Home Entertainment Actress Leelavathi Grandson: ಲೀಲಾವತಿ ಅಂತಿಮ ದರ್ಶನಕ್ಕೆ ಕೊನೆಗೂ ಬಂದ್ರು ಸೊಸೆ- ಮೊಮ್ಮಗ !! ಇದೇನಾ...

Actress Leelavathi Grandson: ಲೀಲಾವತಿ ಅಂತಿಮ ದರ್ಶನಕ್ಕೆ ಕೊನೆಗೂ ಬಂದ್ರು ಸೊಸೆ- ಮೊಮ್ಮಗ !! ಇದೇನಾ ವಿನೋದ್ ರಾಜ್ ಸಂಸಾರ?!

Actress Leelavathi Grandson

Hindu neighbor gifts plot of land

Hindu neighbour gifts land to Muslim journalist

Actress Leelavathi Grandson: ಕನ್ನಡ ಚಿತ್ರರಂಗದ (Sandalwood) ಹಿರಿಯ ನಟಿ ಲೀಲಾವತಿ (Leelavathi) ಅವರು ವಯೋಸಹಜ ಸಮಸ್ಯೆಗಳಿಂದ ಬಳಲುತ್ತಾ ಸಂಪೂರ್ಣವಾಗಿ ಹಾಸಿಗೆ ಹಿಡಿದಿದ್ದರು.ಹಿರಿಯ ನಟಿ ಲೀಲಾವತಿ ಡಿಸೆಂಬರ್‌ 8 ರಂದು ಶುಕ್ರವಾರ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. ಅಪಾರ ಅಭಿಮಾನಿಗಳನ್ನು ಆಗಲಿರುವ ನಟಿಯ ಅಂತಿಮ ದರ್ಶನಕ್ಕೆ ಚೆನೈನಿಂದ ಮೊಮ್ಮಗ ಯುವರಾಜ್‌ ಮತ್ತು ಸೊಸೆ ಅನು ಬೆಂಗಳೂರಿಗೆ ಬಂದಿದ್ದು, ಅಂತಿಮ ವಿಧಿವಿಧಾನಗಳಲ್ಲಿ ಭಾಗಿಯಾಗಿದ್ದಾರೆ.

ಲೀಲಾವತಿ ದಕ್ಷಿಣ ಭಾರತದ ನಟಿಯಾಗಿ ಗುರುತಿಸಿಕೊಂಡಿದ್ದರು. ಕನ್ನಡದಲ್ಲಿ ಪ್ರಧಾನವಾಗಿ ನಟಿಸುವುದರೊಂದಿಗೆ ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳ ಸುಮಾರು 600 ಚಿತ್ರಗಳಲ್ಲಿ ನಟಿಸಿದ್ದಾರೆ. ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ನಟಿ ಲೀಲಾವತಿ ಅವರಿಗೆ 85ವರ್ಷ ವಯಸ್ಸಾಗಿತ್ತು. ಇಂದು ಬೆಳಗ್ಗೆಯಿಂದ ನೆಲಮಂಗದಲ್ಲಿ ಲೀಲಾವತಿ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಮಧ್ಯಾಹ್ನ 3.30ಕ್ಕೆ ಅಂತ್ಯ ಸಂಸ್ಕಾರ ನೆರವೇರಲಿದೆ. ಲೀಲಾವತಿ ಅವರ ಅಂತಿಮ ದರ್ಶನ ಪಡೆಯಲು ಚೆನ್ನೈನಿಂದ ಲೀಲಾವತಿ ಅವರ ಸೊಸೆಯಾದ ವಿನೋದ್ ರಾಜ್ ಅವರ ಪತ್ನಿ ಅನು ಮತ್ತು ಲೀಲಾವತಿ ಮೊಮ್ಮಗ (Actress Leelavathi Grandson) ಯುವರಾಜ್ ಆಗಮಿಸಿದ್ದಾರೆ.

ಕೆಲವು ತಿಂಗಳ ಹಿಂದೆ ವಿನೋದ್ ರಾಜ್ ಅವರ ಮದುವೆ ವಿಷಯ ಭಾರೀ ಚರ್ಚೆಗೆ ಕಾರಣವಾಗಿತ್ತು. ಲೀಲಾವತಿ ಅವರಿಗೆ ಇಲ್ಲಿಯವರೆಗೆ ಯಾಕೆ ಮಗನ ಮದುವೆ ವಿಚಾರ ಮುಚ್ಚಿಟ್ಟಿದ್ದೀರಿ ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು. ಇದಕ್ಕೆ ಲೀಲಾವತಿ ಅವರು ಪ್ರತಿಕ್ರಿಯೆ ನೀಡಿದ್ದು, ನನ್ನ ಮಗನ ಮದುವೆಯಾಗಿದ್ದು ನಿಜ!! ಅದರಲ್ಲಿ ಮುಚ್ಚಿಡುವಂತಹದ್ದು ಏನೂ ಇಲ್ಲ. ಯಾವ ತಾಯಿಯೂ ತನ್ನ ಮಕ್ಕಳ ಭವಿಷ್ಯ ಚೆನ್ನಾಗಿರಲಿ ಎಂದು ಬಯಸುತ್ತಾಳೆ. ಆದರೆ, ನನ್ನ ಹತ್ತಿರ ದುಡ್ಡು ಇರದ ಹಿನ್ನೆಲೆ ಸರಳವಾಗಿ ಮದುವೆ ನಡೆದಿದೆ. ತಿರುಪತಿ ಬೆಟ್ಟದ ಮೇಲೆ ನನ್ನ ಮಗನ ಮದುವೆ ನಡೆದಿದ್ದು, ಮಗ ಪವಿತ್ರವಾಗಿದ್ದಾನೆ. ಒಳ್ಳೆಯ ಮಗನಾಗಿದ್ದಾನೆ. ತಿರುಪತಿ ಬೆಟ್ಟದ ಮೇಲೆ ಮದುವೆ ಮಾಡಿಸಿದ್ದೇನೆ. ಎಲ್ಲರಿಗೂ ಗೊತ್ತಾಗಿ ಕೊಂಕು ಮಾತನ್ನು ಕೇಳುವ ಬದಲಿಗೆ, ಪರಿಶುದ್ಧವಾದ ಜಾಗದಲ್ಲಿ ಮದುವೆ ಮಾಡಿಸಿದ್ದೇನೆ. ಕೇವಲ ಏಳೇ ಜನ ಕನ್ನಡಿಗರು ಈ ಮದುವೆಯಲ್ಲಿ ಭಾಗವಹಿಸಿದ್ದರು ಎಂದು ಹೇಳಿಕೊಂಡಿದ್ದರು. ಸೊಸೆ ಮೊಮ್ಮಕ್ಕಳು ಚಿನ್ನದ ಹಾಗಿದ್ದಾರೆ ಎಂದು ನಟಿ ಲೀಲಾವತಿ ಈ ಹಿಂದೆ ಹೇಳಿದ್ದರು.

ಇದನ್ನೂ ಓದಿ: ಲೀಲಾವತಿ ಹಿಂದೂ ಅಲ್ಲ ಕ್ರಿಶ್ಚಿಯನ್, ಲೀನಾ ಸಿಕ್ವೇರಾ ಲೀಲಾವತಿ ಆದ ಕಥೆ !ಸೈಕಲ್ ಏರಿದ್ದಕ್ಕೆ ಹೊಡೆದ್ರು, ಹಾಗಾದ್ರೆ ಸಿನಿಮಾ ಸೇರಲು ಹೇಗೆ ಬಿಟ್ರು ?