿಂಚಣಿದಾರರಿಗೆ(Pension Holders)ನೆರವಾಗುವ ದೆಸೆಯಲ್ಲಿ ಬ್ಯಾಂಕ್ ನೀಡುವ ಇತರ ಸೌಲಭ್ಯಗಳನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ರೈಲ್ವೇ ಸಚಿವಾಲಯದ ಪರವಾಗಿ ಇ-ಪಿಪಿಒ ಮೂಲಕ ಪಿಂಚಣಿ ವಿತರಣೆ ಮಾಡಲು ಬಂಧನ್ ಬ್ಯಾಂಕ್‌ಗೆ ಆರ್‌ಬಿಐ(RBI)ಅಧಿಕಾರ ನೀಡಿದ್ದು, ಹೀಗಾಗಿ, ರೈಲ್ವೆ ಸಚಿವಾಲಯದ ಎಲ್ಲಾ ನಿವೃತ್ತ ಉದ್ಯೋಗಿಗಳಿಗೆ ಪಿಂಚಣಿ ನೀಡಲು ಬಂಧನ್ ಬ್ಯಾಂಕ್‌ಗೆ ಅವಕಾಶ ನೀಡಲಾಗಿದೆ.

ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿವೃತ್ತ ರೈಲ್ವೇ ಉದ್ಯೋಗಿಗಳಿಗೆ ಪಿಂಚಣಿ ನೀಡಲು ಬಂಧನ್ ಬ್ಯಾಂಕ್‌ ಗೆ ಅನುಮೋದನೆ ನೀಡಿದೆ. ರೈಲ್ವೆ ಸಚಿವಾಲಯದ ಸಹಯೋಗದಲ್ಲಿ ಬಂಧನ್ ಬ್ಯಾಂಕ್ ಶೀಘ್ರದಲ್ಲೇ ಪಿಂಚಣಿ ನೀಡುವ ಪ್ರಕ್ರಿಯೆಯನ್ನು ಪ್ರಾರಂಭ ಮಾಡಲಿದೆ. ಆರ್‌ಬಿಐನ ಈ ಅನುಮೋದನೆಯ ಅನುಸಾರ ದೇಶದಾದ್ಯಂತ ರೈಲ್ವೆಯ 17 ಪ್ರಾದೇಶಿಕ ಕಚೇರಿಗಳು ಮತ್ತು ಎಂಟು ಉತ್ಪಾದನಾ ಘಟಕಗಳಿಂದ ಪ್ರತಿ ವರ್ಷ ಸುಮಾರು 50,000 ನಿವೃತ್ತ ನೌಕರರು ಈ ಬ್ಯಾಂಕಿನ ಗ್ರಾಹಕರಾಗಲಿದ್ದಾರೆ.

ಇದನ್ನು ಓದಿ: Security Breach in LokSabha: ಸಂಸತ್ ಪಾಸ್ ಗಾಗಿ 3 ತಿಂಗಳಿನಿಂದಲೂ ಆರೋಪಿ ಮನೋರಂಜನ್, ಪ್ರತಾಪ್ ಸಿಂಹಗೆ ಏನು ಮಾಡಿದ್ದ ಗೊತ್ತಾ?!

Leave A Reply

Your email address will not be published.