Hd kumaraswamy: ಮಾಜಿ ಸಿಎಂ ಕುಮಾರಸ್ವಾಮಿ ಅವರಿಂದ ಜನರಿಗೆ ಅಚ್ಚರಿಯ ಭರವಸೆ – ಹೀಗೆಕಂದ್ರು ಎಚ್ಡಿಕೆ?

Karnataka politics news former cm HD kumaraswamy says friendly govt will come to administration

Share the Article

Hd kumaraswamy: ರಾಜ್ಯ ಕಾಂಗ್ರೆಸ್ ಸರ್ಕಾರದ (Congress Government)ವಿರುದ್ಧ ಹೆಚ್ ಡಿ. ಕುಮಾರಸ್ವಾಮಿ(Hd kumaraswamy) ವಾಗ್ದಾಳಿ ನಡೆಸಿದ್ದಾರೆ. ರಾಜ್ಯ ಸರ್ಕಾರ ಗ್ಯಾರಂಟೀ ಯೋಜನೆಗಳ ಜಾರಿಯ ಬಳಿಕ ಅಭಿವೃದ್ದಿ ಕಾರ್ಯಗಳಿಗೆ ಹಣ ಹೊಂದಿಸಲು ಹರಸಾಹಸ ಪಡುತ್ತಿದೆ. ಈ ನಡುವೆ, ಸರಕಾರ ಲೋಕಸಭಾ ಚುನಾವಣೆಯ ಬಳಿಕ ಬಿದ್ದುಹೋಗುವುದು ನಿಶ್ಚಿತ. ಸ್ವಲ್ಪ ದಿನ ಕಾಯಿರಿ, ರಾಜ್ಯದ 6.5 ಕೋಟಿ ಜನರ ಕಷ್ಟ ಸ್ಪಂದಿಸುವ ಸರಕಾರ ಬರಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಅಕ್ಕಿಹೆಬ್ಬಾಳು ಹೋಬಳಿಯ ಬೆಳತೂರು ಗ್ರಾಮದಲ್ಲಿ ನಿರ್ಮಿಸಿರುವ ಕೋಟೆ ರಂಗನಾಥಸ್ವಾಮಿ ವಿಮಾನ ಗೋಪುರ ಮತ್ತು ಗರುಡಗಂಭ ಪ್ರತಿಷ್ಠಾಪನಾ ಮತ್ತು ಮಹಾ ಕುಂಭಾಭಿಷೇಕ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಅವರು ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ”ಇವರಿಗೆ ಗ್ಯಾರಂಟಿಗಳ ಬಗ್ಗೆ ಇರುವ ಚಿಂತೆ ಜನಸಾಮಾನ್ಯರ ಮೇಲೆ ಇಲ್ಲ. ಇದೇ ರೀತಿ ಮುಂದುವರಿಯುತ್ತಾ ಹೋದರೆ ಮುಂದಿನ ದಿನಗಳಲ್ಲಿ ಸರಕಾರಿ ನೌಕರರಿಗೆ ವೇತನ ನೀಡಲೂ ಹಣವಿರುವುದಿಲ್ಲ,” ಎಂದು ಹೆಚ್. ಡಿ. ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.

ಇದನ್ನೂ ಓದಿ: ಫೇಸ್ ಬುಕ್ನಲ್ಲಿ ಭದ್ರಾವತಿ ಶಾಸಕನ ವಿರುದ್ಧ ಪೋಸ್ಟ್ – BJP ಕಾರ್ಯಕರ್ತನ ಕಾರು ಪುಡಿಪುಡಿ

Leave A Reply