Lok Sabha: ಬಿಜೆಪಿಯ ಈ ಸಂಸದರಿಗೆ ಮನೆ ಖಾಲಿ ಮಾಡುವಂತೆ ಬಂತು ನೋಟಿಸ್- ಯಾಕಾಗಿ, ಸಂಸದರು ಮಾಡಿದ್ದಾದ್ರೂ ಏನು?
Lok sabha awas samiti send notice to All bjp mps to vacate government bungalow
Lok Sabha: ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನದಲ್ಲಿ ಶಾಸಕರ ಚುನಾವಣೆಯಲ್ಲಿ(Lok Sabha)ಗೆದ್ದ ಬಳಿಕ ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಬಿಜೆಪಿ ಸಂಸದರಿಗೆ ದೆಹಲಿಯಲ್ಲಿರುವ ತಮ್ಮ ಅಧಿಕೃತ ನಿವಾಸಗಳನ್ನು ಖಾಲಿ ಮಾಡುವಂತೆ ಸೂಚಿಸಿ ನೋಟಿಸ್ ನೀಡಲಾಗಿದೆ.
ದೇಶದ ರಾಜಧಾನಿ ದೆಹಲಿಯ ಲುಟ್ಯೆನ್ಸ್ ವಲಯದಲ್ಲಿ 6 ರಿಂದ ಟೈಪ್ 8 ರವರೆಗಿನ ಸರ್ಕಾರಿ ಬಂಗಲೆಗಳನ್ನು ಸಂಸದರು, ಕೇಂದ್ರ ಸಚಿವರು ಮತ್ತು ರಾಜ್ಯ ಸಚಿವರಿಗೆ ನಿಗದಿಪಡಿಸಲಾಗಿದೆ. ಯಾವ ಸಂಸದರಿಗೆ ಯಾವ ರೀತಿಯ ಬಂಗಲೆ ಸಿಗುತ್ತದೆ ಎಂಬುದು ಅವರ ಹಿರಿತನದ ಮೇಲೆ ಅವಲಂಬಿತವಾಗಿದೆ. ಸಂಸದರು ರಾಜೀನಾಮೆ ನೀಡಿದರೆ ನೋಟಿಸ್ ಬಂದ 30 ದಿನದೊಳಗೆ ಬಂಗಲೆ ಖಾಲಿ ಮಾಡಬೇಕು ಎಂಬ ನಿಯಮವಿದೆ. ಆದರೆ, 30 ದಿನಗಳ ಸೂಚನೆಯ ಬಳಿಕ ಸಂಬಂಧಪಟ್ಟ ಜನಪ್ರತಿನಿಧಿಗಳು ಆ ಬಂಗಲೆಯಲ್ಲಿ ಕೆಲ ಸಮಯ ಉಳಿದುಕೊಳ್ಳಬಹುದು. ಆದರೆ, ಇದಕ್ಕಾಗಿ ಅವರು ಮಾರುಕಟ್ಟೆ ಬೆಲೆಯ ದರದಲ್ಲಿ ಬಾಡಿಗೆ ನೀಡಬೇಕಾಗುತ್ತದೆ.
ಈ ನಡುವೆ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೇಂದ್ರ ಸಚಿವರಾದ ನರೇಂದ್ರ ಸಿಂಗ್ ತೋಮರ್, ಪ್ರಹ್ಲಾದ್ ಸಿಂಗ್ ಪಟೇಲ್ ಮತ್ತು ರೇಣುಕಾ ಸಿಂಗ್ ಅವರ ರಾಜೀನಾಮೆಯನ್ನು ಕಳೆದ ಗುರುವಾರ ತಡರಾತ್ರಿ ಅಂಗೀಕರಿಸಿದ್ದಾರೆ. ಮೂಲಗಳ ಮಾಹಿತಿ ಅನುಸಾರ, ಬಿಜೆಪಿ ಸಂಸದ ಸಿ.ಆರ್. ಪಾಟೀಲ್ ನೇತೃತ್ವದ ಲೋಕಸಭೆಯ ವಸತಿ ಸಮಿತಿಯು ಮಾಜಿ ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್, ಮಾಜಿ ಕೇಂದ್ರ ಸಚಿವ ಪ್ರಹ್ಲಾದ್ ಪಟೇಲ್ ಮತ್ತು ಮಾಜಿ ಕೇಂದ್ರ ಸಚಿವ ರೇಣುಕಾ ಸಿಂಗ್ ಒಳಗೊಂಡಂತೆ ಸಂಸತ್ತಿಗೆ ರಾಜೀನಾಮೆ ನೀಡಿದ ಎಲ್ಲಾ ಸಂಸದರಿಗೆ ದೆಹಲಿಯಲ್ಲಿರುವ ಸರ್ಕಾರಿ ಮನೆಗಳನ್ನು ಖಾಲಿ ಮಾಡುವಂತೆ ನೋಟಿಸ್ ನೀಡಲಾಗಿದೆ.
ಇದನ್ನು ಓದಿ: Fighter Teaser: ರಿಲೀಸ್ ಆಗೇಬಿಡ್ತು ‘ಫೈಟರ್’ ಟೀಸರ್ – ಹೃತಿಕ್ ಗಿಂತಲೂ ದೀಪಿಕಾ ಪಡುಕೋಣೆ ಮೇಲೆ ಕಣ್ಣಿಟ್ಟ ಫ್ಯಾನ್ಸ್ !!
ನಿಯಮಾನುಸಾರ 30 ದಿನಗಳೊಳಗೆ ಸರ್ಕಾರಿ ವಸತಿ ಗೃಹಗಳನ್ನು ಖಾಲಿ ಮಾಡುವಂತೆ ಲೋಕಸಭೆಯ ವಸತಿ ಸಮಿತಿ ಅವರಿಗೆ ನೋಟಿಸ್ ನೀಡಿದೆ. ಮೂವರು ಮಾಜಿ ಕೇಂದ್ರ ಸಚಿವರ ಜೊತೆಗೆ ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ರಾವ್ ಉದಯ್ ಪ್ರತಾಪ್, ರಾಕೇಶ್ ಸಿಂಗ್, ರೀತಿ ಪಾಠಕ್, ರಾಜ್ಯವರ್ಧನ್ ಸಿಂಗ್ ರಾಥೋಡ್, ದಿಯಾ ಕುಮಾರಿ, ಮಹಂತ್ ಬಾಲಕನಾಥ್, ಅರುಣ್ ಸಾವೊ ಮತ್ತು ಗೋಮತಿ ಸಾಯಿ ಅವರಿಗೂ ಸರ್ಕಾರಿ ನಿವಾಸವನ್ನು ಖಾಲಿ ಮಾಡುವಂತೆ ನೋಟಿಸ್ ನೀಡಲಾಗಿದೆ.