Government Blocked Apps: ಮೊಬೈಲ್ ಬಳಕೆದಾರರಿಗೆ ಬ್ಯಾಡ್ ನ್ಯೂಸ್ – ಏಕಾಏಕಿ ಈ ಆಪ್ ಗಳನ್ನು ನಿಷೇಧಿಸಿ ಆದೇಶ ಹೊರಡಿಸಿದ ಮೋದಿ ಸರ್ಕಾರ
Government Blocked Apps: ಭಾರತದಲ್ಲಿ ಕಾನೂನುಬಾಹಿರವಾಗಿರುವ ಹಲವಾರು ಆ್ಯಪ್ಗಳನ್ನು ಸರ್ಕಾರ ನಿರ್ಬಂಧಿಸಿದೆ (Government Blocked Apps). ಮುಖ್ಯವಾಗಿ, ಜನರ ಹಣವನ್ನು ಕಬಳಿಸುವ ಅಕ್ರಮ ಬೆಟ್ಟಿಂಗ್ ಮತ್ತು ಗ್ಯಾಬ್ಲಿಂಗ್ ಅಪ್ಲಿಕೇಶನ್ಗಳು, ಮಿತಿ ಮೀರಿದ ಬಡ್ಡಿ ವಸೂಲು ಮಾಡಲು ಸಾಲ ನೀಡುವ ಅಪ್ಲಿಕೇಶನ್ಗಳು ಸೇರಿ
ಸರ್ಕಾರ ಇದುವರೆಗೆ ಒಟ್ಟು 581 ಆ್ಯಪ್ ಗಳನ್ನು ನಿರ್ಬಂಧಿಸಿದೆ. ಇವುಗಳಲ್ಲಿ 174 ಜೂಜು ಮತ್ತು ಬೆಟ್ಟಿಂಗ್ ಆ್ಯಪ್ಗಳು ಮತ್ತು 87 ಸಾಲ ನೀಡುವ ಅಪ್ಲಿಕೇಶನ್ಗಳು ಸೇರಿವೆ.
IT ಕಾಯಿದೆ, 2000 ರ ಸೆಕ್ಷನ್ 69A ಅಡಿಯಲ್ಲಿ ಒಟ್ಟು 581 ಅಪ್ಲಿಕೇಶನ್ಗಳನ್ನು ನಿರ್ಬಂಧಿಸಿದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ತಿಳಿಸಿದ್ದಾರೆ. ಇವುಗಳಲ್ಲಿ 174 ಬೆಟ್ಟಿಂಗ್ ಮತ್ತು ಗ್ಯಾಬ್ಲಿಂಗ್ ಸಂಬಂಧಿತ ಅಪ್ಲಿಕೇಶನ್ಗಳು, 87 ಲೋನ್ ಅಪ್ಲಿಕೇಶನ್ಗಳು ಮತ್ತು PUBG, GArena ಫ್ರೀ ಫೈರ್ ಮುಂತಾದ ಗೇಮಿಂಗ್ ಅಪ್ಲಿಕೇಶನ್ಗಳು ಸೇರಿವೆ. ಅಲ್ಲದೇ ಇಡಿ ಕೋರಿಕೆಯ ಮೇರೆಗೆ, 22 ಅಕ್ರಮ ಬೆಟ್ಟಿಂಗ್ ಮತ್ತು ಗ್ಯಾಬ್ಲಿಂಗ್ ಅಪ್ಲಿಕೇಶನ್ಗಳು ಮತ್ತು ವೆಬ್ಸೈಟ್ಗಳನ್ನು ನಿರ್ಬಂಧಿಸಲಾಗಿದೆ.
ಅವುಗಳಲ್ಲಿ ಮಹಾದೇವ್ ಆ್ಯಪ್ ಹೊರತುಪಡಿಸಿ, ಸರ್ಕಾರವು ಅನೇಕ ಅಕ್ರಮ ಬೆಟ್ಟಿಂಗ್ ಮತ್ತು ಜೂಜಿನ ಅಪ್ಲಿಕೇಶನ್ಗಳು ಮತ್ತು ವೆಬ್ಸೈಟ್ಗಳನ್ನು ನಿರ್ಬಂಧಿಸಿದೆ. ನಿರ್ಬಂಧಕ್ಕೆ ಒಳಗಾದ ಅಪ್ಲಿಕೇಶನ್ಗಳಲ್ಲಿ Parimatch, Fairplay, 1XBET, Lotus365, Dafabet ಮತ್ತು Betwaysatta ಸೇರಿವೆ. ಈ ಅಪ್ಲಿಕೇಶನ್ಗಳಲ್ಲಿ ಹಲವು ಈಗಾಗಲೇ ನಿಷೇಧಿತ ಪಟ್ಟಿಯಲ್ಲಿವೆ. ಕೆಲವು ಭಾರತದಲ್ಲಿ ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸುತ್ತಿವೆ.
ಇದನ್ನು ಓದಿ: Muslim Women: ಇನ್ಮುಂದೆ ಮಹಿಳೆಯರಿಗೂ ಮಸೀದಿ ಪ್ರವೇಶ – ಹೈಕೋರ್ಟ್ ನಿಂದ ಬಂತು ಮಹತ್ವದ ತೀರ್ಪು!!