Home latest Yuvanidhi Scheme: ಇವರಿಗೆ ಸಿಗಲ್ಲ ‘ಯುವನಿಧಿ ಯೋಜನೆ’ – ಕೊನೇ ಕ್ಷಣದಲ್ಲಿ ಹೊಸ ಟ್ವಿಸ್ಟ್ ಇಟ್ಟ...

Yuvanidhi Scheme: ಇವರಿಗೆ ಸಿಗಲ್ಲ ‘ಯುವನಿಧಿ ಯೋಜನೆ’ – ಕೊನೇ ಕ್ಷಣದಲ್ಲಿ ಹೊಸ ಟ್ವಿಸ್ಟ್ ಇಟ್ಟ ಸರ್ಕಾರ

Hindu neighbor gifts plot of land

Hindu neighbour gifts land to Muslim journalist

Yuvanidhi Scheme: ರಾಜ್ಯ ಸರ್ಕಾರವು ಐದು ಗ್ಯಾರಂಟಿಗಳ ಪೈಕಿ, ಇದೀಗ 5 ನೇ ಗ್ಯಾರಂಟಿ ಯೋಜನೆಯಾದ ಯುವನಿಧಿ (Yuvanidhi Scheme) ಮುಹೂರ್ತ ಫಿಕ್ಸ್ ಆಗಿದ್ದು, ಜನವರಿಯಲ್ಲಿ ಚಾಲನೆ ನೀಡಲಾಗುತ್ತಿದೆ.

ಸದ್ಯ ಯುವನಿಧಿ ಯೋಜನೆ ಪ್ರಯೋಜನ ಪಡೆಯಲು ಆಧಾರ್ ಕಾರ್ಡ್, 10ನೇ ತರಗತಿ ಅಂಕಪಟ್ಟಿ, ದ್ವಿತೀಯ ಪಿಯುಸಿ ಅಂಕಪಟ್ಟಿ, ಪದವಿ ಅಂಕಪಟ್ಟಿ ಮತ್ತು ಪ್ರಮಾಣಪತ್ರ, ಡಿಪ್ಲೊಮಾ ಪ್ರಮಾಣಪತ್ರ, ಜಾತಿ ಪ್ರಮಾಣ ಪತ್ರ (ಅನ್ವಯವಾದಲ್ಲಿ) ಆದಾಯ ಪ್ರಮಾಣಪತ್ರ, ಮೊಬೈಲ್ ನಂಬರ್, ಬ್ಯಾಂಕ್ ಖಾತೆ ವಿವರಗಳು, ಮೊಬೈಲ್ ಸಂಖ್ಯೆ, ಇ-ಮೇಲ್ ಐಡಿ, ಭಾವಚಿತ್ರ, ಸ್ವಯಂ
ಘೋಷಣಾ ಪ್ರತಿಗಳು ಜೊತೆಗೆ ಅರ್ಜಿ ಸಲ್ಲಿಸಲು ಬೇಕು.

ಮುಖ್ಯವಾಗಿ ಒಮ್ಮೆ ಫಲಾನುಭವಿಗಳಾಗಿ ಆಯ್ಕೆಯಾಗುವ ಯುವ ಜನತೆಗೆ 2 ವರ್ಷಗಳ ಅವಧಿವರೆಗೆ ಭತ್ಯೆಯನ್ನು ಪಡೆದುಕೊಳ್ಳಬಹುದಾಗಿದೆ.

ಅರ್ಹತೆಗಳು:
ಮುಖ್ಯವಾಗಿ ಅರ್ಜಿ ಸಲ್ಲಿಸುವವರು ಕರ್ನಾಟಕದ ನಿವಾಸಿಯಾಗಿರಬೇಕು. ಪದವೀಧರರಿಗೆ ಮಾಸಿಕ 3 ಸಾವಿರ ಹಾಗೂ ಡಿಪ್ಲೊಮಾ ಪದವೀಧರರಿಗೆ ಮಾಸಿಕ 1500 ರೂಪಾಯಿ ಕೊಡಲಾಗುತ್ತದೆ. ಆದರೆ, ಎರಡು ವರ್ಷಗಳ ಅವಧಿಯೊಳಗೆ ಅವರಿಗೆ ಕೆಲಸ ಸಿಕ್ಕರೆ, ತಕ್ಷಣವೇ ಈ ಭತ್ಯೆಯನ್ನು ನಿಲ್ಲಿಸಲಾಗುತ್ತದೆ. ಇನ್ನು ಅರ್ಜಿದಾರರು 2022-2023 ಸಾಲಿನಲ್ಲಿ ಪದವಿ ಡಿಪ್ಲೊಮಾದಲ್ಲಿ ಅಥವಾ ಉತ್ತೀರ್ಣರಾಗಿರಬೇಕು. ಪದವಿ ಅಥವಾ ಡಿಪ್ಲೊಮಾಗೆ ತೇರ್ಗಡೆಯಾದ ದಿನಾಂಕದ ನಂತರ ಕನಿಷ್ಠ 180 ದಿನಗಳವರೆಗೆ ನಿರುದ್ಯೋಗಿಯಾಗಿರಬೇಕು.

ಒಂದು ವೇಳೆ 2022-2023 ರ ಸಾಲಿಗಿಂತ ಮುಂಚೆ ತೇರ್ಗಡೆಯಾಗಿ ಉದ್ಯೋಗ ಹುಡುಕುತ್ತಿರುವವರಿಗೆ, ಪದವಿ ಅಥವಾ ಡಿಪ್ಲೊಮಾ ಉತ್ತೀರ್ಣರಾದ ನಂತರ ಉನ್ನತ ಶಿಕ್ಷಣಕ್ಕೆ ಸೇರ್ಪಡೆಯಾಗುವವರಿಗೆ, ಅಪ್ರೆಂಟಿಸ್‌ ವೇತನದ ಫಲಾನುಭವಿಗಳಿಗೆ ಸರ್ಕಾರಿ ಅಥವಾ ಖಾಸಗಿ ವಲಯದಲ್ಲಿ ಉದ್ಯೋಗದಲ್ಲಿರುವವರಿಗೆ, ಸ್ವಯಂ ಉದ್ಯೋಗಿಗಳಾಗಿರುವವರಿಗೆ, ಸರ್ಕಾರದ ಇತರೆ ಆರ್ಥಿಕ ನೆರವು ಯೋಜನೆಯ ಫಲಾನುಭವಿಗಳಾಗಿರುವವರಿಗೆ ಈ ಯೋಜನೆ ಸೌಲಭ್ಯ ಸಿಗುವುದಿಲ್ಲ.

ಇದನ್ನೂ ಓದಿ: ಮೊಬೈಲ್ ಬ್ಯಾಟರಿ ಬೇಗ ಖಾಲಿ ಆಗ್ತಿದಿಯಾ?! ಈ ಟಿಪ್ಸ್ ಯೂಸ್ ಮಾಡಿದ್ರೆ ದಿನಗಟ್ಟಲೆ ಬಳಸ್ಬೋದು